ಮುಂಬೈ[ಮಾ.25]: ಜಮ್ಮು-ಕಾಶ್ಮೀರ ಕ್ರಿಕೆಟ್‌ಗೆ ಭಾನುವಾರ ವಿಶೇಷ ದಿನ. ಕಾರಣ, ರಾಜ್ಯದ 17 ವರ್ಷದ ವೇಗದ ಬೌಲರ್‌ ರಸಿಖ್‌ ಸಲಾಂ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಐಪಿಎಲ್‌ಗೆ ಕಾಲಿಟ್ಟಜಮ್ಮು-ಕಾಶ್ಮೀರದ ಕೇವಲ 2ನೇ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾದರು. ಈ ಮೊದಲು ಪರ್ವೇಜ್‌ ರಸೂಲ್‌ ಸನ್‌ರೈಸ​ರ್‍ಸ್ ತಂಡದಲ್ಲಿ ಆಡಿದ್ದರು.

ತಂಡದ ಬೌಲಿಂಗ್‌ ಮಾರ್ಗದರ್ಶಕ ಜಹೀರ್‌ ಖಾನ್‌ರಿಂದ ಮುಂಬೈ ಇಂಡಿಯನ್ಸ್‌ ತಂಡ ಕ್ಯಾಪ್‌ ಸ್ವೀಕರಿಸಿದ ಸಲಾಂ, ತಂಡದ ಪರ ಬೌಲಿಂಗ್‌ ಆರಂಭಿಸಿದರು. ಜಮ್ಮುವಿನ ಕುಲ್ಗಾಮ್‌ ಜಿಲ್ಲೆಯವರಾದ ಸಲಾಂ, ಶಾಲಾ ಶಿಕ್ಷಕರ ಪುತ್ರ. ಸ್ಥಳೀಯ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಕಬಳಿಸಿ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದ ಸಲಾಂ, ವಿಜಯ್‌ ಹಜಾರೆ ಟ್ರೋಫಿಯಲ್ಲಿ ಆಡಿದ್ದರು.

ಭಾರತದ ಮಾಜಿ ವೇಗಿ ಇರ್ಫಾನ್‌ ಪಠಾಣ್‌ರಿಂದ ಬೌಲಿಂಗ್‌ ಪಾಠ ಕಲಿತ ಸಲಾಂರನ್ನು ಮುಂಬೈ ಇಂಡಿಯನ್ಸ್‌ ತಂಡ ಹರಾಜಿನಲ್ಲಿ .20 ಲಕ್ಷಕ್ಕೆ ಖರೀದಿಸಿತ್ತು. ಸಲಾಂ ತಾವು ಈ ಹಂತಕ್ಕೆ ತಲುಪಲು ಪಠಾಣ್‌ ಮಾರ್ಗದರ್ಶನ ಕಾರಣ ಎಂದು ಹೇಳಿಕೊಂಡಿದ್ದಾರೆ.