ಎರಡನೇ ದಿನದಾಟದ ಊಟದ ವಿರಾಮದ ವೇಳೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 76 ರನ್ ಬಾರಿಸಿದೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ 26(91 ಎಸೆತ) ರವಿಚಂದ್ರನ್ ಅಶ್ವಿನ್ 12(23 ಎಸೆತ) ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಕೇಪ್'ಟೌನ್(ಜ.06): ಆಫ್ರಿಕಾ ವೇಗಿಗಳ ಮಾರಕ ದಾಳಿಗೆ ಮಂಕಾಗಿರುವ ಟೀಂ ಇಂಡಿಯಾ ಮಂದಗತಿಯ ಬ್ಯಾಟಿಂಗ್'ಗೆ ಮುಂದಾಗಿದೆ.
ಎರಡನೇ ದಿನದಾಟದ ಊಟದ ವಿರಾಮದ ವೇಳೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 76 ರನ್ ಬಾರಿಸಿದೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ 26(91 ಎಸೆತ) ರವಿಚಂದ್ರನ್ ಅಶ್ವಿನ್ 12(23 ಎಸೆತ) ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಮೊದಲ ದಿನದಾಟದಲ್ಲೇ 28 ರನ್'ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ಎರಡನೇ ದಿನ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿತು. ರೋಹಿತ್ ಶರ್ಮಾ ಹಾಗೂ ಪೂಜಾರ ಜೋಡಿ ನಾಲ್ಕನೇ ವಿಕೆಟ್'ಗೆ 30 ರನ್ ಕೂಡಿ ಹಾಕಿತು. ಈ ವೇಳೆ ದಾಳಿಗಿಳಿದ ವೇಗಿ ರಬಾಡ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾ 11(59 ಎಸೆತ) ಬಾರಿಸಿ ರಬಾಡ ಎಲ್'ಬಿ ಬಲೆಗೆ ಬಿದ್ದರು.
ಇನ್ನುಳಿದ ಸೆಷನ್ಸ್'ಗಳಲ್ಲಿ ಟೀಂ ಇಂಡಿಯಾ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.