ಎಬಿಡಿ ಅವರು ಡೇನಿಯಲ್ ಅವರನ್ನು 2013ರಲ್ಲಿ ವಿವಾಹವಾಗಿದ್ದು, ಮೊದಲ ಪುತ್ರ ಅಬ್ರಾಹಂ ಡಿವಿಲಿಯರ್ಸ್'ಗೆ ಈಗ 2 ವರ್ಷ

ಜೋಹಾನ್ಸ್'ಬರ್ಗ್(ಜು.21): ದಕ್ಷಿಣ ಆಫ್ರಿಕಾ ತಂಡದ ಸೀಮಿತ ಓವರ್'ಗಳ ನಾಯಕ ಹಾಗೂ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಕುಟುಂಬಕ್ಕೆ ಮತ್ತೊಬ್ಬ ಹೊಸಬನ ಪ್ರವೇಶವಾಗಿದೆ. ಆತ ಮತ್ತಿನ್ಯಾರು ಅಲ್ಲ ಎರಡನೇ ಮಗ. ಪತ್ನಿ ಡೇನಿಯಲ್ ಎರಡನೇ ಮಗ ಜಾನ್ ಅವರಿಗೆ ಜು.17ರಂದು ಜನ್ಮ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಗ್ಲೆಂಡ್'ನ ಚಾಂಪಿಯನ್ಸ್ ಟ್ರೋಫಿ'ಯಿಂದ ಜೋಹನ್ಸ್'ಬರ್ಗ್'ಗೆ ವಾಪಸಾದ ನಂತರ ಇನ್ಸ್ಟ್'ಗ್ರಾಮ್'ನಲ್ಲಿ ಎರಡನೇ ಮಗ ಹಾಗೂ ಮತ್ತೊಬ್ಬ ಪುತ್ರ ಹಾಗೂ ಪತ್ನಿಯೊಂದಿಗಿದ್ದ ಫೋಟೊವನ್ನು ಪೋಸ್ಟ್ ಮಾಡಿದ್ದು, ನಮ್ಮ ಕುಟುಂಬಕ್ಕೆ ಮತ್ತೊಬ್ಬ ಮಗನನ್ನು ಕರುಣಿಸಿದ್ದಕ್ಕೆ ನಾನು ದೇವರನ್ನು ಮನಿಸುತ್ತೇನೆ. ತಾಯಿ ಮಗು ಇಬ್ಬರು ಆರೋಗ್ಯದಿಂದ್ದಾರೆ. ನನ್ನ ಪತ್ನಿ ಅತ್ಯಂತ ಅದ್ಭುತ ಮಹಿಳೆ ಜಾನ್'ಗೆ ಜನ್ಮ ನೀಡುವುದರ ಮೂಲಕ ಮತ್ತೊಮ್ಮೆ ಧೈರ್ಯ ಹಾಗೂ ಶಕ್ತಿಯನ್ನು ತೋರಿದ್ದಾಳೆ'ಎಂದು ಪೋಸ್ಟ್'ನಲ್ಲಿ ತಿಳಿಸಿದ್ದಾರೆ.

ಎಬಿಡಿ ಅವರು ಡೇನಿಯಲ್ ಅವರನ್ನು 2013ರಲ್ಲಿ ವಿವಾಹವಾಗಿದ್ದು, ಮೊದಲ ಪುತ್ರ ಅಬ್ರಾಹಂ ಡಿವಿಲಿಯರ್ಸ್'ಗೆ ಈಗ 2 ವರ್ಷ. 2019ರಲ್ಲಿ ನಡೆಯುವ ವಿಶ್ವಕಪ್' ಜಯಿಸುವ ಕಾರಣಕ್ಕಾಗಿ ಟೆಸ್ಟ್'ನಲ್ಲಿ ಹೆಚ್ಚು ಆಸಕ್ತಿ ತೋರದೆ ಸೀಮಿತ ಓವರ್'ಗಳ ಪಂದ್ಯಗಳಿಗೆ ಮಾತ್ರ ಹೆಚ್ಚು ಕ್ರಿಯಶೀಲರಾಗಿದ್ದಾರೆ.