ಕೊಹ್ಲಿ, ಎಬಿಡಿ ಹಾಗೂ ರಾಹುಲ್ ಇರುವ ಕವರ್ ಫೋಟೋವನ್ನು ಆರ್'ಸಿಬಿ ತನ್ನ ಅಧಿಕೃತ ಟ್ವೀಟರ್ ಟೈಮ್‌'ಲೈನ್‌'ನಲ್ಲಿ ಹಾಕಿದೆ.
ಬೆಂಗಳೂರು(ಜ.03): 11ನೇ ಆವೃತ್ತಿಗೆ ಆರ್'ಸಿಬಿ ತನ್ನ ನಾಯಕ ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದೆ ಎನ್ನುವ ಚರ್ಚೆ ನಡೆಯುತ್ತಿತ್ತು. ತಂಡದ ಗೊಂದಲವೀಗ ಪರಿಹಾರವಾದಂತಿದೆ.
ಹೌದು, ಕೊಹ್ಲಿ ಜತೆ ಎಬಿ ಡಿವಿಲಿಯರ್ಸ್ ಹಾಗೂ ಕೆ.ಎಲ್.ರಾಹುಲ್'ರನ್ನು ಉಳಿಸಿಕೊಳ್ಳಲು ತಂಡದ ಮಾಲೀಕರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಕೊಹ್ಲಿ, ಎಬಿಡಿ ಹಾಗೂ ರಾಹುಲ್ ಇರುವ ಕವರ್ ಫೋಟೋವನ್ನು ಆರ್'ಸಿಬಿ ತನ್ನ ಅಧಿಕೃತ ಟ್ವೀಟರ್ ಟೈಮ್'ಲೈನ್'ನಲ್ಲಿ ಹಾಕಿದೆ.
ಜತೆಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಭಿಮಾನಿಗಳಿಂದ ಮತ ಸಮೀಕ್ಷೆ ನಡೆಸುತ್ತಿದ್ದು, ಇದುವರೆಗೂ ಚಲಾವಣೆಯಾಗಿರುವ 55 ಸಾವಿರ ಮತಗಳಲ್ಲಿ ಕೊಹ್ಲಿ ಹಾಗೂ ಎಬಿಡಿಗೆ ತಲಾ ಶೇ.32ರಷ್ಟು, ರಾಹುಲ್'ಗೆ ಶೇ.10ರಷ್ಟು ಮತಗಳು ಬಿದ್ದಿವೆ.
