ವಿಶ್ವಕಪ್ 2019: ಭಾರತಕ್ಕೆ ಸವಾಲು ನೀಡಬಲ್ಲ 3 ತಂಡಗಳು ಯಾವುದು?

2019 World Cup: 3 Teams that can Potentially Challenge India's World Cup hopes
Highlights

ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಕೆಲ ತಂಡಗಳು ಕಠಿಣ ಸವಾಲು ಒಡ್ಡಲಿದೆ. ಏಕದಿನ ಮಾದರಿಯಲ್ಲಿ 2ನೇ ಸ್ಥಾನದಲ್ಲಿರೋ ಭಾರತಕ್ಕೆ ಸವಾಲು ನೀಡೋ ತಂಡಗಳು ಯಾವುದು? ಇಲ್ಲಿದೆ ವಿವರ.

ಬೆಂಗಳೂರು(ಜೂ.19): ವಿಶ್ವಕಪ್ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳ ಪೈಕಿ ಟೀಂ ಇಂಡಿಯಾ ಮುಂಚೂಣಿಯಲ್ಲಿದೆ. ವಿರಾಟ್ ಕೊಹ್ಲಿ ನಾಯಕತ್ವ ಹಾಗೂ ಧೋನಿ ಅನುಭವ 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಹಕಾರಿಯಾಗಿದೆ.  ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಕನಿಷ್ಠ 3 ತಂಡಗಳು ಕಠಿಣ ಸವಾಲು ನೀಡಲಿದೆ. 

ಇಂಗ್ಲೆಂಡ್:
ಇಂಗ್ಲೆಂಡ್ ತವರಿನಲ್ಲಿ ನಡೆಯಲಿರುವ ಮುಂಬರೋ ವಿಶ್ವಕಪ್ ಟೂರ್ನಿ ಭಾರತದ ಪಾಲಿಗೆ ಸವಾಲಾಗಿದೆ. ಆತಿಥೇಯ ಇಂಗ್ಲೆಂಡ್ ತಂಡ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿದೆ. ಸದ್ಯ ಏಕದಿನದಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡದಲ್ಲಿ ಏಕದಿನ ಸ್ಪೆಷಲಿಸ್ಟ್‌ಗಳ ದಂಡೇ ಇದೆ. ಹೀಗಾಗಿ ಇಂಗ್ಲೆಂಡ್ ತಂಡ ಭಾರತಕ್ಕೆ ಚಾಲೆಂಜ್ ನೀಡಲಿದೆ. ಆದೆರೆ 2013ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ, ಆತಿಥೇಯ ಇಂಗ್ಲೆಂಡ್ ತಂಡವನ್ನೇ ಮಣಿಸಿ ಪ್ರಶಸ್ತಿ ಗೆದ್ದಿತ್ತು ಅನ್ನೋದನ್ನ ಮರೆಯೋ ಹಾಗಿಲ್ಲ.

ಸೌತ್ಆಫ್ರಿಕಾ:
ಯಾವುದೇ ಕಂಡೀಷನ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡೋ ತಂಡ ಸೌತ್ಆಫ್ರಿಕಾ. ಬಲಿಷ್ಠ ತಂಡಗಳ ವಿರುದ್ಧ ಸೌತ್ಆಫ್ರಿಕಾ ಯಶಸ್ಸು ಸಾಧಿಸಿದೆ. ಸ್ಫೋಟಕ ಬ್ಯಾಟ್ಸ್‌ಮನ್, ಅಗ್ರಮಾನ್ಯ ವೇಗಿಗಳು ಹಾಗೂ ಸ್ಪಿನ್ನರ್‌ಗಳನ್ನೊಳಗೊಂಡ ಸೌತ್ಆಫ್ರಿಕಾ ಟೀಂ ಇಂಡಿಯಾಗೆ ಸವಾಲು ನೀಡಲಿದೆ. 

ಆಸ್ಟ್ರೇಲಿಯಾ:
ಸದ್ಯ ಆಸ್ಟ್ರೇಲಿಯಾ ತಂಡ ಏಕದಿನ ಸ್ಥಾನದಲ್ಲಿ ಕುಸಿತ ಕಂಡಿದೆ. ಆದರೆ ಆಸಿಸ್ ಬಲಿಷ್ಠ ತಂಡ ಅನ್ನೋದು ಮರೆಯುವಂತಿಲ್ಲ. ಭಾರತಕ್ಕೆ ಪ್ರತಿ ಭಾರಿ ಆಸ್ಟ್ರೇಲಿಯಾ ಕಠಿಣ ಸವಾಲು ನೀಡಿದೆ. ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧವೇ ಸೋತು ಟೂರ್ನಿಯಿಂದ ಹೊರಬಿದ್ದಿತು. ಈ ಬಾರಿಯೂ ಆಸಿಸ್ ತಂಡ ಭಾರತದ ವಿರುದ್ಧ ಕಠಿಣ ಹೋರಾಟ ನೀಡಲಿದೆ.
 

loader