Asianet Suvarna News Asianet Suvarna News

ಅಪರೂಪದ ದಾಖಲೆಗೂ ಮುನ್ನ ಕ್ರಿಕೆಟ್’ಗೆ ಗುಡ್’ಬೈ ಹೇಳಿದ 4 ದಿಗ್ಗಜರಿವರು..!

ವಿಶ್ವ ಕ್ರಿಕೆಟ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಆದರೆ ಕೆಲವು ಅಪರೂಪದ ದಾಖಲೆಗಳನ್ನ ಬರೆಯೋ ಮೊದಲೇ ದಿಢೀರ್ ನಿವೃತ್ತಿ ಹೇಳಿ ರೆಕಾರ್ಡ್ ಮಿಸ್ ಮಾಡಿಕೊಂಡಿದ್ದಾರೆ. ಅಪರೂಪದ ದಾಖಲೆಗಳನ್ನು ಜಸ್ಟ್ ಮಿಸ್ ಮಾಡಿಕೊಂಡ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಡೀಟೇಲ್ಸ್ ಇಲ್ಲಿದೆ.
 

4 batting greats who retired just short of a major landmark in ODIs

ಬೆಂಗಳೂರು(ಜು.02): ಅಂಕಿಅಂಶಗಳು ಕ್ರೀಡೆಯ ಅವಿಭಾಜ್ಯ  ಅಂಗ.  ವರ್ಷಗಳ ಕಾಲ ತಂಡವೊಂದರ ಭಾಗವಾಗಿದ್ದ ಕೆಲ ಆಟಗಾರರು ಮಹತ್ವದ ದಾಖಲೆ ನಿರ್ಮಿಸುವ ಮುನ್ನ ನಿವೃತ್ತಿ ಘೋಷಿಸಿ ಕೆಲ ದಾಖಲೆಗಳಿಂದ ವಂಚಿತರಾದರು. ಯಾವ ದಾಖಲೆಗಳವು, ಯಾವ ಆಟಗಾರ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ....

4. ಎಬಿ ಡಿವಿಲಿಯರ್ಸ್- 9577 ರನ್’ಗಳು

4 batting greats who retired just short of a major landmark in ODIs
2018ರಲ್ಲಿ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್  ಅಚ್ಚರಿಯ ನಿವೃತ್ತಿ ಘೋಷಿಸಿದರು. 2019ರ ವಿಶ್ವಕಪ್’ವರೆಗೆ ಎಬಿಡಿ ಹರಿಣಗಳ ತಂಡ ಪ್ರತಿನಿಧಿಸಲಿದ್ದಾರೆ ಎಂಬ ಪ್ರೇಕ್ಷಕರ ನಿರೀಕ್ಷೆ ಹುಸಿಯಾಯಿತು. ಹಲವಾರು ಅಪರೂಪದ ದಾಖಲೆಗಳನ್ನು ಬರೆದಿರುವ ಎಬಿಡಿ ಏಕದಿನ ಕ್ರಿಕೆಟ್’ನಲ್ಲಿ ಕೇವಲ 423 ರನ್’ಗಳನ್ನು ಬಾರಿಸಿದ್ದರೆ 10 ಸಾವಿರ ರನ್ ಪೂರೈಸಿದವರ ಪಟ್ಟಿ ಸೇರುತ್ತಿದ್ದರು. ಆದರೆ 228 ಪಂದ್ಯಗಳಲ್ಲಿ 9577 ರನ್ ಸಿಡಿಸಿದ್ದಾಗ ದಿಢೀರ್ ನಿವೃತ್ತಿ ಘೋಷಿಸಿದ್ದರು. 

3. ಕುಮಾರ ಸಂಗಾಕ್ಕರ- 93 ಅರ್ಧಶತಕ ಹಾಗೂ 99 ಸ್ಟಂಪಿಂಗ್ಸ್

4 batting greats who retired just short of a major landmark in ODIs
2015ರ ವಿಶ್ವಕಪ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ ಕುಮಾರ ಸಂಗಾಕ್ಕರ ದಶಕಗಳ ಕಾಲ ಲಂಕಾ ತಂಡದ ಅವಿಭಾಜ್ಯ ಅಂಗವಾಗಿದ್ದರು. 2000ದಿಂದ 2015ರವರೆಗೆ 404 ಏಕದಿನ ಪಂದ್ಯವನ್ನಾಡಿದ್ದ ಸಂಗಾಕ್ಕರ 41.98ರ ಸರಾಸರಿಯಲ್ಲಿ 14,234 ರನ್ ಚಚ್ಚಿದ್ದಾರೆ. ಒಟ್ಟು 93 ಏಕದಿನ ಅರ್ಧಶತಕ ಬಾರಿಸಿರುವ ಸಂಗಾ ಸಚಿನ್’ಗಿಂತ(96) ಮೂರು ಅರ್ಧಶತಕಗಳಿಂದ ಹಿಂದಿದ್ದಾರೆ. ಅಲ್ಲದೇ ವಿಕೆಟ್ ಕೀಪಿಂಗ್’ನಲ್ಲಿ 99 ಸ್ಟಂಪ್ ಔಟ್ ಮಾಡಿದ್ದ ಲಂಕಾದ ಅನುಭವಿ ಕೀಪರ್ ಕೇವಲ 1  ಸ್ಟಂಪ್ ಮಾಡಿದ್ದರೂ 100 ಸ್ಟಂಪ್ ಔಟ್ ಮಾಡಿದ ಮೊದಲ ಕ್ರಿಕೆಟಿಗನೆನಿಸುತ್ತಿದ್ದರು. ಆ ಬಳಿಕ ಧೋನಿ 100 ಸ್ಟಂಪಿಗ್ಸ್ ಮಾಡಿದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು.

