ಅಮೆರಿಕದ ಇಂಡಿಯಾನಾ ವೆಲ್ಸ್‌ ಎಟಿಪಿ ಮಾಸ್ಟರ್ಸ್‌ ಟೂರ್ನಿ ಜಯಿಸಿದ ರೋಹನ್ ಬೋಪಣ್ಣ ಜೋಡಿಎಟಿಪಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ವಿಶ್ವದ ಅತಿಹಿರಿಯ ಟೆನಿಸಿಗ ಎನ್ನುವ ದಾಖಲೆ ಬೋಪಣ್ಣ ಪಾಲುಕರ್ನಾಟಕ ಮೂಲದ ರೋಹನ್ ಬೋಪಣ್ಣ ಅವರಿಗೀಗ 43 ವರ್ಷ

ಇಂಡಿಯಾನಾ ವೆಲ್ಸ್‌(ಅಮೆರಿಕ): 43 ವರ್ಷದ ಟೆನಿಸ್‌ ಆಟಗಾರ, ಕರ್ನಾಟಕದ ರೋಹನ್‌ ಬೋಪಣ್ಣ ಅಮೆರಿಕದ ಇಂಡಿಯಾನಾ ವೆಲ್ಸ್‌ ಎಟಿಪಿ ಮಾಸ್ಟರ್ಸ್‌​ 1000 ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಎಟಿಪಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ವಿಶ್ವದ ಅತಿಹಿರಿಯ ಟೆನಿಸಿಗ ಎನ್ನುವ ದಾಖಲೆ ಬೋಪಣ್ಣ ಹೆಸರಿಗೆ ಸೇರ್ಪಡೆಯಾಗಿದೆ.

ಆಸ್ಪ್ರೇಲಿಯಾದ 35ರ ಮ್ಯಾಥ್ಯೂ ಎಬ್ಡೆನ್‌ ಜೊತೆ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಬೋಪಣ್ಣ, ಫೈನಲ್‌ನಲ್ಲಿ ಅಗ್ರಶ್ರೇಯಾಂಕಿತ ಜೋಡಿಯಾದ ನೆದರ್‌ಲೆಂಡ್‌್ಸನ ವೆಸ್ಲೆ ಕೂಲ್‌ಹಾಫ್‌ ಹಾಗೂ ಬ್ರಿಟನ್‌ನ ನೀಲ್‌ ಸುಪ್ಸಿಕ್ ವಿರುದ್ಧ 6-3, 2-6, 10-8ರ ಅಂತರದಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ 2015ರಲ್ಲಿ ತಮಗೆ 42 ವರ್ಷ ವಯಸ್ಸಿದ್ದಾಗ ಸಿನ್ಸಿನಾಟಿ ಮಾಸ್ಟ​ರ್ಸ್‌ ಟ್ರೋಫಿ ಜಯಿಸಿ ಕೆನಡಾದ ಡೇನಿಯಲ್‌ ನೆಸ್ಟರ್‌ ಬರೆದಿದ್ದ ದಾಖಲೆಯನ್ನು ಬೋಪಣ್ಣ ಮುರಿದರು.

Scroll to load tweet…

ಕೊಡವ ಹಾಕಿ: ಆತಿಥೇಯ ಅಪ್ಪಚೆಟ್ಟೋಳಂಡಕ್ಕೆ ಜಯ

- ದುಗ್ಗಳ ಸದಾನಂದ, ಕನ್ನಡಪ್ರಭ

ನಾಪೋಕ್ಲು: 23ನೇ ಕೊಡವ ಕೌಟುಂಬಿಕ ‘ಹಾಕಿ ನಮ್ಮೆ’ ಟೂರ್ನಿಯಲ್ಲಿ ಆತಿಥೇಯ ಅಪ್ಪಚೆಟ್ಟೋಳಂಡ ತಂಡ ಶುಭಾರಂಭ ಮಾಡಿದೆ. ಮೊದಲ ದಿನವಾದ ಭಾನುವಾರ ಪೆಮ್ಮಡಿಯಂಡ, ಚೊಟ್ಟೆಯಂಡ, ಪುಟ್ಟಿಚಂಡ, ಚೇರಂಡ, ಕಬ್ಬಚ್ಚಿರ, ಅಮ್ಮಂಡ, ಕೊಂಡಿರ ತಂಡಗಳೂ ಗೆಲುವಿನ ಆರಂಭ ಪಡೆದವು.

