ವಿರಾಟ್ ಪಡೆಗೆ ವಿಶ್ವಕಪ್ ಮುತ್ತಿಕ್ಕಲು 5 ಏಕದಿನ ಸರಣಿಗಳೇ ಮೆಟ್ಟಿಲು..?

5 upcoming ODI series that will help India prepare for World Cup 2019
Highlights

ಮುಂಬರುವ 2019ನೇ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳು ಈಗಿನಿಂದಲೇ ತಯಾರಿ ಆರಂಭಿಸಿವೆ. 2011ರ ಚಾಂಪಿಯನ್ ಭಾರತ ತಂಡವು ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು ಮತ್ತೊಮ್ಮೆ ಕಪ್’ಗೆ ಮುತ್ತಿಕ್ಕಲು ಸಜ್ಜಾಗುತ್ತಿದೆ. 

ಬೆಂಗಳೂರು[ಜೂ.21]: ಮುಂಬರುವ 2019ನೇ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳು ಈಗಿನಿಂದಲೇ ತಯಾರಿ ಆರಂಭಿಸಿವೆ. 2011ರ ಚಾಂಪಿಯನ್ ಭಾರತ ತಂಡವು ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು ಮತ್ತೊಮ್ಮೆ ಕಪ್’ಗೆ ಮುತ್ತಿಕ್ಕಲು ಸಜ್ಜಾಗುತ್ತಿದೆ. ಇಂಗ್ಲೆಂಡ್ ಹಾಗೂ ವೇಲ್ಸ್’ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೂ ಭಾರತ ಸುಮಾರು 30 ಏಕದಿನ ಪಂದ್ಯಗಳನ್ನಾಡಲಿದೆ. ವಿಶ್ವಕಪ್’ಗೂ ಮುನ್ನ ಭಾರತ 6-7 ಏಕದಿನ ಸರಣಿಗಳನ್ನಾಡಲಿದೆ. ಅದರಲ್ಲೂ ಈ 5 ಏಕದಿನ ಸರಣಿಗಳು ಭಾರತದ ಪಾಲಿಗೆ ವಿಶ್ವಕಪ್ ತಯಾರಿ ದೃಷ್ಟಿಯಿಂದ ಪ್ರಮುಖವೆನಿಸಿವೆ... ಆ 5 ಏಕದಿನ ಪಂದ್ಯಗಳ ಸರಣಿಯ ವಿವರ ನಿಮಗಾಗಿ..

#5. ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್- ಸೆಪ್ಟೆಂಬರ್ 2018
ಈ ಬಾರಿ ಯುನೈಟೆಡ್ ಅರಬ್ ಎಮಿರಾಯ್ಟ್ಸ್’ನಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿಯು 50 ಓವರ್’ಗಳ ಪಂದ್ಯಗಳಾಗಿದ್ದು, 6 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. 
ಯುಎಇ ವಾತಾವರಣಕ್ಕೂ ಇಂಗ್ಲೆಂಡ್ ವಾತಾವರಣಕ್ಕೂ ವ್ಯತ್ಯಾಸವಿರಬಹುದು. ಆದರೆ ಬೇರೆ-ಬೇರೆ ದೇಶಗಳ ನಡುವಿನ ಹೋರಾಟ ಟೀಂ ಇಂಡಿಯಾ ಆಟಗಾರರ ಅನುಭವ ಹೆಚ್ಚಿಸಲಿದೆ. ಭಾರತ ಈ ಟೂರ್ನಿಯಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರಿಸಲಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಲು ಒಳ್ಳೆಯ ಅವಕಾಶವಾಗಿರಲಿದೆ.

#4. ಭಾರತ-ಆಸ್ಟ್ರೇಲಿಯಾ ಸರಣಿ: [ಆಸೀಸ್ ಪ್ರವಾಸ]
2019ರ ಆರಂಭದಲ್ಲೇ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತವರಿನಲ್ಲಿ ಯಾವಾಗಲೂ ಬಲಿಷ್ಠ ಪ್ರದರ್ಶನ ತೋರುತ್ತಲೇ ಬಂದಿದೆ. ವಿದೇಶಿ ನೆಲದಲ್ಲಿ ವಾತಾವರಣಕ್ಕೆ ಆಟಗಾರರು ಹೊಂದಿಕೊಳ್ಳುವ ಉದ್ದೇಶದಿಂದ ಭಾರತದ ಆಡಳಿತ ಮಂಡಳಿಯು 3 ಏಕದಿನ ಪಂದ್ಯಗಳ ಸರಣಿಯನ್ನು ಆಯೋಜಿಸಿದೆ.   

