ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ವಿಲಿಯರ್ಸ್‌ ಒಂದು ಹಂತದಲ್ಲಿ 28 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ಆದರೆ ಎದುರಿಸಿದ ಕೊನೆ 18 ಎಸೆತಗಳಲ್ಲಿ 58 ರನ್ ಸಿಡಿಸಿ ಆರ್'ಸಿಬಿ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
ಇಂದೋರ್(ಏ.10): ಮೊದಲೆರಡು ಪಂದ್ಯಗಳಲ್ಲಿ ಎಬಿ ಡಿ ವಿಲಿಯರ್ಸ್ ಬ್ಯಾಟಿಂಗ್ ಸೊಬಗನ್ನು ಕಣ್ತುಂಬಿಕೊಳ್ಳುವ ಮಿಸ್ ಮಾಡಿಕೊಂಡ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣವನ್ನೇ ಇಂದು ಉಣಬಡಿಸಿದರು.
ಇಂದೋರ್'ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಐಪಿಎಲ್ 10ನೇ ಆವೃತ್ತಿಯ 8ನೇ ಪಂದ್ಯದಲ್ಲಿ ವಿಲಿಯರ್ಸ್ ಕಣಕ್ಕಿಳಿದರು. ಆರಂಭಿಕ ಆಘಾತದಿಂದ ತತ್ತರಿಸಿ ಹೋಗಿದ್ದ ಆರ್ಸಿಬಿಗೆ ಎಬಿಡಿ (89) ಆಸರೆಯಾದರು. ಕೊನೆವರೆಗೂ ವಿಕೆಟ್ ಕಾಪಾಡಿಕೊಂಡ ದಕ್ಷಿಣ ಆಫ್ರಿಕಾದ ಪ್ರಚಂಡ ಬ್ಯಾಟ್ಸ್ಮನ್ ಕಿಂಗ್ಸ್ ಇಲೆವೆನ್ ವೇಗಿಗಳನ್ನು ಮನಬಂದಂತೆ ದಂಡಿಸಿದರು. ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದ ವಿಲಿಯರ್ಸ್ ಒಂದು ಹಂತದಲ್ಲಿ 28 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ಆದರೆ ಎದುರಿಸಿದ ಕೊನೆ 18 ಎಸೆತಗಳಲ್ಲಿ 58 ರನ್ ಸಿಡಿಸಿ ಆರ್'ಸಿಬಿ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
ಅಂದಹಾಗೇ ಐಪಿಎಲ್'ನಲ್ಲಿ ಎಬಿಡಿಗಿದು 22ನೇ ಅರ್ಧಶತಕ.
ಕೈತಪ್ಪಿತು ಶತಕದ ಅವಕಾಶ! :
2ನೇ ಓವರ್'ನ ಆರಂಭದಲ್ಲೇ ಕ್ರೀಸ್ಗಿಳಿದು ಇನ್ನಿಂಗ್ಸ್ ಮುಕ್ತಾಯದ ವರೆಗೂ ವಿಕೆಟ್ ಕಾಪಾಡಿಕೊಂಡರೂ ವಿಲಿಯರ್ಸ್ಗೆ ಎದುರಿಸಲು ಸಿಕ್ಕಿದ್ದು ಕೇವಲ 46 ಎಸೆತಗಳು ಮಾತ್ರ. ಒಂದು ವೇಳೆ ಅವರಿಗೆ ಹೆಚ್ಚು ಸ್ಟ್ರೈಕ್ ಸಿಕ್ಕಿದ್ದರೆ ಆರ್'ಸಿಬಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿತ್ತು. ಅಷ್ಟೇ ಅಲ್ಲ, ಅವರಿಂದ ಐಪಿಎಲ್ನಲ್ಲಿ 4ನೇ ಶತಕ ದಾಖಲಾಗಿದ್ದರೂ ಆಶ್ಚರ್ಯವಿರುತ್ತಿರಲಿಲ್ಲ.
