ಈ ಬಾರಿ ಐಪಿಎಲ್’ನಲ್ಲಿ ಸಂಚಲನ ಮೂಡಿಸಿದ ಟಾಪ್ 5 ಆಟಗಾರರಿವರು

5 Unsung Heroes of IPL 2018
Highlights

ಈ ವರ್ಷ ಕೂಡ ಕೆಲ ಕ್ರಿಕೆಟಿಗರು ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ.. 

ಬೆಂಗಳೂರು[ಮೇ.10]: ಪ್ರತಿವರ್ಷ ಐಪಿಎಲ್’ನಲ್ಲಿ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಲೇ ಇರುತ್ತಾರೆ. ಅದೇ ರೀತಿ ಈ ವರ್ಷ ಕೂಡ ಕೆಲ ಕ್ರಿಕೆಟಿಗರು ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ.. 

1. ಸಂದೀಪ್ ಶರ್ಮಾ: ಸನ್’ರೈಸರ್ಸ್ ಬೌಲಿಂಗ್ ಈ ವರ್ಷ ಕೂಡಾ ಬಲಿಷ್ಠವಾಗಿದೆ. ಭುವನೇಶ್ವರ್ ಕುಮಾರ್, ರಶೀದ್ ಖಾನ್, ಸಿದ್ದಾರ್ಥ್ ಕೌಲ್ ಜೊತಗೆ ಸಂದೀಪ್ ಶರ್ಮಾ ಎದುರಾಳಿ ಬ್ಯಾಟಿಂಗ್ ಬಲವನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಅದರಲ್ಲೂ ಸಂದೀಪ್ ಶರ್ಮಾ ಆಡಿದ 6 ಇನಿಂಗ್ಸ್’ನಲ್ಲಿ 7 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದಕ್ಕಿಂತ ಮುಖ್ಯವಾಗಿ ಓವರ್’ಗೆ ಕೇವಲ 5.26ರ ಸರಾಸರಿಯಲ್ಲಿ ರನ್’ಬಿಟ್ಟುಕೊಟ್ಟಿದ್ದಾರೆ. ಹೊಡಿಬಡಿಯಾಟವಾದ ಐಪಿಎಲ್ ಟಿ20 ಓವರ್’ಗೆ 6ಕ್ಕಿಂತ ಕಡಿಮೆ ರನ್ ನೀಡಿದ್ದು ನಿಜಕ್ಕೂ ಸಾಧನೆಯೇ ಸರಿ.

2. ಮನ್ದೀಪ್ ಸಿಂಗ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಮೇಲೆ ಸೋಲು ಕಂಡರೂ ಮನ್ದೀಪ್ ಸಿಂಗ್ ಮಾತ್ರ ಸಿಕ್ಕ ಅವಕಾಶದಲ್ಲಿ ಸ್ಥಿರ ಪ್ರದರ್ಶನ ತೋರಿ ಅಭಿಮಾನಿಗಳ ಮನಗೆದ್ದಿದ್ದಾರೆ. ಆಡಿರುವ 10 ಇನಿಂಗ್ಸ್’ನಲ್ಲಿ 33.14ರ ಸರಾಸರಿಯಂತೆ 232 ರನ್ ಕಲೆಹಾಕಿದ್ದಾರೆ. ಬಹುತೇಕ ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವ ಮನ್ದೀಪ್’ಗೆ ಅಗ್ರಕ್ರಮಾಂಕದಲ್ಲಿ ಆಡಲು ಅವಕಾಶ ಸಿಕ್ಕರೆ ಇನ್ನು ಉತ್ತಮ ಪ್ರದರ್ಶನ ತೋರಬಹುದು ಎನ್ನುವುದು ಆರ್’ಸಿಬಿ ಅಭಿಮಾನಿಗಳ ನಿರೀಕ್ಷೆಯಾಗಿದೆ.

3. ಉಮೇಶ್ ಯಾದವ್: ಕೆಲ ತಿಂಗಳಗಳ ಹಿಂದಷ್ಟೇ ಟೆಸ್ಟ್ ಕ್ರಿಕೆಟ್’ಗಷ್ಟೇ ಸೀಮಿತವೆನಿಸಿಕೊಂಡಿದ್ದ ಉಮೇಶ್ ಯಾದವ್ ಈ ಬಾರಿ ಆಡಿರುವ 10 ಐಪಿಎಲ್ ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ ಬೆಂಗಳೂರು ಪರ ಆರಂಭದಲ್ಲೇ ವಿಕೆಟ್ ಕಬಳಿಸುವ ಮೂಲಕ ಉತ್ತಮ ದಾಳಿ ಸಂಘಟಿಸುತ್ತಿರುವ ಉಮೇಶ್ ಯಾದವ್ ಸೀಮಿತ ಓವರ್’ಗಳ  ತಂಡಕ್ಕೆ ಕಮ್’ಬ್ಯಾಕ್ ಸಾಧ್ಯತೆ ಹೆಚ್ಚು.

4. ಮಿಚೆಲ್ ಮೆಕ್ಲೆನಾಘನ್: ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರ ಹೆಚ್ಚು ಗಮನಸೆಳೆದ ಆಟಗಾರನೆಂದರೆ ಅದು ಮಿಚೆಲ್ ಮೆಕ್ಲೆನಾಘನ್. ಇಲ್ಲಿಯವರೆಗೆ ಆಡಿರುವ 9 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕೊಂಚ ದುಬಾರಿ[9.34 ರನ್’ರೇಟ್] ಡೆತ್ ಓವರ್’ಗಳಲ್ಲಿ ತಂಡಕ್ಕೆ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

5. ಸುನಿಲ್ ನರೈನ್: ಟಿ20 ಕ್ರಿಕೆಟ್’ಗೆ ಹೇಳಿ ಮಾಡಿಸಿದ ಕ್ರಿಕೆಟಿಗ ಸುನಿಲ್ ನರೈನ್. ಈಗಾಗಲೇ ಆಡಿರುವ 11 ಪಂದ್ಯಗಳಲ್ಲಿ ಬ್ಯಾಟಿಂಗ್’ನಲ್ಲಿ 202 ರನ್ ಹಾಗೂ ಬೌಲಿಂಗ್’ನಲ್ಲಿ 13 ವಿಕೆಟ್ ಕಬಳಿಸಿ ತಾನೆಷ್ಟು ಉಪಯುಕ್ತ ಟಿ20 ಕ್ರಿಕೆಟಿಗ ಎಂದು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ.
 

loader