2 ಸಚಿನ್ ತೆಂಡುಲ್ಕರ್: 49 ಶತಕ

4 batting greats who retired just short of a major landmark in ODIs
ಅಂತರಾಷ್ಟ್ರೀಯ ಶತಕಗಳ ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. ಪಾಕಿಸ್ತಾನ ವಿರುದ್ಧ  1989ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡುಲ್ಕರ್ 2013ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿ ಕ್ರಿಕೆಟ್’ಗೆ ಭಾವನಾತ್ಮಕ ವಿದಾಯ ಹೇಳಿದ್ದರು. 2012ರ ಏಷ್ಯಾಕಪ್’ನಲ್ಲಿ ಸಚಿನ್ ಪಾಕಿಸ್ತಾನದ ವಿರುದ್ಧವೇ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಆ ಬಳಿಕ 2012ರ ಡಿಸೆಂಬರ್’ನಲ್ಲಿ ಏಕದಿನ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದರು.
ನೂರಾರು ದಾಖಲೆಗಳ ಒಡೆಯ ತೆಂಡುಲ್ಕರ್, 463 ಏಕದಿನ ಪಂದ್ಯಗಳನ್ನಾಡಿ 18426 ರನ್ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ 49 ಶತಕ ಸಿಡಿಸಿದ್ದ ಸಚಿನ್ ಇನ್ನೊಂದು ಶತಕ ಸಿಡಿಸಿದ್ದರೂ ಒನ್’ಡೇ ಕ್ರಿಕೆಟ್’ನಲ್ಲಿ 50 ಸಿಡಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆಯುತ್ತಿದ್ದರು.
 

1. ಅಡಂ ಗಿಲ್’ಕ್ರಿಸ್ಟ್- 9619 ರನ್

4 batting greats who retired just short of a major landmark in ODIs
ಕ್ರಿಕೆಟ್ ಜಗತ್ತು  ಕಂಡ ಸಾರ್ವಕಾಲಿಕ ವಿಕೆಟ್ ಕೀಪರ್’ಗಳಲ್ಲಿ ಆಸ್ಟ್ರೇಲಿಯಾ ತಂಡದ ಅಡಂ ಗಿಲ್’ಕ್ರಿಸ್ಟ್ ಕೂಡಾ ಒಬ್ಬರು. ಸ್ಫೋಟಕ ಎಡಗೈ ಬ್ಯಾಟ್ಸ್’ಮನ್ ಗಿಲ್ಲಿ 96 ಟೆಸ್ಟ್ ಹಾಗೂ 287 ಪಂದ್ಯಗಳಲ್ಲಿ ಆಸೀಸ್ ತಂಡವನ್ನು  ಪ್ರತಿನಿಧಿಸಿದ್ದಾರೆ.
96.94ರ ಸ್ಟ್ರೆಕ್’ರೇಟ್’ನಂತೆ 9619 ರನ್ ಚಚ್ಚಿದ್ದ ಗಿಲ್ಲಿ, ಕೇವಲ 381 ರನ್ ಬಾರಿಸಿದ್ದರೆ 10 ಸಾವಿರ ರನ್  ಪೂರೈಸಿದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿದ್ದರು. ನಿವೃತ್ತಿಗೂ ಮುನ್ನ ವಿಕೆಟ್ ಕೀಪರ್ ಬ್ಯಾಟ್ಸ್’ಮನ್’ವೊಬ್ಬ ಭಾರಿಸಿದ ಗರಿಷ್ಠ ರನ್’ಗಳಿವು. 2008ರ ಕಾಮನ್’ವೆಲ್ತ್ ಬ್ಯಾಂಕ್  ಸರಣಿ ಬಳಿಕ ಕ್ರಿಕೆಟ್’ಗೆ ಗುಡ್’ಬೈ ಹೇಳಿದ ಗಿಲ್ಲಿ ಕೆಲವೇ ನೂರು ರನ್’ಗಳ ಅಂತರದಲ್ಲಿ 10 ಸಾವಿರ ಬಾರಿಸಿದವರ ಕ್ಲಬ್ ಸೇರುವ ಮಹತ್ವದ ದಾಖಲೆಗಳಿಂದ ವಂಚಿತರರಾದರು.

Follow Us:
Download App:
  • android
  • ios