#3. ಭಾರತ-ಆಸ್ಟ್ರೇಲಿಯಾ ಸರಣಿ:[ಭಾರತದ ನೆಲದಲ್ಲಿ]
ಆಸ್ಟ್ರೇಲಿಯಾ ತಂಡವು ಏಕದಿನ ಸರಣಿಯಾಡಲು 2019ರ ಫೆಬ್ರವರಿ-ಮಾರ್ಚ್ ವೇಳೆಗೆ ಭಾರತಕ್ಕೆ ಬರಲಿದೆ. 5 ಪಂದ್ಯಗಳ ಸರಣಿ ವಿಶ್ವಕಪ್ ದೃಷ್ಟಿಯಿಂದ ಪ್ರಮುಖವಾಗಿದ್ದು, ಭಾರತ ತಂಡದಲ್ಲಿ ಆಡುವ 15 ಆಟಗಾರರನ್ನು ಆಯ್ಕೆ ಮಾಡಲು ಸಹಕಾರಿಯಾಗಲಿದೆ. ಇದು ವಿಶ್ವಕಪ್’ಗೂ ಮುನ್ನ ಭಾರತ ಆಡುವ ಕೊನೆಯ ಸರಣಿ ಇದಾಗಲಿದೆ.

#2. ಭಾರತ-ನ್ಯೂಜಿಲೆಂಡ್ ಸರಣಿ[ ನ್ಯೂಜಿಲೆಂಡ್ ನೆಲದಲ್ಲಿ]
ಕಳೆದ ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ. 2019ರ ಫೆಬ್ರವರಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ನೆಲದಲ್ಲಿ ಕಿವೀಸ್ ಪಡೆಯನ್ನು ಎದುರಿಸಲಿದೆ. 
5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್’ನ ಬಲಿಷ್ಠ ಬೌಲಿಂಗ್ ಪಡೆಯ ವಿರುದ್ಧ ಕಾದಾಡಲಿದೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಾತಾವರಣ ಬಹುತೇಕ ಒಂದೇ ರೀತಿಯಾಗಿರುವುದರಿಂದ ಈ ಸರಣಿ ಭಾರತಕ್ಕೆ ಅನುಕೂಲವಾಗಲಿದೆ.

#1. ಭಾರತ-ಇಂಗ್ಲೆಂಡ್ ಸರಣಿ[ ಇಂಗ್ಲೆಂಡ್ ನೆಲದಲ್ಲಿ]
ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಇದೇ ಜುಲೈನಿಂದ ಆರಂಭವಾಗಲಿರುವ ಸರಣಿಯಿಂದ ನಿಜವಾಗಿ ವಿಶ್ವಕಪ್’ಗೆ ಸಿದ್ದತೆ ನಡೆಸಲಿದೆ. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ತೋರುವುದರೊಂದಿಗೆ ಸರಣಿ ಕೈವಶ ಮಾಡಿಕೊಂಡಿರುವ ಇಂಗ್ಲೆಂಡ್ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದು, ಭಾರತಕ್ಕೆ ಇಂಗ್ಲೆಂಡ್ ಪ್ರವಾಸ ನಿಜಕ್ಕೂ ಸತ್ವಪರೀಕ್ಷೆಯಾಗಲಿದೆ. ಇಂಗ್ಲೆಂಡ್ ನೆಲದಲ್ಲಿ ಭಾರತದ ಬೌಲರ್ ಹಾಗೂ ಬ್ಯಾಟ್ಸ್’ಮನ್’ಗಳಿಗೆ ಅಗ್ನಿಪರೀಕ್ಷೆಯಾಗಲಿದೆ.
ಒಟ್ಟಿನಲ್ಲಿ ಈ 5 ಸರಣಿಗಳು ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಭಾರತದ ಪಾಲಿಗೆ ಪ್ರಮುಖವಾಗಲಿದೆ.

loader