203 ರನ್ ಸುಲಭವಾಗಿಯೇ ಬೆನ್ನಟ್ಟುತ್ತಿದ್ದ ಇಂಗ್ಲೆಂಡ್ ತಂಡವನ್ನು ಸೋಲಿನ ಖೆಡ್ಡಕ್ಕೆ ತಳ್ಳಿದ್ದು ಯುಜುವೇಂದ್ರ ಚಹಾಲ್. ಹರ್ಯಾಣ ಪ್ಲೇಯರ್ ಆದರೂ ಬೆಂಗಳೂರು ಚಹಾಲ್'ಗೆ 2ನೇ ತವರು. ಕ್ರಿಕೆಟ್ ಜನಕರನ್ನು ಬೇಟೆಯಾಡಿದ ಆತ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ. ಚಹಾಲ್'ನ ಸ್ಪಿನ್ ಮ್ಯಾಜಿಕ್ ಹೇಗಿತ್ತು ಗೊತ್ತಾ?
ಬೆಂಗಳೂರು(ಫೆ.02): 203 ರನ್ ಸುಲಭವಾಗಿಯೇ ಬೆನ್ನಟ್ಟುತ್ತಿದ್ದ ಇಂಗ್ಲೆಂಡ್ ತಂಡವನ್ನು ಸೋಲಿನ ಖೆಡ್ಡಕ್ಕೆ ತಳ್ಳಿದ್ದು ಯುಜುವೇಂದ್ರ ಚಹಾಲ್. ಹರ್ಯಾಣ ಪ್ಲೇಯರ್ ಆದರೂ ಬೆಂಗಳೂರು ಚಹಾಲ್'ಗೆ 2ನೇ ತವರು. ಕ್ರಿಕೆಟ್ ಜನಕರನ್ನು ಬೇಟೆಯಾಡಿದ ಆತ 6 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ. ಚಹಾಲ್'ನ ಸ್ಪಿನ್ ಮ್ಯಾಜಿಕ್ ಹೇಗಿತ್ತು ಗೊತ್ತಾ?
ನಿಜಕ್ಕೂ ನಿನ್ನೆಯ ಪಂದ್ಯ ಇಂಗ್ಲೆಂಡ್ ಪರವೇ ಇತ್ತು. ಧಾರಾಳವಾಗಿ 202 ರನ್'ಗಳ ಬಿಟ್ಟುಕೊಟ್ಟ ಆಂಗ್ಲರು, ಭರ್ಜರಿಯಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. 13.2 ಓವರ್'ನಲ್ಲಿ 2 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದ್ದರು. ಯಾವ ಕಡೆಯಿಂದ ಲೆಕ್ಕಹಾಕಿದರೂ ಆಂಗ್ಲರ ಪರವೇ ಪಂದ್ಯ ಇತ್ತು. ಆದರೆ ಆ ಪಂದ್ಯವನ್ನು ಭಾರತದ ಪರ ಟರ್ನ್ ಮಾಡಿದ್ದು ಲೆಗ್'ಸ್ಪಿನ್ನರ್ ಯುಜವೇಂದ್ರ ಚಹಾಲ್.
ಇದು ಚಹಾಲ್ ಬೌಲಿಂಗ್ ಅಂಕಿಅಂಶ
ಖಾತೆ ತೆರೆಯುವ ಮುನ್ನವೇ ಸಾಮ್ ಬಿಲ್ಲಿಂಗ್ಸ್ ಅವರನ್ನು ಪೆವಿಲಿಯನ್'ಗೆ ಅಟ್ಟಿದ ಚಹಾಲ್, ಎರಡು ಓವರ್'ಗೆ 19 ರನ್ ನೀಡಿ ತಮ್ಮ ಮೊದಲ ಸ್ಪೆಲ್ ಕ್ಲೋಸ್ ಮಾಡಿದರು. ಆದರೆ 2ನೇ ಸ್ಪೆಲ್'ನಲ್ಲಿ ದಾಳಿಗಿಳಿದ ಚಹಾಲ್, ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿದರು. ಉಳಿದ ಎರಡು ಓವರ್ ಅಂದರೆ 12 ಬಾಲ್'ನಲ್ಲಿ 5 ವಿಕೆಟ್ ಕಬಳಿಸಿ ಹಾಕಿದರು. ತಮ್ಮ 3ನೇ ಓವರ್'ನಲ್ಲಿ 2 ವಿಕೆಟ್ ಪಡೆದ ಚಹಾಲ್, ತಮ್ಮ 4ನೇ ಓವರ್'ನಲ್ಲಿ 3 ವಿಕೆಟ್ ಕಬಳಿಸಿದರು. ಅಲ್ಲಿಗೆ 4 ಓವರ್'ನಲ್ಲಿ 25 ರನ್ ನೀಡಿ 6 ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು ಹೆಡೆಮುರಿ ಕಟ್ಟಿದರು.
ಭಾರತದ ಪರ ಬೆಸ್ಟ್ ಬೌಲಿಂಗ್: ವಿಶ್ವ ಕ್ರಿಕೆಟ್'ನಲ್ಲಿ 3ನೇ ಬೆಸ್ಟ್ ಬೌಲಿಂಗ್
ಯುಜುವೇಂದ್ರ ಚಹಾಲ್, 25 ರನ್'ಗೆ 6 ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್'ನಲ್ಲಿ ಭಾರತ ಪರ ಬೆಸ್ಟ್ ಬೌಲರ್ ಎನಿಸಿಕೊಂಡರೂ. ಅಶ್ವಿನ್ 8 ರನ್'ಗೆ 4 ವಿಕೆಟ್ ಪಡೆದಿದ್ದು ಇದುವರೆಗಿನ ಬೆಸ್ಟ್ ಬೌಲಿಂಗ್ ಆಗಿತ್ತು. ಇನ್ನು ಶ್ರೀಲಂಕಾದ ಅಜಂತ ಮೆಂಡಿಸ್, 8 ರನ್ಗೆ ಮತ್ತು 16 ರನ್'ಗೆ ತಲಾ 6 ವಿಕೆಟ್ ಟಿ20 ಕ್ರಿಕೆಟ್ನಲ್ಲಿ ಬೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ಮೆಂಡಿಸ್ ನಂತರ ಈಗ ಚಹಾಲ್ ಸ್ಥಾನ ಪಡೆದುಕೊಂಡಿದ್ದಾರೆ.
ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ಚಹಾಲ್'ಗೆ ಬೆಂಗಳೂರು 2ನೇ ತವರು. ಹೀಗಾಗಿ ಅವರ ಸಂಭ್ರಮ ಮನೆ ಮಾಡಿತ್ತು. ಭಾರತಕ್ಕೆ ಸರಣಿ ಗೆಲ್ಲಿಸಿಕೊಟ್ಟ ಚಹಾಲ್'ಗೆ ಪಂದ್ಯಶ್ರೇಷ್ಠ ಗೌರವ ನೀಡಲಾಯಿತು.
