ಪುಣೆ ಆಟಗಾರರಾದ ಜಯದೇವ್ ಉನಾದ್ಕತ್, ಫ್ಯಾಫ್ ಡೂಪ್ಲೆಸಿಸ್ ಮತ್ತು ಸ್ಟೀವ್ ಸ್ಮಿತ್ ಅವರು ಏಪ್ರಿಲ್ 28ರಂದು ಶಾಲೆಗೆ ಸರ್'ಪ್ರೈಸ್ ಭೇಟಿ ಕೊಡುತ್ತಾರೆ. ವಿದ್ಯಾರ್ಥಿಗಳು ರೆಕಾರ್ಡ್ ಮಾಡಿದ ಮೆಸೇಜ್'ಗಳನ್ನು ವೇದಿಕೆಯಲ್ಲೇ ಪ್ಲೇ ಮಾಡುತ್ತಾರೆ. ಅದರಲ್ಲಿ ಓಂಕಾರ್ ಪವಾರ್'ನ ಟಿಪ್ಸ್ ಕೂಡ ಒಂದು. ಓಂಕಾರ್'ನನ್ನು ಸ್ಟೇಜ್ ಮೇಲೆ ಕರೆಯುವ ಉನಾದ್ಕತ್, ತಾನು ಕ್ರಾಸ್ ಸೀಮ್ ಬೌಲಿಂಗ್ ಮಾಡಬೇಕಾ ಎಂದು ಕೇಳುತ್ತಾನೆ. ಅದಕ್ಕೆ ಆ 12 ವರ್ಷದ ಬಾಲಕ ಹೌದೆನ್ನುತ್ತಾನೆ.

ಪುಣೆ: ಯಾವುದೇ ಆಟಗಾರ ಎಷ್ಟೇ ಎತ್ತರಕ್ಕೆ ಹೋದರೂ ಕಲಿಯುವುದು ಇದ್ದೇ ಇರುತ್ತದೆ. ಕಲಿಯುವುದರಲ್ಲಿ ಯಾರನ್ನೂ ನಿರ್ಲಕ್ಷಿಸುವಂತಿಲ್ಲ. ಶತ ದಡ್ಡ ಎಂದು ಪರಿಗಣಿಸುವ ವ್ಯಕ್ತಿಯಿಂದ ನಮಗೆ ಜೀವನದ ಅತ್ಯಮೂಲ್ಯ ಟಿಪ್ಸ್ ಸಿಕ್ಕರೂ ಸಿಗಬಹುದು. ಈ ಮಾತು ಯಾಕೆ ಹೇಳುತ್ತಿದ್ದೀವಿ ಗೊತ್ತಾ? ಐಪಿಎಲ್'ನಲ್ಲಿ 17ನೇ ಹ್ಯಾಟ್ರಿಕ್ ವಿಕೆಟ್ ಕಿತ್ತ ಜಯದೇವ್ ಉನಾದ್ಕತ್'ಗೆ ಇಂಥದ್ದೊಂದು ಅನುಭವವಾಗಿದೆ. ಪುಣೆ ತಂಡದ ಮಧ್ಯಮವೇಗದ ಬೌಲರ್ ಆಗಿರುವ ಉನಾದ್ಕತ್ ಹ್ಯಾಟ್ರಿಕ್ ಪಡೆಯಲು 12 ವರ್ಷದ ಬಾಲಕ ನೀಡಿದ ಟಿಪ್ಸ್ ಕಾರಣವಂತೆ. ಯಾರೋ ಚಿಕ್ಕ ಹುಡುಗ ಸುಮ್ಮನೆ ಏನೋ ಹೇಳುತ್ತಾನೆ ಎಂದು ಉನಾದ್ಕತ್ ಸುಮ್ಮನೆ ಇದ್ದಿದ್ದರೆ ಬಹುಶಃ ಅವರಿಗೆ ಹ್ಯಾಟ್ರಿಕ್ ಯಶಸ್ಸು ಸಿಗುತ್ತಿರಲಿಲ್ಲವೇನೋ..!

