Asianet Suvarna News Asianet Suvarna News

ಫಿಂಚ್-ಮಾರ್ಶ್ ಶತಕ; ಇಂಗ್ಲೆಂಡ್’ಗೆ 311 ಟಾರ್ಗೆಟ್

ಆರಂಭಿಕ ಆ್ಯರೋನ್ ಫಿಂಚ್[100], ಶಾನ್ ಮಾರ್ಶ್[101] ಹಾಗೂ ತ್ರಾವೀಸ್ ಹೆಡ್[63] ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 310 ರನ್’ಗಳ ಬೃಹತ್ ಮೊತ್ತ ಕಲೆಹಾಕಿದೆ.

Aaron Finch and Shaun Marsh hit tons as Australia post 310

ಚೇಸ್ಟರ್ ಲೇ ಸ್ಟ್ರೀಟ್[ಜೂ.21]: ಆರಂಭಿಕ ಆ್ಯರೋನ್ ಫಿಂಚ್[100], ಶಾನ್ ಮಾರ್ಶ್[101] ಹಾಗೂ ತ್ರಾವೀಸ್ ಹೆಡ್[63] ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 310 ರನ್’ಗಳ ಬೃಹತ್ ಮೊತ್ತ ಕಲೆಹಾಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಫಿಂಚ್-ಹೆಡ್ ಜೋಡಿ 101ರನ್’ಗಳ ಜತೆಯಾಟವಾಡಿತು. ಹೆಡ್ 64 ಎಸೆತಗಳಲ್ಲಿ 63 ರನ್ ಸಿಡಿಸಿ ಆದಿಲ್ ರಶೀದ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಎರಡನೇ ವಿಕೆಟ್’ಗೆ ಜತೆಯಾದ ಶಾನ್ ಮಾರ್ಶ್ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಎರಡನೇ ವಿಕೆಟ್’ಗೆ ಫಿಂಚ್-ಮಾರ್ಶ್ ಜೋಡಿ 124 ರನ್’ಗಳ ಜತೆಯಾಟದಲ್ಲಿ ಭಾಗಿಯಾಯಿತು. ಫಿಂಚ್ ವೃತ್ತಿಜೀವನದ 11ನೇ ಹಾಗೂ ಇಂಗ್ಲೆಂಡ್ ವಿರುದ್ಧ 6ನೇ ಶತಕ ಸಿಡಿಸಿ ಸಂಭ್ರಮಿಸಿದರು. ಶತಕ ಸಿಡಿಸಿದ ಬೆನ್ನಲ್ಲೇ ಮಾರ್ಕ್’ವುಡ್ ಬೌಲಿಂಗ್’ನಲ್ಲಿ ಎಲ್’ಬಿ ಬಲೆಗೆ ಬಿದ್ದರು. ಈ ಜತೆಯಾಟ ಮುರಿಯುತ್ತಿದ್ದಂತೆ ಆಸಿಸ್ ರನ್ ವೇಗಕ್ಕೆ ಕಡಿವಾಣ ಬಿದ್ದಿತು. ಶಾನ್ ಮಾರ್ಶ್ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಸರಣಿಯಲ್ಲಿ ಮಾರ್ಶ್ ಸಿಡಿಸಿದ 2ನೇ ಶತಕವಾಗಿದೆ. 48ನೇ ಓವರ್’ನಲ್ಲಿ ವಿಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು 310 ರನ್ ಕಲೆಹಾಕಿದೆ. ಇಂಗ್ಲೆಂಡ್ ಪರ ವಿಲ್ಲಿ 4 ವಿಕೆಟ್ ಪಡೆದರೆ, ಮಾರ್ಕ್’ವುಡ್ ಹಾಗೂ ಆದಿಲ್ ರಶೀದ್ ತಲಾ 2 ವಿಕೆಟ್ ಪಡೆದರು. 
ಆದಿಲ್ ರಶೀದ್ ಇಂಗ್ಲೆಂಡ್ ಯಶಸ್ವಿ ಸ್ಪಿನ್ನರ್: 
ಹೆಡ್ ವಿಕೆಟ್ ಪಡೆದ ರಶೀದ್ ವಿನೂತನ ದಾಖಲೆ ಬರೆದರು. ಇಂಗ್ಲೆಂಡ್ ಪರ[105] ಗರಿಷ್ಟ ವಿಕೆಟ್ ಪಡೆದ ಸ್ಪಿನ್ನರ್ ಎನ್ನುವ ಖ್ಯಾತಿಗೆ ರಶೀದ್ ಪಾತ್ರರಾದರು. ಈ ಮೊದಲು ಗ್ರೇಮ್ ಸ್ವಾನ್[104] ವಿಕೆಟ್ ಪಡೆದಿದ್ದರು.  

Follow Us:
Download App:
  • android
  • ios