ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಲೆಕ್ಟ್ ಮಾಡೋ ಮೂಲಕ ಸೆಲೆಕ್ಟರ್ಸ್ ಕೆಲ ಶಾಕ್​'ಗಳನ್ನ ನೀಡಿದ್ದಾರೆ. ಕೇವಲ ತಂಡ ಆಯ್ಕೆ ಮಾಡಿಲ್ಲ. ಬದಲಿಗೆ ಕೆಲ ಸಂದೇಶಗಳನ್ನೂ ರವಾನಿಸಿದ್ದಾರೆ. ಇವು ಕೆಲ ಕ್ರಿಕೆಟರ್ಸ್​ಗೆ ಶಾಕ್ ನೀಡಿವೆ. ಹಾಗಾದ್ರೆ ಆಯ್ಕೆ ಸಮಿತಿ ಯಾಱರಿಗೆ ಯಾವ್ಯಾವ ಸಂದೇಶ ರವಾನಿಸಿದೆ? ಇಲ್ಲಿದೆ ವಿವರ 

ನ್ಯೂಜಿಲೆಂಡ್ ವಿರುದ್ಧದ ಒಂಡೇ ಸಿರೀಸ್​ಗೆ ಟೀಮ್ ಇಂಡಿಯಾ ಸೆಲೆಕ್ಟ್​ ಮಾಡಿದ್ದು ಹಳೆ ವಿಷಯ. ಆದರೆ ಏಕದಿನ ತಂಡ ಆಯ್ಕೆ ಮಾಡೋ ಮೂಲ್ಕ ಸೆಲೆಕ್ಟರ್ಸ್ ಐದು ಸಂದೇಶವನ್ನ ಕಳುಹಿಸಿದ್ದಾರೆ. ಆ ಐದು ಸಂದೇಶಗಳು ಕೆಲ ಪ್ಲೇಯರ್ಸ್​ಗೆ ಶಾಕ್ ನೀಡಿವೆ. ಆ ಸಂದೇಶಗಳು ನಿಜ ಕೂಡ.

ಮೆಸೇಜ್​ 1 - ರಾಹುಲ್​ ಓಪನಿಂಗ್​​'ಗೆ ಲಾಯಕ್ಕು..!​

ಲಂಕಾ ವಿರುದ್ಧ ಒಂಡೇ ಸರಣಿಗೆ ಕೆಎಲ್ ರಾಹುಲ್​'ನನ್ನ ಆಯ್ಕೆ ಮಾಡಿ, ಮಿಡ್ಲ್ ಆರ್ಡರ್​'ನಲ್ಲಿ ಪ್ರಯೋಗ ಮಾಡ್ತೇವೆ ಅಂತ ಸೆಲೆಕ್ಟರ್ಸ್ ಹೇಳಿದ್ರು. ಅದರಂತೆ ಮಧ್ಯಮ ಕ್ರಮಾಂಕದಲ್ಲಿ ಆಡಿಸಿದ್ರೂ ಅವರು ವಿಫಲರಾಗಿದ್ದರು. ಅಲ್ಲಿಗೆ ರಾಹುಲ್ ಆರಂಭಿಕನಾಗೋದೆ ಬೆಸ್ಟ್​ ಅಂತ ಸೆಲೆಕ್ಟರ್ಸ್​ ಡಿಶಿಷನ್​'ಗೆ ಬಂದಿದ್ದಾರೆ. ಓಪನರ್​ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಅಜಿಂಕ್ಯಾ ರಹಾನೆ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಓಪನಿಂಗ್ ಪ್ಲೇಸ್​​ನಲ್ಲಿ ಸ್ಥಾನ ಇಲ್ಲದಿರುವುದರಿಂದ ರಾಹುಲ್​ನನ್ನ ಡ್ರಾಪ್ ಮಾಡಲಾಗಿದೆ. ಅಲ್ಲಿಗೆ ರಾಹುಲ್ ಓಪನರ್ ಅನ್ನೋ ಸಂದೇಶವನ್ನ ಸೆಲೆಕ್ಟರ್ಸ್ ಕಳುಹಿಸಿದ್ದಾರೆ. ಇನ್ನೇನಿದ್ದರೂ ರಾಹುಲ್ ಓಪನರ್ ಪ್ಲೇಸ್​ಗೆ ಹೋರಾಟ ನಡೆಸಬೇಕು.

ಮೆಸೇಜ್​ 2 - ಯುವಿ-ರೈನಾ ಕೆರಿಯರ್​ ಕ್ಲೋಸ್​..?

ಟೀಂ ಇಂಡಿಯಾಗೆ ಕಮ್​​ ಬ್ಯಾಕ್ ಮಾಡಲು ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಇದೇ ವರ್ಷದ ವೆಸ್ಟ್ ಇಂಡೀಸ್ ಸರಣಿ ನಂತರ ಯುವಿ ಸೆಲೆಕ್ಟ್ ಆಗಿಲ್ಲ. 2015ರ ನಂತರ ರೈನಾ ಒಂಡೇ ಮ್ಯಾಚ್ ಆಡೇ ಇಲ್ಲ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಅವರನ್ನ ಡ್ರಾಪ್ ಮಾಡಲಾಗಿದೆ. ಅಲ್ಲಿಗೆ ಅವರಿಬ್ಬರ ಇಂಟರ್​​ನ್ಯಾಷನಲ್ ಕೆರಿಯರ್ ಕ್ಲೋಸ್ ಅನ್ನೋ ಸಂದೇಶವನ್ನ ಆಯ್ಕೆ ಸಮಿತಿ ಕಳುಹಿಸಿದೆ.

