ಹರಾರೆ(ಜು.03): ಜಿಂಬಾಬ್ವೆ, ಪಾಕಿಸ್ತಾನ ವಿರುದ್ಧದ ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ದಾಖಲೆಯ ಗೆಲುವು ಸಾಧಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ನಾಯಕ ಆರೋನ್ ಫಿಂಚ್ ದಾಖಲೆ ಬ್ಯಾಟಿಂಗ್ ಪ್ರದರ್ಶನ ಮೂಲಕ 100 ರನ್‌ಗಳ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾಗೆ ಆರೋನ್ ಫಿಂಚ್ ಹಾಗೂ ಡಾರ್ಕಿ ಶಾರ್ಟ್ ಅತ್ಯುತ್ತಮ ಆರಂಭ ನೀಡಿದರು. ಡಾರ್ಕಿ ಶಾರ್ಟ್ 46 ರನ್ ಸಿಡಿಸಿ ಔಟಾದರೆ, ಫಿಂಚ್ ಭರ್ಜರಿ ಶತರ ಸಿಡಿಸಿದರು.

ಸೆಂಚುರಿ ಬಳಿಕವೂ ಫಿಂಚ್ ಆರ್ಭಟ ಮುಂದುವರಿಯಿತು. 76 ಎಸೆತದಲ್ಲಿ 16 ಬೌಂಡರಿ ಹಾಗೂ 10  ಸಿಕ್ಸರ್ ನೆರವಿನಿಂದ ವಿಶ್ವದಾಖಲೆಯ 172 ರನ್ ಸಿಡಿಸಿದರು.  ಈ ಮೂಲಕ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 229 ರನ್ ಸಿಡಿಸಿತು.

230 ರನ್ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ನಿಗಧಿತ 20 ಓವರ್‌ಗಳಲ್ಲಿ 9ವಿಕೆಟ್ ನಷ್ಟಕ್ಕೆ 129 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯಾದ ಆಂಡ್ರೂ ಟೈ 3 ಹಾಗೂ ಆಸ್ಟನ್ ಅಗರ್ 2 ವಿಕೆಟ್ ಕಬಳಿಸಿ ಮಿಂಚಿದರು. ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು. ಈ ಮೂಲಕ ಸತತ 2 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದೆ.