ಮೊದಲ 3 ಮೂರು ಪಂದ್ಯಗಳಿಂದ ಎಬಿಡಿ ಔಟ್..!

sports | Wednesday, January 31st, 2018
Suvarna Web Desk
Highlights

ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ವರ್ಷದ ಏಕದಿನ ಕ್ರಿಕೆಟಿಗ ಎನ್ನುವ ಗೌರವಕ್ಕೆ ಪಾತ್ರರಾಗಿದ್ದ ಎಬಿಡಿ, ಭಾರತ ವಿರುದ್ಧದ ಮೊದಲ 3 ಪಂದ್ಯಗಳಿಂದ ಹೊರಬಿದ್ದಿರುವ ಆಫ್ರಿಕಾ ತಂಡಕ್ಕೆ ದೊಡ್ಡ ಆಘಾತವೆನಿಸಿದೆ. ಎಬಿಡಿ ಭಾರತ ವಿರುದ್ದ 52ರ ಸರಾಸರಿಯಲ್ಲಿ 1295 ರನ್ ಬಾರಿಸಿದ್ದಾರೆ. ಇದರಲ್ಲಿ 6 ಶತಕಗಳು ಒಳಗೊಂಡಿವೆ. ಇನ್ನು ಭಾರತ ವಿರುದ್ಧ ಇತ್ತೀಚೆಗಷ್ಟೇ ಮುಕ್ತಾಯವಾದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಫ್ರಿಕಾ ಪರ(211 ರನ್) ಗರಿಷ್ಠ ರನ್ ದಾಖಲಿಸಿದ ಆಟಗಾರ ಕೂಡ ಎನಿಸಿದ್ದಾರೆ.

ಡರ್ಬನ್(ಜ.31): ಭಾರತ ವಿರುದ್ಧ 6 ಪಂದ್ಯಗಳ ಏಕದಿನ ಸರಣಿ ಆರಂಭಕ್ಕೂ ಮೊದಲೇ ದಕ್ಷಿಣ ಆಫ್ರಿಕಾಕ್ಕೆ ಹಿನ್ನಡೆ ಉಂಟಾಗಿದೆ. ಕೈಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್‌ ಮೊದಲ 3 ಏಕದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಫೆ.1ಕ್ಕೆ ಇಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಫೆ.4ರಂದು ಸೆಂಚೂರಿಯನ್, ಫೆ.7ರಂದು ಕೇಪ್‌'ಟೌನ್‌'ನಲ್ಲಿ ಕ್ರಮವಾಗಿ 2 ಹಾಗೂ 3ನೇ ಪಂದ್ಯ ನಡೆಯಲಿದೆ. ಭಾರತ ವಿರುದ್ಧ 3ನೇ ಟೆಸ್ಟ್ ವೇಳೆ ಬಲ ತೋರು ಬೆರಳಿನ ಗಾಯಕ್ಕೆ ತುತ್ತಾದ ಎಬಿಡಿಗೆ 2 ವಾರಗಳ ವಿಶ್ರಾಂತಿ ಸೂಚಿಸಲಾಗಿದೆ. 4ನೇ ಪಂದ್ಯದ ವೇಳೆ ಡಿವಿಲಿಯರ್ಸ್‌ ಚೇತರಿಸಿಕೊಳ್ಳಲಿದ್ದು, ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ದ.ಆಫ್ರಿಕಾ ಕ್ರಿಕೆಟ್ ಹೇಳಿದೆ.

ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ವರ್ಷದ ಏಕದಿನ ಕ್ರಿಕೆಟಿಗ ಎನ್ನುವ ಗೌರವಕ್ಕೆ ಪಾತ್ರರಾಗಿದ್ದ ಎಬಿಡಿ, ಭಾರತ ವಿರುದ್ಧದ ಮೊದಲ 3 ಪಂದ್ಯಗಳಿಂದ ಹೊರಬಿದ್ದಿರುವ ಆಫ್ರಿಕಾ ತಂಡಕ್ಕೆ ದೊಡ್ಡ ಆಘಾತವೆನಿಸಿದೆ. ಎಬಿಡಿ ಭಾರತ ವಿರುದ್ದ 52ರ ಸರಾಸರಿಯಲ್ಲಿ 1295 ರನ್ ಬಾರಿಸಿದ್ದಾರೆ. ಇದರಲ್ಲಿ 6 ಶತಕಗಳು ಒಳಗೊಂಡಿವೆ. ಇನ್ನು ಭಾರತ ವಿರುದ್ಧ ಇತ್ತೀಚೆಗಷ್ಟೇ ಮುಕ್ತಾಯವಾದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಫ್ರಿಕಾ ಪರ(211 ರನ್) ಗರಿಷ್ಠ ರನ್ ದಾಖಲಿಸಿದ ಆಟಗಾರ ಕೂಡ ಎನಿಸಿದ್ದಾರೆ.

Comments 0
Add Comment

  Related Posts

  Rahul Gandhi Admires Vajpayee Slams Modi

  video | Wednesday, March 21st, 2018

  Election War Modi Vs Siddu

  video | Thursday, March 15th, 2018

  BSY Vs Siddaramaiah

  video | Tuesday, February 27th, 2018

  Tiger Vs Elephant

  video | Thursday, February 15th, 2018

  Rahul Gandhi Admires Vajpayee Slams Modi

  video | Wednesday, March 21st, 2018
  Suvarna Web Desk