ಫಿಕ್ಸಿಂಗ್ ಸುಳಿಯಲ್ಲಿ ಭಾರತದ 3 ಟೆಸ್ಟ್’ಗಳು..!

3 India Tests under scanner in pitch-fixing sting
Highlights

ಅಲ್ ಜಜೀರಾ ಸುದ್ದಿ ವಾಹಿನಿ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್(2017), ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ರಾಂಚಿ ಟೆಸ್ಟ್ (2017), ಭಾರತ ಹಾಗೂ ಇಂಗ್ಲೆಂಡ್ ನಡುವಿನ ಚೆನ್ನೈ ಟೆಸ್ಟ್ (2016)ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.

ನವದೆಹಲಿ[ಮೇ.28]: ವಿಶ್ವ ಕ್ರಿಕೆಟ್‌ನ ಅಗ್ರ ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಪಾಲ್ಗೊಂಡಿದ್ದ ಟೆಸ್ಟ್ ಪಂದ್ಯಗಳ ಮೇಲೆ ಫಿಕ್ಸಿಂಗ್ ಕರಿನೆರಳು ಬಿದ್ದಿದೆ. ಅಲ್ ಜಜೀರಾ ಸುದ್ದಿ ವಾಹಿನಿ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್(2017), ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ರಾಂಚಿ ಟೆಸ್ಟ್ (2017), ಭಾರತ ಹಾಗೂ ಇಂಗ್ಲೆಂಡ್ ನಡುವಿನ ಚೆನ್ನೈ ಟೆಸ್ಟ್ (2016)ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಲಂಕಾ ಹಾಗೂ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾ ವಿರುದ್ಧ ರಾಂಚಿ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿತ್ತು. ರಹಸ್ಯ ಕಾರ್ಯಾಚರಣೆಯ ಪ್ರಕಾರ, ಭಾರತ-ಲಂಕಾ ನಡುವಿನ ಗಾಲೆ ಟೆಸ್ಟ್‌ನಲ್ಲಿ ಪಿಚ್ ಫಿಕ್ಸಿಂಗ್ ನಡೆದಿದ್ದರೆ, ಇನ್ನುಳಿದ 2 ಟೆಸ್ಟ್‌ಗಳಲ್ಲಿ ಕೆಲ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಭಾರತ ಯಾವುದೇ ಆಟಗಾರರ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿಲ್ಲ. ಫಿಕ್ಸಿಂಗ್ ರೂವಾರಿ, ಮುಂಬೈನ ಮಾಜಿ ಕ್ರಿಕೆಟಿಗ ರಾಬಿನ್ ಮೋರಿಸ್ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಐಸಿಸಿ ತನಿಖೆ ಮುಕ್ತಾಯಗೊಂಡು ವರದಿ ನೀಡಿದ ಮೇಲೆ ನಿರ್ಧರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಇದೇ ವೇಳೆ ತನ್ನ ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿರುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ನಿರಾಕರಿಸಿವೆ. ಅಲ್ ಜಜೀರಾ ಸುದ್ದಿ ವಾಹಿನಿ ಸೂಕ್ತ ದಾಖಲೆಗಳನ್ನು ನೀಡಲಿ ಎಂದು ಕೇಳಿವೆ. ‘ಅಲ್ ಜಜೀರಾರಹಸ್ಯ ಕಾರ್ಯಾಚರಣೆ ನಡೆಸಿದೆ ಎನ್ನುವ ವಿಷಯ ಮೊದಲೇ ತಿಳಿದಿತ್ತು. ದಾಖಲೆಗಳನ್ನು ಹಸ್ತಾಂತರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಆಟಗಾರರ ಮೇಲೆ ವಿನಾಕಾರಣ ಅನುಮಾನ ಪಡಲು ನಾವು ಸಿದ್ಧವಿಲ್ಲ’ ಎಂದು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಹೇಳಿದೆ. 
ರಹಸ್ಯ ಕಾರ್ಯಾಚರಣೆಯಲ್ಲಿ ಏನಿದೆ?
ಅಲ್ ಜಜೀರಾ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ರಾಬಿನ್ ಮೋರಿಸ್, ಬೇಹುಗಾರಿಕೆ ನಡೆಸುತ್ತಿರುವ ಸಂಸ್ಥೆಯ ವರದಿಗಾರನಿಗೆ ಗಾಲೆ ಕ್ರೀಡಾಂಗಣದ ಪಿಚ್ ಕ್ಯುರೇಟರ್‌ಗೆ ಪರಿಚಯಿಸಿ ಫಿಕ್ಸರ್‌ಗಳು ಹೇಗೆ ಕೇಳುತ್ತಾರೋ ಅದೇ ರೀತಿ ಪಿಚ್ ತಯಾರಿಸಲು ಸಿದ್ಧ ಎಂದು ಹೇಳುತ್ತಿರುವುದು ದಾಖಲಾಗಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜಾ ಸಹ ಇದ್ದಾರೆ ಎನ್ನಲಾಗಿದೆ. ಇದೇ ವೇಳೆ ಮತ್ತೊಬ್ಬ ಶಂಕಿತ ಮ್ಯಾಚ್ ಫಿಕ್ಸರ್ ಅನೀಲ್ ಮುನಾವರ್ ಪಂದ್ಯದ ಕೆಲ ಅವಧಿಗಳಲ್ಲಿ ಆಟಗಾರರು ಫಿಕ್ಸಿಂಗ್ ನಡೆಸಲು ಸಿದ್ಧ ಎನ್ನುವುದು ದಾಖಲಾಗಿದೆ. ಭೂಗತ ಜಗತ್ತಿನ ಜತೆ ಸಂಪರ್ಕವಿರುವ ಮುನಾವರ್ ಹೇಳಿದ್ದ ರೀತಿಯಲ್ಲೇ ರಾಂಚಿ ಹಾಗೂ ಚೆನ್ನೈ ಟೆಸ್ಟ್‌ಗಳಲ್ಲಿ ನಿಗದಿತ ಓವರ್‌ಗಳಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಬ್ಯಾಟ್ಸ್‌ಮನ್
ಗಳು ರನ್ ಗಳಿಸಿದ್ದಾರೆ ಎನ್ನಲಾಗಿದೆ. 

loader