Asianet Suvarna News Asianet Suvarna News

ಏಕದಿನ ಕ್ರಿಕೆಟ್’ನಲ್ಲಿ ಸಿಕ್ಸರ್ ಸಿಡಿಸದ ಅನುಭವಿ ಬ್ಯಾಟ್ಸ್’ಮನ್’ಗಳಿವರು..!

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬ್ಯಾಟ್ಸ್’ಮನ್’ಗಳಿಗೆ ನೀರು ಕುಡಿದಷ್ಟು ಸುಲಭ ಎಂಬಂತಾಗಿದೆ. ಕೆಲವು ಬ್ಯಾಟ್ಸ್’ಮನ್’ಗಳಂತೂ ನೂರಕ್ಕೂ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದಾರೆ

5 batsmen who hit no sixes in their ODI careers

ಬೆಂಗಳೂರು[ಜೂ.21]: ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬ್ಯಾಟ್ಸ್’ಮನ್’ಗಳಿಗೆ ನೀರು ಕುಡಿದಷ್ಟು ಸುಲಭ ಎಂಬಂತಾಗಿದೆ. ಕೆಲವು ಬ್ಯಾಟ್ಸ್’ಮನ್’ಗಳಂತೂ ನೂರಕ್ಕೂ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಆದರೆ ಕೆಲವು ಬ್ಯಾಟ್ಸ್’ಮನ್’ಗಳು ಸೀಮಿತ ಓವರ್’ಗಳ[ಏಕದಿನ ಕ್ರಿಕೆಟ್] ಕ್ರಿಕೆಟ್’ನಲ್ಲಿ ಒಂದು ಸಿಕ್ಸರ್ ಬಾರಿಸಲು ಕೂಡ ಯಶಸ್ವಿಯಾಗಿಲ್ಲ. ಯಾರು ಆ ಆಟಗಾರರು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ..

#5. ಕಾಲಂ ಫರ್ಗ್ಯುಸನ್[ಆಸ್ಟ್ರೇಲಿಯಾ]
2009ರಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಪದಾರ್ಪಣೆ ಮಾಡಿದ ಫರ್ಗ್ಯುಸನ್ 30 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆಸೀಸ್ ಪರ 40ರ ಬ್ಯಾಟಿಂಗ್ ಸರಾಸರಿಯಂತೆ ಫರ್ಗ್ಯುಸನ್ 663 ರನ್ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಆದರೆ ಈ ಆಟಗಾರ ಇದುವರೆಗೂ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಒಂದು ಸಿಕ್ಸ್ ಬಾರಿಸಲು ಸಾಧ್ಯವಾಗಿಲ್ಲ. 31 ವರ್ಷದ ಫರ್ಗ್ಯುಸನ್ ಮತ್ತೆ ಆಸೀಸ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಸಿಕ್ಸರ್ ಬಾರಿಸುವ ಅವಕಾಶವಿದೆ.

#4. ಜೆಫ್ರಿ ಬಾಯ್ಕಾಟ್[ಇಂಗ್ಲೆಂಡ್]
ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್ ಆ ಕಾಲದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. 36 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿರುವ ಬಾಯ್ಕಾಟ್ ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 9 ಅರ್ಧಶತಕಗಳು ಸೇರಿವೆ. ಬಾಯ್ಕಾಟ್ ಕೂಡ ಒನ್ ಡೇ ಕ್ರಿಕೆಟ್’ನಲ್ಲಿ ಸಿಕ್ಸರ್ ಬಾರಿಸಿಲ್ಲ.

#3. ತಿಲ್ಲಾನ್ ಸಮರವೀರ[ಶ್ರೀಲಂಕಾ]
ಶ್ರೀಲಂಕಾ ಟೆಸ್ಟ್ ತಂಡದ ನಂಬಿಕಸ್ಥ ಬ್ಯಾಟ್ಸ್’ಮನ್ ಎಂದೇ ಕರೆಸಿಕೊಳ್ಳುತ್ತಿದ್ದ ಸಮರಾವೀರ 81 ಟೆಸ್ಟ್ ಪಂದ್ಯಗಳನ್ನಾಡಿ 5 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್’ನಲ್ಲಿ ಸಮರವೀರಗೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. 12 ವರ್ಷಗಳ ವೃತ್ತಿಜೀವನದಲ್ಲಿ 53 ಪಂದ್ಯಗಳಲ್ಲಿ ಕೇವಲ 862 ರನ್ ಬಾರಿಸಿದ್ದ ಅವರಿಗೆ ಒಂದು ಸಿಕ್ಸರ್ ಬಾರಿಸಲು ಸಾಧ್ಯವಾಗದಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ಈಗಿನ ಕಾಲದಲ್ಲಿ ಬಾಲಂಗೋಚಿಗಳೇ ಸಿಕ್ಸರ್ ಸಿಡಿಸುವಾಗ ಸಮರವೀರಗೆ ಸಿಕ್ಸರ್ ಬಾರಿಸಲು ಸಾಧ್ಯವಾಗದೇ ಇದ್ದುದ್ದೇ ಒಂದು ಅಚ್ಚರಿ..!

#2. ಡಿಯೋನ್ ಎಬ್ರಾಹಿಂ[ಜಿಂಬಾಬ್ವೆ]:
2001ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ  ಎಬ್ರಾಹಿಂ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಜಿಂಬಾಬ್ವೆ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ 82 ಪಂದ್ಯಗಳನ್ನಾಡಿದ್ದ ಎಬ್ರಾಹಿಂ ಒಂದು ಶತಕ ಹಾಗೂ 4 ಅರ್ಧಶತಕ ಸೇರಿದಂತೆ 1443 ರನ್ ಸಿಡಿಸಿದ್ದಾರೆ. ಆದರೆ ಅವರ ಬ್ಯಾಟ್’ನಿಂದ ಏಕದಿನ ಕ್ರಿಕೆಟ್’ನಲ್ಲಿ ಒಂದು ಸಿಕ್ಸರ್ ಕೂಡಾ ಸಿಡಿದಿಲ್ಲ.

#1. ಮನೋಜ್ ಕುಮಾರ್[ಭಾರತ]
1984ರಿಂದ 1996ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ ಪ್ರಮುಖ ಆಲ್ರೌಂಡರ್’ಗಳಲ್ಲಿ ಮನೋಜ್ ಪ್ರಭಾಕರ್ ಕೂಡಾ ಒಬ್ಬರು. ಅದರಲ್ಲೂ ಬೌಲರ್ ಆಗಿಯೇ ಹೆಚ್ಚು ಗುರುತಿಸಿಕೊಂಡ ಪ್ರಭಾಕರ್ 130 ಏಕದಿನ ಪಂದ್ಯಗಳಲ್ಲಿ 2 ಶತಕ ಹಾಗೂ 11 ಅರ್ಧಶತಕಗಳ ನೆರವಿನಿಂದ 1858 ರನ್ ಸಿಡಿಸಿದ್ದಾರೆ. ಪ್ರಭಾಕರ್ 1987, 1992 ಹಾಗೂ 1996ರ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇಷ್ಟು ದೀರ್ಘಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು ಒಮ್ಮೆಯೂ ಸಿಕ್ಸರ್ ಸಿಡಿಸಿಲ್ಲ ಎನ್ನುವುದೇ ಒಂದು ಸೋಜಿಗದ ಸಂಗತಿ.
 

Follow Us:
Download App:
  • android
  • ios