ಸ್ವಪ್ನಿಲ್​​ ಗುಗಲೆ ಹಾಗು ಅಂಕಿತ್​ ಬವ್ನೆ ಜೋಡಿ 3ನೇ ವಿಕೆಟ್​​​ಗೆ 594ರನ್ ಪೇರಿಸುವ ಮೂಲಕ ರಣಜಿ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ಮತ್ತು ಫರ್ಸ್ಟ್​​​​ ಕ್ಲಾಸ್​​​​ ಕ್ರಿಕೆಟ್​​​​ನಲ್ಲಿ ಏರಡನೆ ಅತೀ ಹೆಚ್ಚು ರನ್​​ ಪೇರಿಸಿದ ಜೊತೆಯಾಟವಾಗಿದೆ. 

ಮುಂಬೈ(ಅ.15):ಮುಂಬೈಯಲ್ಲಿ ಡೆಲ್ಲಿ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮಹರಾಷ್ಟ್ರದ ಸ್ವಪ್ನಿಲ್​​ ಗುಗಲೆ ಹಾಗು ಅಂಕಿತ್​ ಬವ್ನೆ ದಾಖಲೆ ಜೊತೆಯಾಟವಾಡಿದ್ದಾರೆ.

ಈ ಜೋಡಿ 3ನೇ ವಿಕೆಟ್​​​ಗೆ 594ರನ್ ಪೇರಿಸುವ ಮೂಲಕ ರಣಜಿ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ಮತ್ತು ಫರ್ಸ್ಟ್​​​​ ಕ್ಲಾಸ್​​​​ ಕ್ರಿಕೆಟ್​​​​ನಲ್ಲಿ ಏರಡನೆ ಅತೀ ಹೆಚ್ಚು ರನ್​​ ಪೇರಿಸಿದ ಜೊತೆಯಾಟವಾಗಿದೆ. 

ಈ ಹಿಂದೆ 1946/47 ರ ರಣಜಿ ಫೈನಲ್​​ನಲ್ಲಿ ಕ್ರಿಕೆಟ್​​ ದಂತಕತೆ ವಿಜಯ್​​ ಹಜಾರೆ ಅತೀ ಹೆಚ್ಚು ರನ್​​ ಪೇರಿಸಿದ ಜೊತೆಯಾಟವಾಡಿದ ದಾಖಲೆ ಇತ್ತು.

ಸದ್ಯ ಶ್ರಿಲಂಕಾದ ಕುಮಾರ ಸಂಗಾಕ್ಕರ ಹಾಗೂ ಮಹೇಲ ಜಯವರ್ಧನೆ ಗಳಿಸಿದ 624 ಈವರೆಗಿನ ಅತೀ ಹೆಚ್ಚು ರನ್​​ ಪೇರಿಸಿದ ಜೊತೆಯಾಟವಾಗಿದೆ.