ಹುಡುಗ ಕೊಟ್ಟ ಟಿಪ್ಸ್ ಏನು?
ಉನಾದ್ಕತ್'ಗೆ ಟಿಪ್ಸ್ ಕೊಟ್ಟಿದ್ದು ಪುಣೆಯ ಅಪಂಗ್ ಕಲ್ಯಾಣಕಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಓಂಕಾರ್ ಪವಾರ್. ವಿಶಿಷ್ಟಚೇತನ ವಿದ್ಯಾರ್ಥಿಗಳಿಗೆಂದೇ ಇರುವ ಈ ಶಾಲೆಯನ್ನು ನಡೆಸುತ್ತಿರುವುದು ಮುಕುಲ್ ಮಾಧವ ಫೌಂಡೇಶನ್'ನವರು. ಈ ಸಂಸ್ಥೆಯು ತನ್ನ ಸಂಸ್ಥೆಯ ವಿದ್ಯಾರ್ಥಿಗಳಿಗೆ ಐಪಿಎಲ್ ಆಟಗಾರರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ ಆಯೋಜಿಸಿತ್ತು. ಅದಕ್ಕಾಗಿ ಶಾಲೆಯ ವಿದ್ಯಾರ್ಥಿಗಳಿಂದ ಮೆಸೇಜ್'ಗಳನ್ನು ರೆಕಾರ್ಡ್ ಮಾಡಿಸಿಕೊಳ್ಳಲಾಯಿತು. ಹಲವು ವಿದ್ಯಾರ್ಥಿಗಳ ಜೊತೆ ಓಂಕಾರ್ ಕೂಡ ತನ್ನ ಟಿಪ್ಸ್ ಕೊಟ್ಟ. ಉನಾದ್ಕತ್ ಕ್ರಾಸ್ ಸೀಮ್ ಬೌಲಿಂಗ್ ಮಾಡಿದರೆ ಯಶಸ್ಸು ಸಿಗಬಹುದೆಂದು ಸಲಹೆ ಕೊಟ್ಟ.

ಆದರೆ, ತಾನು ಕೊಟ್ಟ ಟಿಪ್ಸ್'ನ್ನು ಐಪಿಎಲ್ ಆಟಗಾರರು ಗಂಭೀರವಾಗಿ ಪರಿಗಣಿಸುತ್ತಾರೆಂದು ಆ ಹುಡುಗನಷ್ಟೇ ಅಲ್ಲ, ಶಾಲೆಯ ಯಾವ ವಿದ್ಯಾರ್ಥಿಯೂ ಎಣಿಸಿರಲಿಲ್ಲ. ಪುಣೆ ಆಟಗಾರರಾದ ಜಯದೇವ್ ಉನಾದ್ಕತ್, ಫ್ಯಾಫ್ ಡೂಪ್ಲೆಸಿಸ್ ಮತ್ತು ಸ್ಟೀವ್ ಸ್ಮಿತ್ ಅವರು ಏಪ್ರಿಲ್ 28ರಂದು ಶಾಲೆಗೆ ಸರ್'ಪ್ರೈಸ್ ಭೇಟಿ ಕೊಡುತ್ತಾರೆ. ವಿದ್ಯಾರ್ಥಿಗಳು ರೆಕಾರ್ಡ್ ಮಾಡಿದ ಮೆಸೇಜ್'ಗಳನ್ನು ವೇದಿಕೆಯಲ್ಲೇ ಪ್ಲೇ ಮಾಡುತ್ತಾರೆ. ಅದರಲ್ಲಿ ಓಂಕಾರ್ ಪವಾರ್'ನ ಟಿಪ್ಸ್ ಕೂಡ ಒಂದು. ಓಂಕಾರ್'ನನ್ನು ಸ್ಟೇಜ್ ಮೇಲೆ ಕರೆಯುವ ಉನಾದ್ಕತ್, ತಾನು ಕ್ರಾಸ್ ಸೀಮ್ ಬೌಲಿಂಗ್ ಮಾಡಬೇಕಾ ಎಂದು ಕೇಳುತ್ತಾನೆ. ಅದಕ್ಕೆ ಆ 12 ವರ್ಷದ ಬಾಲಕ ಹೌದೆನ್ನುತ್ತಾನೆ.

ಅದಾದ ಒಂದು ವಾರದ ಬಳಿಕ ನಡೆಯುವ ಪುಣೆ ಮತ್ತು ಸನ್'ರೈಸರ್ಸ್ ಪಂದ್ಯದಲ್ಲಿ ಉನಾದ್ಕತ್ ಹ್ಯಾಟ್ರಿಕ್ ಪಡೆಯುತ್ತಾರೆ. ಬಾಲಕ ಸೂಚಿಸಿದಂತೆ ಉನಾದ್ಕತ್ ಕ್ರಾಸ್ ಸೀಮ್ ಬೌಲಿಂಗ್ ಮಾಡಿ ಹ್ಯಾಟ್ರಿಕ್ ಸಂಪಾದಿಸುತ್ತಾರೆ. ಸ್ವತಃ ಉನಾದ್ಕತ್ ಅವರು ತಮ್ಮ ಇನ್ಸ್'ಟಾಗ್ರಾಂನಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.