ಕಟ್ಟೆನಗಡ ತಂಡವನ್ನು ಅಪ್ಟಚೆಟ್ಟೋಳಂಡ ತಂಡ ಸೋಲಿಸಿದರೆ, ಪೆಮ್ಮಡಿಯಂಡ ತಂಡ 4-3 ಗೋಲುಗಳಿಂದ ಮಚ್ಚುರ ತಂಡವನ್ನು ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಕಾಂಡಂಡ, ಪುಟ್ಟಿಚಂಡ ತಂಡವನ್ನು 1-0 ಅಂತರದಲ್ಲಿ, ಚೇರಂಡ ತಂಡ 2-0 ಗೋಲುಗಳಿಂದ ಅಲ್ಲಾರಂಡ ತಂಡದ ವಿರುದ್ಧ ಜಯಿಸಿತು.

Kodava Hockey Festival ಕೊಡವ ಕೌಟುಂಬಿಕ ಹಾಕಿಗೆ ಸಿಎಂ ಬಸವರಾಜ ಬೊಮ್ಮಾಯಿ ಅದ್ದೂರಿ ಚಾಲನೆ

ಮೇಚಿಯಂಡ ತಂಡದ ವಿರುದ್ಧ ಕಬ್ಬಚ್ಚಿರ ತಂಡ 2-1ರಲ್ಲಿ ಗೆದ್ದರೆ, ಅಮ್ಮಂತ ತಂಡವು ಕೂಪದಿರ ತಂಡದ ವಿರುದ್ಧ 2-1 ಗೋಲುಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಟೂರ್ನಿಯಲ್ಲಿ 336 ತಂಡಗಳು ಕಣಕ್ಕಿಳಿದಿದ್ದು, ಇಲ್ಲಿನ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದ ಮೂರು ಮೈದಾನಗಳಲ್ಲಿ ಪಂದ್ಯಗಳು ನಡೆಯುತ್ತಿವೆ.

ಬಾಕ್ಸಿಂಗ್‌: ಪ್ರಿ ಕ್ವಾರ್ಟರ್‌ಗೆ ನಿಖಾತ್‌, ಮನೀಶಾ ಲಗ್ಗೆ

ನವದೆಹಲಿ: ಭಾರತದ ತಾರಾ ಬಾಕ್ಸರ್‌, ಹಾಲಿ ವಿಶ್ವ ಚಾಂಪಿಯನ್‌ ನಿಖಾತ್‌ ಜರೀನ್‌ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಭಾನುವಾರ ನಡೆದ 50 ಕೆ.ಜಿ. ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಜರೀನ್‌, ಹಾಲಿ ಆಫ್ರಿಕಾ ಚಾಂಪಿಯನ್‌ ಅಲ್ಜೀರಿಯಾದ ಬೌವಾಲಮ್‌ ರೌಮಾಯ್ಸಾ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು.

ಮೊದಲ ಸುತ್ತಿನಲ್ಲಿ ತಾಂತ್ರಿಕ ಮುನ್ನಡೆಯೊಂದಿಗೆ ಗೆಲುವು ಪಡೆದಿದ್ದ ಜರೀನ್‌, 2ನೇ ಸುತ್ತಿನಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿದರು. ಇನ್ನು ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದ ಮನೀಶಾ ಮೌನ್‌ 57 ಕೆ.ಜಿ. ವಿಭಾಗದಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಆಸ್ಪ್ರೇಲಿಯಾದ ರಹಿಮಿ ಟೀನಾ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದ ಮನೀಶಾ ಅಂತಿಮ 16ರ ಸುತ್ತಿಗೆ ಲಗ್ಗೆಯಿಟ್ಟರು.