ಅತಿರೇಕ ತೋರಿಸಿದ ಎಂಬ ಕಾರಣಕ್ಕಾಗಿ ಒಬ್ಬ ಅಭಿಮಾನಿಯನ್ನು ಪಾಕಿಸ್ತಾನ ಸರ್ಕಾರ ಬಂಧಿಸಿ ಜೈಲಿಗೆ ಕಳಿಸಿತ್ತು.
ವಿರಾಟ್ ಕೊಹ್ಲಿ'ಗೆ ಪಾಕಿಸ್ತಾನದಲ್ಲೂ ಲಕ್ಷಾಂತರ ಅಭಿಮಾನಿಗಳಿರುವುದನ್ನು ಎಲ್ಲರಿಗೂ ತಿಳಿದಿರುವ ವಿಚಾರ. ಅತಿರೇಕ ತೋರಿಸಿದ ಎಂಬ ಕಾರಣಕ್ಕಾಗಿ ಒಬ್ಬ ಅಭಿಮಾನಿಯನ್ನು ಪಾಕಿಸ್ತಾನ ಸರ್ಕಾರ ಬಂಧಿಸಿ ಜೈಲಿಗೆ ಕಳಿಸಿತ್ತು. ಆದರೆ ಕೊಹ್ಲಿಗೆ ಮಾತ್ರವಲ್ಲ ಧೋನಿಗೂ ಪಾಕಿಸ್ತಾನದಲ್ಲಿ ಅಭಿಮಾನಿಗಳಿದ್ದಾರೆ.
ಡಿ.28ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್'ನಲ್ಲಿ ನಡೆಯುತ್ತಿರುವ ಆಸ್ಟ್ರೇ ಲಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಪಾಕ್ ಪರವಾದ ಅಭಿಮಾನಿಯೊಬ್ಬ ನಂ. 7 ಅಂಕೆಯುಳ್ಳ ಧೋನಿ ಹೆಸರುಳ್ಳ ಜೆರ್ಸಿಯನ್ನು ಧರಿಸಿದ್ದ. ಬಣ್ಣ ಪಾಕ್ ಪರವಾದರೂ ಹೆಸರು ಧೋನಿಯದಾಗಿತ್ತು. ಈ ವಿಚಿತ್ರ ಧರಿಸನ್ನು ನೋಡಿದ ಮಾಧ್ಯಮಗಳು, ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
