ಚೆಸ್ ಲೆಜೆಂಡ್‌ ವಿಶ್ವನಾಥನ್ ಆನಂದ್ ಹಿಂದಿಕ್ಕಿದ ಡಿ ಗುಕೇಶ್‌ ನಂ.1..!

* ದಿಗ್ಗಜ ವಿಶ್ವನಾಥನ್‌ ಆನಂದ್‌ರನ್ನು ಹಿಂದಿಕ್ಕಿ ಭಾರತದ ನಂ.1 ಆಟಗಾರ ಎನಿಸಿದ ಡಿ ಗುಕೇಶ್
* 1991ರ ಜುಲೈನಲ್ಲಿ ಮೊದಲ ಬಾರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಪಟ್ಟಿಗೆ ಸೇರ್ಪಡೆಗೊಂಡಿದ್ದ ವಿಶ್ವನಾಥನ್ ಆನಂದ್
* ಗುಕೇಶ್‌ರ ಲೈವ್ ರೇಟಿಂಗ್ 2755.9 ಅಂಕಕ್ಕೆ ಏರಿಕೆಯಾಗಿದೆ
 

17 year old D Gukesh Overtakes GM Viswanathan Anand As India Top-Ranked Chess Player kvn

ನವದೆಹಲಿ(ಆ.04): 17  ವರ್ಷದ ಡಿ. ಗುಕೇಶ್‌ ಅಂತಾರಾಷ್ಟ್ರೀಯ ಚೆಸ್‌ನ ಲೈವ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ದಿಗ್ಗಜ ವಿಶ್ವನಾಥನ್‌ ಆನಂದ್‌ರನ್ನು ಹಿಂದಿಕ್ಕಿ ಭಾರತದ ನಂ.1 ಆಟಗಾರ ಎನಿಸಿದ್ದಾರೆ. ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ 2ನೇ ಸುತ್ತಿನಲ್ಲಿ ಸ್ಥಳೀಯ ಆಟಗಾರ ಇಸ್ಕ್ಯಾನ್ಡರೊವ್ ವಿರುದ್ದ ಗೆಲುವು ಸಾಧಿಸಿ 2.5 ರೇಟಿಂಗ್ ಅಂಕಗಳನ್ನು ಗಳಿಸಿದರು. ಇದರೊಂದಿಗೆ ಗುಕೇಶ್‌ರ ಲೈವ್ ರೇಟಿಂಗ್ 2755.9 ಅಂಕಕ್ಕೆ ಏರಿಕೆಯಾಗಿದ್ದು, ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನಕ್ಕೇರಿದ್ದಾರೆ. ಆನಂದ್‌ 2754.0 ಅಂಕ ಹೊಂದಿದ್ದು, ಒಂದು ಸ್ಥಾನ ಇಳಿಕೆ ಕಂಡು 10ನೇ ಸ್ಥಾನ ಪಡೆದಿದ್ದಾರೆ.

1991ರ ಜುಲೈನಲ್ಲಿ ಮೊದಲ ಬಾರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಪಟ್ಟಿಗೆ ಸೇರ್ಪಡೆಗೊಂಡಿದ್ದ ವಿಶ್ವನಾಥನ್ ಆನಂದ್, 1987ರ ಜನವರಿಯಿಂದಲೂ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ನಂ.1 ಆಟಗಾರನಾಗಿ ಮುಂದುವರೆದಿದ್ದರು. ಡಿ ಗುಕೇಶ್ ಮುಂದಿನ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಗೊಳ್ಳುವವರೆಗೂ(ಸೆ.01) ರೇಟಿಂಗ್ ಕಾಯ್ದುಕೊಂಡರೆ, 1986ರಲ್ಲಿ ಪ್ರವೀಣ್ ಥಿಪ್ಸೆ ಬಳಿಕ ಆನಂದ್‌ಗಿಂತ ಉತ್ತಮ ರ‍್ಯಾಂಕಿಂಗ್‌ ಪಡೆದ ಮೊದಲ ಆಟಗಾರ ಎನ್ನುವ ದಾಖಲೆ ಬರೆಯಲಿದ್ದಾರೆ.

ಕ್ವಾರ್ಟರ್‌ಗೆ ಸಿಂಧು, ಪ್ರಣಯ್‌ , ಶ್ರೀಕಾಂತ್‌

ಸಿಡ್ನಿ: ಆಸ್ಟ್ರೇಲಿಯನ್‌ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ಭಾರತದ ನಾಲ್ವರು ಶಟ್ಲರ್‌ಗಳು ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್, ಕಿದಂಬಿ ಶ್ರೀಕಾಂತ್‌ ಹಾಗೂ ಪ್ರಿಯಾನ್ಶು ರಾಜಾವತ್‌, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅಂತಿಮ-8ರ ಸುತ್ತಿಗೇರಿದರು.

IPL 2024: RCB ತಂಡಕ್ಕೆ ಚಾಂಪಿಯನ್ ಕೋಚ್‌ ಸೇರ್ಪಡೆ..! ಇನ್ನಾದರೂ ಬದಲಾಗುತ್ತಾ ಬೆಂಗಳೂರು ಲಕ್?

ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಸಿಂಧು, ಭಾರತದವರೇ ಆದ ಆಕರ್ಷಿ ಕಶ್ಯಪ್‌ ವಿರುದ್ಧ 21-14, 21-10ರಲ್ಲಿ ಗೆದ್ದರೆ, ಚೈನೀಸ್‌ ತೈಪೆಯ ಚಿ ಯು ಜೆನ್‌ ವಿರುದ್ಧ 19-21, 21-19, 21-18ರಲ್ಲಿ ಗೆದ್ದರು. ಚೈನೀಸ್‌ ತೈಪೆಯ ಸು ಲಿ ಯಾಂಗ್‌ ವಿರುದ್ಧ ಶ್ರೀಕಾಂತ್‌ 21-17, 21-10, ವಾಂಗ್‌ ತ್ಸು ವಿ ವಿರುದ್ಧ ಪ್ರಿಯಾನ್ಶು 21-8, 13-21, 21-19ರಲ್ಲಿ ಗೆದ್ದರು. ಕ್ವಾರ್ಟರಲ್ಲಿ ಶ್ರೀಕಾಂತ್‌-ಪ್ರಿಯಾನ್ಶು ಸೆಣಸಲಿದ್ದಾರೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಚೀನಾ ವಿರುದ್ದ ಭಾರತ ಜಯಭೇರಿ

ಚೆನ್ನೈ: ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಗುರುವಾರದಿಂದ ಆರಂಭಗೊಂಡ 7ನೇ ಆವೃತ್ತಿಯ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ನೆರೆಯ ಚೀನಾ ವಿರುದ್ದ 7-2 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. 6 ತಂಡಗಳು ಪಾಲ್ಗೊಂಡಿರುವ ಟೂರ್ನಿಯನ್ನು ಭಾರತ ಏಷ್ಯನ್‌ ಗೇಮ್ಸ್‌ ಸಿದ್ದತೆಗಾಗಿ ಬಳಸಿಕೊಳ್ಳಲಿದ್ದು, ಚೀನಾ ವಿರುದ್ದದ ಗೆಲುವು ಭಾರತ ಹಾಕಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

Mercedes-Benz GLE SUV ಕಾರು ಖರೀದಿಸಿದ 2018ರ ಐಪಿಎಲ್‌ನ ದುಬಾರಿ ಕ್ರಿಕೆಟಿಗ..!

ಪಂದ್ಯದ ಮೊದಲಾರ್ಧದಲ್ಲೇ ಅಬ್ಬರಿಸಿದ ಭಾರತ 30 ನಿಮಿಷಗಳ ಆಟ ಮುಕ್ತಾಯಕ್ಕೆ 6-2 ಗೋಲುಗಳ ಅಂತರದ ಮುನ್ನಡೆ ಪಡೆದು ಗೆಲುವನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. ದ್ವಿತಿಯಾರ್ಧದಲ್ಲಿ ಅಷ್ಟಾಗಿ ಆಕ್ರಮಣಕಾರಿ ಆಟವಾಡದೇ ಇದ್ದರೂ, ಚೀನಾಕ್ಕೆ ಪುಟಿದೇಳಲು ಯಾವುದೇ ಅವಕಾಶ ನೀಡಲಿಲ್ಲ. ಭಾರತ ಪರ 5ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲಿನ ಖಾತೆ ತೆರೆದರು. 8ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಸಿಡಿಸಿದರೆ, 15ನೇ ನಿಮಿಷದಲ್ಲಿ ಸುಖ್ಜಿತ್ ಮುನ್ನಡೆಯನ್ನು 3-0ಗೇರಿಸಿದರು. 14ನೇ ನಿಮಿಷದಲ್ಲಿ ಆಕಾಶ್‌ದೀಪ್‌, 21ನೇ ನಿಮಿಷದಲ್ಲಿ ವರುಣ್‌, 29ನೇ ನಿಮಿಷದಲ್ಲಿ ಗುರ್ಜಂತ್, 40ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಭಾರತ ಶುಕ್ರವಾರ ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಜಪಾನ್‌ನಲ್ಲಿ ವಿರುದ್ದ ಸೆಣಸಲಿದೆ.

ಕೊರಿಯಾ, ಮಲೇಷ್ಯಾಗೆ ಜಯ: ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯಾ ಹಾಗೂ ಮಲೇಷ್ಯಾ ತಂಡಗಳು ಗೆಲುವಿನ ಆರಂಭ ಪಡೆದವು. ಜಪಾನ್‌ ವಿರುದ್ದ ಕೊರಿಯಾ 2-1 ಗೋಲುಗಳ ಗೆಲುವು ಸಾಧಿಸಿದರೆ, ಪಾಕಿಸ್ತಾನವನ್ನು ಮಲೇಷ್ಯಾ 3-1 ಗೋಲುಗಳಿಂದ ಬಗ್ಗುಬಡಿಯಿತು. ಪಾಕಿಸ್ತಾನ 7 ಪೆನಾಲ್ಟಿ ಕಾರ್ನರ್, ಒಂದು ಪೆನಾಲ್ಟಿ ಸ್ಟ್ರೋಕ್ ಅವಕಾಶ ಕೈಚೆಲ್ಲಿತು.

Latest Videos
Follow Us:
Download App:
  • android
  • ios