Asianet Suvarna News Asianet Suvarna News

ಇತಿಹಾಸದ ಮೆಲುಕು: 1983ರ ವಿಶ್ವಕಪ್ ಗೆದ್ದ ಭಾರತ ತಂಡ ಹೇಗಿತ್ತು..?

1983ರ ವಿಶ್ವಕಪ್ ಎತ್ತಿಹಿಡಿದ ಭಾರತ ತಂಡ ಹೊಸ ಇತಿಹಾಸ ನಿರ್ಮಿಸಿತ್ತು. ಎರಡು ಬಾರಿ ವಿಶ್ವಕಪ್ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ವಿಶ್ವಾಸದಲ್ಲಿದ್ದ ಕೆರಿಬಿಯನ್ ಪಡೆಗೆ ಕಪಿಲ್ ಡೆವಿಲ್ಸ್ ತಂಡ ಶಾಕ್ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು

1983 World Cup The Incredible Fourteen of Team India

ಬೆಂಗಳೂರು[ಜೂ.25]: 1983ರ ವಿಶ್ವಕಪ್ ಎತ್ತಿಹಿಡಿದ ಭಾರತ ತಂಡ ಹೊಸ ಇತಿಹಾಸ ನಿರ್ಮಿಸಿತ್ತು. ಎರಡು ಬಾರಿ ವಿಶ್ವಕಪ್ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ವಿಶ್ವಾಸದಲ್ಲಿದ್ದ ಕೆರಿಬಿಯನ್ ಪಡೆಗೆ ಕಪಿಲ್ ಡೆವಿಲ್ಸ್ ತಂಡ ಶಾಕ್ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ 14 ಆಟಗಾರರ ಸಂಪೂರ್ಣ ಪಟ್ಟಿ ನಿಮ್ಮ ಮುಂದೆ..
1. ಸುನಿಲ್ ಗವಾಸ್ಕರ್:
ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಬ್ಯಾಟ್ಸ್’ಮನ್’ಗಳಲ್ಲಿ ಸುನಿಲ್ ಗವಾಸ್ಕರ್ ಕೂಡಾ ಒಬ್ಬರು. ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಆರಂಭ ಒದಗಿಸುತ್ತಿದ್ದ ಸನ್ನಿ ಫೈನಲ್ ಪಂದ್ಯದಲ್ಲಿ ಕೇವಲ 2 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು.
2. ಕೃಷ್ಣಮಾಚಾರಿ ಶ್ರೀಕಾಂತ್
1981ರಲ್ಲಿ 21 ವರ್ಷದವರಿದ್ದಾಗ ಟೀಂ ಇಂಡಿಯಾ ಪದಾರ್ಪಣೆ ಮಾಡಿದ್ದ ಕೆ. ಶ್ರೀಕಾಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆರಂಭಿಕವರಾಗಿ ಮಿಂಚಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಮೊಯಿಂದರ್ ಅಮರ್’ನಾಥ್ ಜತೆ 57 ರನ್’ಗಳ ಜತೆಯಾಟ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.
3. ಮೊಯಿಂದರ್ ಅಮರ್’ನಾಥ್:
1983ರ ವಿಶ್ವಕಪ್ ಗೆಲುವಿನ ಪ್ರಮುಖ ಶಿಲ್ಪಿ ಮೊಯಿಂದರ್ ಅಮರ್’ನಾಥ್. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 26 ರನ್ ಹಾಗೂ 3 ವಿಕೆಟ್ ಕಬಳಿಸಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು. ಜತೆಗೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.
4. ಯಶ್’ಪಾಲ್ ಶರ್ಮಾ
ವಿಶ್ವಕಪ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ತೋರಿದ ಬ್ಯಾಟ್ಸ್’ಮನ್’ಗಳಲ್ಲಿ ಯಶ್’ಪಾಲ್ ಶರ್ಮಾ ಕೂಡಾ ಒಬ್ಬರು. ಟೂರ್ನಿಯಲ್ಲಿ 240 ರನ್ ಬಾರಿಸುವುದರೊಂದಿಗೆ ಭಾರತ ಪರ ಎರಡನೇ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್’ಮನ್ ಎನಿಸಿದ್ದಾರೆ.
