ಟ್ರಿನಿಡಾಡ್(ಆ.11): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಹಾಗೂ ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ ವಿಕೆಟ್ 7 ನಷ್ಟಕ್ಕೆ 279 ರನ್ ಸಿಡಿಸಿದೆ. ಆರಂಭಿಕರ ವೈಫಲ್ಯದ ಹೊರತಾಗಿಯೂ ಟೀಂ ಇಂಡಿಯಾ ವಿಂಡೀಸ್ ವಿರುದ್ಧ ಉತ್ತಮ ಮೊತ್ತ ಪೇರಿಸಿದೆ. ಈ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ 280 ರನ್ ಸಿಡಿಸಬೇಕಿದೆ. 

ಟೀಂ ಇಂಡಿಯಾಗೆ ಆರಂಭಿಕರು ಆಸರೆಯಾಗಲಿಲ್ಲ. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಹೋರಾಟ ನೆರವಾಯಿತು. ಕೊಹ್ಲಿ 42ನೇ ಶತಕ ಪೂರೈಸಿದರು. ಕೊಹ್ಲಿ 120 ರನ್ ಸಿಡಿಸಿ ಔಟಾದರು. ಸಿಕ್ಕ  ಅವಕಾಶದಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. ಇಷ್ಟು ದಿನ ಟೀಂ ಇಂಡಿಯಾದಲ್ಲಿ ಆಡಲು ಕಾಯುತ್ತಿದ್ದ ಅಯ್ಯರ್, ಭರ್ಜರಿ ಹಾಫ್ ಸೆಂಚುರಿ ಬಾರಿಸಿದರು. 

ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಹೊರತು ಪಡಿಸಿದರೆ ಇತರರಿಂದ ಹೆಚ್ಚಿನ ರನ್ ಹರಿದು  ಬರಲಿಲ್ಲ. ಶ್ರೇಯಸ್ ಅಯ್ಯರ್ 71 ರನ್ ಸಿಡಿಸಿ ಔಟಾದರು. ಕೇದಾರ್ ಜಾಧವ್ 16 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ ಅಜೇಯ 16 ರನ್ ಸಿಡಿಸಿದರು. ಈ ಮೂಲಕ  ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 279 ರನ್ ಸಿಡಿಸಿತು.