ವಿಡಿಯೋವನ್ನು ಟ್ವೀಟ್ ಮಾಡಿರುವ ಐಸಿಸಿ, ‘ಅಲಿ, ಈ ಬಾರಿ ಐಸಿಸಿ ವಾರದ ಅಭಿಮಾನಿ ನೀನು. ನಿನ್ನ ತಂದೆಯೊಂದಿಗೆ ಇದೇ ರೀತಿ ಅಭ್ಯಾಸ ಮಾಡಿದರೆ ಒಂದು ದಿನ ಬಾಂಗ್ಲಾದೇಶ ತಂಡದ ಪರ ಆಡುವುದು ಖಚಿತ’ ಎಂದು ಬರೆದಿದೆ. ಅಲಿಯ ಬ್ಯಾಟಿಂಗ್ ಕಲೆಯನ್ನು ಕ್ರಿಕೆಟ್ ಅಭಿಮಾನಿಗಳು ಕೊಂಡಾಡಿದ್ದಾರೆ.

ದುಬೈ(ಜು.27]: ಬಾಂಗ್ಲಾದೇಶದ 2 ವರ್ಷದ ಅಲಿ ಎನ್ನುವ ಬಾಲಕ ವೃತ್ತಿಪರ ಕ್ರಿಕೆಟಿಗರಂತೆ ಬ್ಯಾಟ್ ಬೀಸುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ವೀಕ್ಷಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮನ ಸೋತಿದೆ. 

ವಿಡಿಯೋವನ್ನು ಟ್ವೀಟ್ ಮಾಡಿರುವ ಐಸಿಸಿ, ‘ಅಲಿ, ಈ ಬಾರಿ ಐಸಿಸಿ ವಾರದ ಅಭಿಮಾನಿ ನೀನು. ನಿನ್ನ ತಂದೆಯೊಂದಿಗೆ ಇದೇ ರೀತಿ ಅಭ್ಯಾಸ ಮಾಡಿದರೆ ಒಂದು ದಿನ ಬಾಂಗ್ಲಾದೇಶ ತಂಡದ ಪರ ಆಡುವುದು ಖಚಿತ’ ಎಂದು ಬರೆದಿದೆ. ಅಲಿಯ ಬ್ಯಾಟಿಂಗ್ ಕಲೆಯನ್ನು ಕ್ರಿಕೆಟ್ ಅಭಿಮಾನಿಗಳು ಕೊಂಡಾಡಿದ್ದಾರೆ.

Scroll to load tweet…

ಪ್ರತಿ ಎಸೆತವನ್ನು ಕವರ್ ಡ್ರೈವ್ ಮಾಡುವ ಅಲಿ ಆಟ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಚಿನ್ ತೆಂಡುಲ್ಕರ್, ಜ್ಯಾಕ್ ಕಾಲೀಸ್ ಮತ್ತು ರಾಹುಲ್ ಡ್ರಾವಿಡ್ ಕವರ್ ಡ್ರೈವ್ ಮಾಡುವುದಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದರು. ಇದೀಗ ಅಲಿ ಕೂಡಾ ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಬ್ಯಾಟಿಂಗ್’ನಲ್ಲಿ ಅದ್ಭುತ ಚಾಕಚಕ್ಯತೆ ಮೆರೆಯುತ್ತಿದ್ದಾರೆ.