ಮೆಸೇಜ್​ 3 - ಕವಲು ದಾರಿಯಲ್ಲಿ ಅಶ್ವಿನ್​-ಜಡೇಜಾ ಒಂಡೇ ಕೆರಿಯರ್​

ಟೆಸ್ಟ್​ ಕ್ರಿಕೆಟ್'​ನಲ್ಲಿ ಟೀಂ ಇಂಡಿಯಾ ಟ್ರಂಪ್​ಕಾರ್ಡ್​ಗಳಾದ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಅವರನ್ನ ಸತತ ಮೂರನೇ ಏಕದಿನ ಸರಣಿಯಿಂದ ಡ್ರಾಪ್ ಮಾಡಲಾಗಿದೆ. ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಆರಂಭದಲ್ಲಿ ರೆಸ್ಟ್​ ಅಂತ ಹೇಳಿದರಾದ್ರೂ ಈಗ ಅವರಿಬ್ಬರು ಕೇವಲ ಟೆಸ್ಟ್​ ಕ್ರಿಕೆಟ್​ಗೆ ಸೀಮಿತ ಅನ್ನೋ ಸಂದೇಶವನ್ನ ಸೆಲೆಕ್ಟರ್ ಕಳುಹಿಸಿದಂತೆ ಕಾಣುತ್ತೆ. ಆದ್ರೂ ಅವರು ಕಮ್​ಬ್ಯಾಕ್ ಮಾಡೋಕೆ ಅವಕಾಶ ಇದೆ.

: ಮೆಸೇಜ್​ 4 - ಮನೀಶ್ ಪಾಂಡೆಗೆ ಲಾಸ್ಟ್​ ಚಾನ್ಸ್​..!

ನ್ಯೂಜಿಲೆಂಡ್ ಸರಣಿ ಕನ್ನಡಿಗ ಮನೀಶ್ ಪಾಂಡೆಗೆ ಡು ಆರ್ ಡೈ ಸಿರೀಸ್. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ ಶತಕ ಬಾರಿಸಿದ ನಂತರ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಆಟ ಮೂಡಿ ಬಂದಿಲ್ಲ. ಲಂಕಾದಲ್ಲಿ ಒಂದು ಅರ್ಧಶತಕ ದಾಖಲಿಸಿದ್ದರು. ಇನ್ನು ಆಸೀಸ್ ವಿರುದ್ಧ 36 ರನ್ ಅವರ ಗರಿಷ್ಠ ಮೊತ್ತ. ಈಗ ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡಲಾಗಿದೆ. ಅಲ್ಲಿಗೆ ಅವರಿಗೆ ಇದು ಲಾಸ್ಟ್ ಚಾನ್ಸ್ ಅನ್ನೋ ಸಂದೇಶವನ್ನ ಸೆಲೆಕ್ಟರ್ಸ್ ಕಳುಹಿಸಿದ್ದಾರೆ. ಕ್ಲಿಕ್ ಆದ್ರೆ ಉಳಿಗಾಲ. ಫೇಲ್ ಆದ್ರೆ ಟೀಮ್​ನಿಂದ ಕಿಕೌಟ್.

ಮೆಸೇಜ್​ 5 - ಡೊಮೆಸ್ಟಿಕ್​'ನಲ್ಲಿ ಪ್ರದರ್ಶನ ನೀಡಿದ್ರೆ ಟೀಂ ಇಂಡಿಯಾಗೆ ಆಯ್ಕೆ

ದೇಸಿ ಕ್ರಿಕೆಟ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಟೀಂ ಇಂಡಿಯಾಗೆ ಆಯ್ಕೆ ಮಾಡಲಾಗುತ್ತೆ ಅನ್ನೋ ಸಂದೇಶವನ್ನೂ ಸೆಲೆಕ್ಟರ್ಸ್ ಕಳುಹಿಸಿದ್ದಾರೆ. ಡೊಮೆಸ್ಟಿಕ್​ ಕ್ರಿಕೆಟ್'​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್ ಮತ್ತು ಶರ್ದೂಲ್ ಠಾಕೂರ್​ಗೆ ಮತ್ತೊಂದು ಚಾನ್ಸ್ ಕೊಡಲಾಗಿದೆ. ಅಲ್ಲಿಗೆ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಫರ್ಫಾಮೆನ್ಸ್ ಮಾಡಿ ಅನ್ನೋ ಸಂದೇಶವನ್ನ ಕೆಲ ಪ್ಲೇಯರ್ಸ್​ಗೆ ಸೆಲೆಕ್ಟರ್ಸ್ ರವಾನಿಸಿದ್ದಾರೆ.

ಒಂದು ತಂಡ ಆಯ್ಕೆ ಮಾಡೋದ್ರಿಂದ ಈ ಐದು ಸಂದೇಶಗಳನ್ನ ಆಯ್ಕೆ ಸಮಿತಿ ರವಾನಿಸಿದೆ. ಇದರಲ್ಲಿರುವ ಎಲ್ಲ ಸಂದೇಶಗಳ ಮಹತ್ವ ಪಡೆದಿದೆ. ಹೀಗಾಗಿ ಕೆಲ ಆಟಗಾರರಿಗೆ ಈ ಸಂದೇಶದಿಂದ ಶಾಕ್ ಆಗಿದೆ.