ನವದೆಹಲಿ[ಜೂ.19]: ರುವಾಂಡ ವಿರುದ್ಧ ಕೇವಲ 6 ರನ್‌ಗಳಿಗೆ ಆಲೌಟ್ ಆದ ಮಾಲಿ ತಂಡ, ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಕನಿಷ್ಠ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಗಿದೆ.

ಮಂಗಳವಾರ ರುವಾಂಡದ ಕಿಗಾಲಿ ನಗರದಲ್ಲಿ ನಡೆದ ಕ್ವಿಬುಕಾ ಮಹಿಳಾ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ಮಾಲಿ ಮುಖಭಂಗಕ್ಕೊಳಗಾಯಿತು. 7 ರನ್ ಗಳ ಗುರಿಯನ್ನು ರುವಾಂಡ ಕೇವಲ 4 ಎಸೆತಗಳಲ್ಲಿ ತಲುಪಿತು. 

10 ಮಂದಿ ಕ್ಲೀನ್ ಬೋಲ್ಡ್, 4 ರನ್ನಿಗೆ ತಂಡ ಆಲೌಟ್- ಕ್ರಿಕೆಟ್ ಇತಿಹಾಸದಲ್ಲೇ ಮೊದಲು!

ಮಾಲಿ ಪರ ಆರಂಭಿಕ ಆಟಗಾರ್ತಿ ಮರಿಮಾ ಸಮಾಕೆ 1 ರನ್ ಗಳಿಸಿದರು. ಇನ್ನುಳಿದ 5 ರನ್ ಇತರೆ ರೂಪದಲ್ಲಿ ದೊರೆಯಿತು. ಇದೇ ವರ್ಷ ಯುಎಇ ವಿರುದ್ಧ ಚೀನಾ 14 ರನ್‌ಗೆ ಆಲೌಟ್ ಆಗಿದ್ದು ಈ ವರೆಗಿನ ಕನಿಷ್ಠ ಮೊತ್ತದ ದಾಖಲೆಯಾಗಿತ್ತು.