ಭಾರಿ ಮೊತ್ತಕ್ಕೆ ಹರಾಜಾಗಿರುವ ಈ 5 ಆಟಗಾರರು ಪ್ರಾಂಚೈಸಿಗಳ ನಂಬಿಕೆ ಉಳಿಸಿಕೊಳ್ತಾರಾ..?

5 players who were lucky to go for a higher price than expected
Highlights

ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಕುತೂಹಲಕ್ಕೆ ತೆರೆಬಿದ್ದಿದೆ. ಕೆಲ ಆಟಗಾರರು ನಿರೀಕ್ಷೆಗೂ ಮೀರಿ ಹರಾಜಾಗಿದ್ದರೆ, ಇನ್ನೂ ಕೆಲ ಕ್ರಿಕೆಟಿಗರನ್ನೂ ಪ್ರಾಂಚೈಸಿಗಳು ಮೂಸಿಯೂ ನೋಡಲಿಲ್ಲ. ಇನ್ನೇನು ಕೆಲ ತಿಂಗಳಲ್ಲಿ ಆರಂಭವಾಗಲಿರುವ ಐಪಿಎಲ್'ನಲ್ಲಿ ನಿರೀಕ್ಷೆಗೂ ಮೀರಿ ಹರಾಜಾಗಿರುವ ಈ ಐವರು ಆಟಗಾರರು ಪ್ರಾಂಚೈಸಿಗಳ ನಂಬಿಕೆ ಉಳಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಕುತೂಹಲಕ್ಕೆ ತೆರೆಬಿದ್ದಿದೆ. ಕೆಲ ಆಟಗಾರರು ನಿರೀಕ್ಷೆಗೂ ಮೀರಿ ಹರಾಜಾಗಿದ್ದರೆ, ಇನ್ನೂ ಕೆಲ ಕ್ರಿಕೆಟಿಗರನ್ನೂ ಪ್ರಾಂಚೈಸಿಗಳು ಮೂಸಿಯೂ ನೋಡಲಿಲ್ಲ. ಇನ್ನೇನು ಕೆಲ ತಿಂಗಳಲ್ಲಿ ಆರಂಭವಾಗಲಿರುವ ಐಪಿಎಲ್'ನಲ್ಲಿ ನಿರೀಕ್ಷೆಗೂ ಮೀರಿ ಹರಾಜಾಗಿರುವ ಈ ಐವರು ಆಟಗಾರರು ಪ್ರಾಂಚೈಸಿಗಳ ನಂಬಿಕೆ ಉಳಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

#5  ಕೀರನ್ ಪೊಲ್ಲಾರ್ಡ್:

ಫಿಟ್'ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಪೊಲ್ಲಾರ್ಡ್, ಪ್ರಸ್ತುತ ಹೇಳಿಕೊಳ್ಳುವಂತಹ ಫಾರ್ಮ್'ನಲ್ಲಿಲ್ಲ. 2017ರ ಆವೃತ್ತಿಯಲ್ಲಿ ಕೇವಲ 2 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿದ್ದರು. ಆದರೆ ಒಂದೇ ಒಂದು ವಿಕೆಟ್ ಕಬಳಿಸಲೂ ಸಾಧ್ಯವಾಗಿರಲಿಲ್ಲ. ಆದಾಗಿಯೂ ಮುಂಬೈ ಇಂಡಿಯನ್ಸ್ ಪೊಲ್ಲಾರ್ಡ್'ರನ್ನು ರೀಟೈನ್ ಮಾಡಿಕೊಂಡಿದೆ.

#4 ಇಶನ್ ಕಿಶನ್:

ಜಾರ್ಖಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್'ಮನ್. 2016ರಲ್ಲಿ ಅಂಡರ್ 19 ಟೀಂ ಇಂಡಿಯಾವನ್ನು ವಿಶ್ವಕಪ್'ನಲ್ಲಿ ಫೈನಲ್'ವರೆಗೂ ಮುನ್ನಡೆಸಿದ್ದರು. ಕಳೆದ ವರ್ಷ ಗುಜರಾತ್ ಲಯನ್ಸ್ ತಂಡ 35 ಲಕ್ಷಕ್ಕೆ ಖರೀದಿಸಿತ್ತು. ಕಳೆದ ಆವೃತ್ತಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 42 ರನ್ ಕಲೆಹಾಕಿದ್ದರು.

ಆದರೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡ 6.2 ಕೋಟಿ ನೀಡಿ ಇಶನ್ ಕಿಶನ್ ಅವರನ್ನು ಖರೀದಿಸಿದೆ.

#3 ಕೆ. ಗೌತಮ್:

2012ರಲ್ಲಿ ಕರ್ನಾಟಕ ಪರ ರಣಜಿ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ ಕೆ. ಗೌತಮ್. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ 2 ಕೋಟಿ ನೀಡಿ ಖರೀದಿಸಿತ್ತು. ಆದರೆ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡ 6.2 ಕೋಟಿ ನೀಡಿ ಕನ್ನಡಿಗನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

#2 ಮನೀಶ್ ಪಾಂಡೆ:

ಮನೀಶ್ ಪಾಂಡೆಯನ್ನು ಸನ್'ರೈಸರ್ಸ್ ಹೈದರಾಬಾದ್ ತಂಡ 11 ಕೋಟಿ ನೀಡಿ ಖರೀಧಿಸಿದೆ. ಕಳೆದ ಆವೃತ್ತಿಯಲ್ಲಿ 50ರ ಸರಸರಿಯಲ್ಲಿ ರನ್ ಗಳಿಸಿದ್ದ ಪಾಂಡೆ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

#1 ಜಯದೇವ್ ಉನಾದ್ಕತ್:

ಈ ಬಾರಿ ಅಚ್ಚರಿಯ ಬೆಲೆಗೆ ಹರಾಜಾಗಿರುವ ಆಟಗಾರನೆಂದರೆ ಜಯದೇವ್ ಉನಾದ್ಕತ್. ಕಳೆದ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ 30 ಲಕ್ಷ ನೀಡಿ ಖರೀದಿಸಿತ್ತು. 2017ರಲ್ಲಿ 24 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದ ಉನಾದ್ಕತ್, ಈ ಬಾರಿ 11.5 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಈ ಮೇಲ್ಕಂಡ ಆಟಗಾರರು ಪ್ರಾಂಚೈಸಿಗಳ ನಂಬಿಕೆ ಉಳಿಸಿಕೊಳ್ಳುತ್ತಾರಾ ಎನ್ನೋದನ್ನು ಕಾಲವೇ ಉತ್ತರಿಸಬೇಕಿದೆ.

loader