Asianet Suvarna News Asianet Suvarna News

ಐಪಿಎಲ್ ಅದ್ಧೂರಿ ಉದ್ಘಾಟನೆಗೆ 50 ಕೋಟಿ ಬಜೆಟ್

ಈ ಹಿಂದಿನ ಆವೃತ್ತಿ ಸಂದರ್ಭದಲ್ಲಿ ಬಿಸಿಸಿಐ ಉದ್ಘಾಟನಾ ಸಮಾರಂಭಗಳಿಗೆ ₹30 ಕೋಟಿ ನಿಗದಿ ಪಡಿಸಿತ್ತು. 8 ಫ್ರಾಂಚೈಸಿಗಳ ತವರಿನಲ್ಲಿ ಉದ್ಘಾಟನಾ ಸಮಾರಂಭ ನಡೆಸಲು ತಲಾ ₹3.5 ಕೋಟಿ ನೀಡಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಲುವಾಗಿ 8 ಸ್ಥಳಗಳಲ್ಲಿ ಉದ್ಘಾಟನಾ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.

50 crore grand opening gala for IPL 2018

ಮುಂಬೈ(ಜ.25): 2018ನೇ ಸಾಲಿನ ಐಪಿಎಲ್'ಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಸಿದ್ಧತೆಗಳು ಭರ್ಜರಿಯಾಗಿ ಸಾಗಿವೆ. ಈ ವರ್ಷ ಒಂದೇ ಒಂದು ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.

2017ರಲ್ಲಿ ಎಲ್ಲಾ 8 ತಂಡಗಳ ತವರು ಮೈದಾನದಲ್ಲಿ ಉದ್ಘಾಟನಾ ಸಮಾರಂಭವನ್ನು ನಡೆಸಲಾಗಿತ್ತು. ಆದರೆ, ಈ ಬಾರಿ ಐಪಿಎಲ್ ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದು, ಏ.6ರಂದು ಮುಂಬೈನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಹಿಂದಿನ ಆವೃತ್ತಿಗಳಿಗಿಂತ ಅದ್ಧೂರಿಯಾಗಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಅದಕ್ಕಾಗಿ ಬರೋಬ್ಬರಿ ₹50 ಕೋಟಿ ಬಜೆಟ್ ಮೀಸಲಿಡುವುದಾಗಿ ಹೇಳಿದೆ.

ಈ ಹಿಂದಿನ ಆವೃತ್ತಿ ಸಂದರ್ಭದಲ್ಲಿ ಬಿಸಿಸಿಐ ಉದ್ಘಾಟನಾ ಸಮಾರಂಭಗಳಿಗೆ ₹30 ಕೋಟಿ ನಿಗದಿ ಪಡಿಸಿತ್ತು. 8 ಫ್ರಾಂಚೈಸಿಗಳ ತವರಿನಲ್ಲಿ ಉದ್ಘಾಟನಾ ಸಮಾರಂಭ ನಡೆಸಲು ತಲಾ ₹3.5 ಕೋಟಿ ನೀಡಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಲುವಾಗಿ 8 ಸ್ಥಳಗಳಲ್ಲಿ ಉದ್ಘಾಟನಾ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಆದರೆ, ಈ ಬಾರಿ ಮೊತ್ತವನ್ನು ₹50 ಕೋಟಿಗೆ ಏರಿಕೆ ಮಾಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಜ.27, 28ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, 8 ತಂಡಗಳ ಪೈಕಿ 4 ತಂಡಗಳ ಬಳಿ ಆಟಗಾರರನ್ನು ಖರೀದಿಸಿ, ತಂಡ ರಚಿಸಿಕೊಳ್ಳುವುದಕ್ಕೇ ₹50 ಕೋಟಿ ಹಣವಿಲ್ಲ, ಹೀಗಿರುವಾಗ ಉದ್ಘಾಟನೆಗೆ ಬಿಸಿಸಿಐ ₹50 ಕೋಟಿ ಖರ್ಚು ಮಾಡುತ್ತಿರುವುದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Follow Us:
Download App:
  • android
  • ios