5. ಸಂದೀಪ್ ಪಾಟೀಲ್:
1983ರ ವಿಶ್ವಕಪ್ ಹೀರೋಗಳಲ್ಲಿ ಸಂದೀಪ್ ಪಾಟೀಲ್ ಕೂಡಾ ಒಬ್ಬರು. 90ರ ಸ್ಟ್ರೈಕ್ ರೇಟ್’ನಲ್ಲಿ ಸಂದೀಪ್ ಪಾಟೀಲ್ 216 ರನ್ ಚಚ್ಚಿದ್ದರು.
6. ಕಪಿಲ್ ದೇವ್
ಭಾರತ ಕಂಡ ಶ್ರೇಷ್ಠ ಆಲ್ರೌಂಡರ್, ಯಶಸ್ವಿ ನಾಯಕರ ಪಟ್ಟಿಯಲ್ಲಿ ಕಪಿಲ್ ದೇವ್’ಗೆ ಅಗ್ರಸ್ಥಾನ. ಗ್ರೂಪ್ ಹಂತದಲ್ಲಿ ಜಿಂಬಾಬ್ವೆ ವಿರುದ್ದ 175 ರನ್ ಸಿಡಿಸಿದ್ದು ಕಪಿಲ್ ದೇವ್ ಅವರ ಸ್ಮರಣೀಯ ಇನ್ನಿಂಗ್ಸ್’ಗಳಲ್ಲಿ ಒಂದು.
7.ಕೀರ್ತಿ ಆಜಾದ್
ಕೀರ್ತಿ ಆಜಾದ್ ವಿಶ್ವಕಪ್’ನಲ್ಲಿ ಆಡಿದ್ದು ಕೊನೆಯ ಮೂರು ಪಂದ್ಯಗಳಾಗಿದ್ದರೂ, ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ತಂಡದ ಇಯಾನ್ ಬಾಥಮ್ ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.
8. ರೋಜರ್ ಬಿನ್ನಿ
ಕರ್ನಾಟಕದ ಪ್ರತಿಭೆ ರೋಜರ್ ಬಿನ್ನಿ 1983ರ ವಿಶ್ವಕಪ್’ನಲ್ಲಿ 18 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಟ ವಿಕೆಟ್ ಪಡೆದ ಬೌಲರ್ ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು.
9. ಮದನ್ ಲಾಲ್
ಟೀಂ ಇಂಡಿಯಾದ ಯಶಸ್ವಿ ಆಲ್ರೌಂಡರ್’ಗಳಲ್ಲಿ ಮದನ್ ಲಾಲ್ ಕೂಡಾ ಒಬ್ಬರು. ಫೈನಲ್ ಪಂದ್ಯದ ಆರಂಭದಲ್ಲೇ ವಿಂಡೀಸ್’ಗೆ ಆಫಾತ ನೀಡುವಲ್ಲಿ ಯಶಸ್ವಿಯಾಗಿದ್ದರು. ಜತೆಗೆ ಬ್ಯಾಟಿಂಗ್’ನಲ್ಲಿ 17 ರನ್ ಬಾರಿಸಿದ್ದರು.
10. ಸಯ್ಯದ್ ಕಿರ್ಮಾನಿ:
ಕರ್ನಾಟಕದ ಇನ್ನೋರ್ವ ಪ್ರತಿಭೆ. ಭಾರತ ಕ್ರಿಕೆಟ್ ಕಂಡ ಯಶಸ್ವಿ ವಿಕೆಟ್ ಕೀಪರ್’ಗಳಲ್ಲಿ ಕಿರ್ಮಾನಿ ಕೂಡಾ ಒಬ್ಬರು. ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 14 ಬಲಿ ಪಡೆಯುವ ಮೂಲಕ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
11. ಬಲ್ವೀಂದರ್ ಸಂದು:
ಟೀಂ ಇಂಡಿಯಾದ ಮಧ್ಯಮ ವೇಗದ ಬೌಲರ್. ಫೈನಲ್ ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸಿದ್ದರು.
12. ದಿಲೀಪ್ ವೆಂಗ್’ಸರ್ಕಾರ್
ವೆಂಗ್’ಸರ್ಕಾರ್ 1983ರ ವಿಶ್ವಕಪ್’ನಲ್ಲಿ ಮೂರು ಪಂದ್ಯಗಳಲ್ಲಿ ಭಾರತ ಪರ ಕಣಕ್ಕಿಳಿದಿದ್ದರು.
13. ರವಿಶಾಸ್ತ್ರಿ
ಭಾರತದ ಆಲ್ರೌಂಡರ್. ಒಟ್ಟು 5 ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸಿದ್ದರು.
14. ಸುನಿಲ್ ವಾಲ್ಸನ್
ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರೂ ಒಂದೇ ಒಂದು ಪಂದ್ಯವಾಡಲು ಅವಕಾಶ ಸಿಕ್ಕಿರಲಿಲ್ಲ.   

Follow Us:
Download App:
  • android
  • ios