Asianet Suvarna News Asianet Suvarna News

ಅ.8ಕ್ಕೆ 10ನೇ ಆವೃತ್ತಿ ಬೆಂಗಳೂರು ಮ್ಯಾರಥಾನ್‌, 20 ಸಾವಿರಕ್ಕೂ ಹೆಚ್ಚು ಅಥ್ಲೀಟ್ಸ್‌ ಭಾಗಿ!

10ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್‌ ಇದೇ ಭಾನುವಾರ (ಅಕ್ಟೋಬರ್‌ 8) ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದ್ದು, 20 ಸಾವಿರಕ್ಕೂ ಅಧಿಕ ಅಥ್ಲೀಟ್‌ಗಳು ಭಾಗಿಯಾಗಲಿದ್ದಾರೆ.

10th Edition Wipro Bengaluru Marathon will be held on Sunday 8th October 2023 at the Kanteerava Stadium san
Author
First Published Oct 6, 2023, 10:43 PM IST

ಬೆಂಗಳೂರು (ಅ.6): ವಿಪ್ರೋ 10ನೇ ಆವೃತ್ತಿ ಬೆಂಗಳೂರು ಮ್ಯಾರಥಾನ್‌ ಭಾನುವಾರ ನಡೆಯಲಿದೆ. 20 ಸಾವಿರಕ್ಕೂ ಅಧಿಕ ಅಥ್ಲೀಟ್‌ಗಳು ನಗರದ ಪ್ರಮುಖ ಸ್ಥಳಗಳನ್ನು ದಾಟಿ, ಕಂಠೀರವ ಕ್ರೀಡಾಂಗಣದಲ್ಲಿ ಓಟ ಮುಕ್ತಾಯಗೊಳಿಸಲಿದ್ದಾರೆ. ಬೆಂಗಳೂರಿನ ಜನತೆಯಲ್ಲಿ ಫಿಟ್ನೆಸ್‌ನ ಮಹತ್ವ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸಲು ಈ ಓಟವನ್ನು ಆಯೋಜಿಸಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಎಂ.ಜಿ. ರಸ್ತೆ, ಕಬ್ಬನ್‌ ಪಾರ್ಕ್‌, ವಿಧಾನ ಸೌಧಗಳ ಮುಂದೆ ಅಥ್ಲೀಟ್ಸ್‌ಗಳು ಓಡಲಿದ್ದು, ಈ ಐತಿಹಾಸಿಕ ಸ್ಥಳಗಳಲ್ಲಿ ನಡೆಯಲಿರುವ ಏಕೈಕ ಮ್ಯಾರಥಾನ್‌ ಇದಾಗಿದೆ. 10ನೇ ಆವೃತ್ತಿಯ ‘ಸಿಟಿ ರನ್‌’, ಖ್ಯಾತಿಯ ಮ್ಯಾರಥಾನ್‌ ಓಟಕ್ಕೆ ವಿಪ್ರೋ ಸಂಸ್ಥೆಯು ಪ್ರಾಯೋಜಕತ್ವ ನೀಡುತ್ತಿದ್ದು, ವಿವಿಧ ವಯೋಮಾನದ 20000ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

3 ವಿಭಾಗಗಳಲ್ಲಿ ಓಟ: ಮ್ಯಾರಥಾನ್‌ ಓಟವು ಮೂರು ವಿಭಾಗಗಳಲ್ಲಿ ನಡೆಯಲಿದೆ. 42.195 ಕಿ.ಮೀ ಪೂರ್ಣ ಮ್ಯಾರಥಾನ್‌, 21.1 ಕಿ.ಮೀ. ದೂರದ ಹಾಫ್‌ ಮ್ಯಾರಥಾನ್‌ ಹಾಗೂ 5 ಕಿ.ಮೀ. ಹೋಪ್ ರನ್‌. ಈ ಓಟವು ಅಂತಾರಾಷ್ಟ್ರೀಯ ಮ್ಯಾರಥಾನ್‌ಗಳ ಸಂಸ್ಥೆ (ಎಐಎಂಎಸ್‌)ಯಿಂದ ಮಾನ್ಯತೆ ಪಡೆದಿದೆ. ಈ ಕಾರ್ಯಕ್ರಮದ ಭಾಗವಾಗಿ ವಿಕಲಾಂಗ ಚೇತನರ ಓಟವೂ ನಡೆಯಲಿದ್ದು, ಇದಕ್ಕೆ ಅಸ್ಸಿಸ್‌ ಟೆಕ್‌ ಫೌಂಡೇಶನ್‌ ಪ್ರಾಯೋಜಕತ್ವ ನೀಡುತ್ತಿದೆ. ವಿಕಲಾಂಗ ಚೇತನರ ಜೊತೆ ಹಲವು ಸಂಸ್ಥೆಗಳ ಮುಖ್ಯಸ್ಥರು ಓಡಲಿದ್ದು, ಅಂಧ ಓಟಗಾರರ ಜೊತೆಯಲ್ಲಿ ಗೈಡ್‌ ರನ್ನರ್‌ಗಳು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಮ್ಯಾರಥಾನ್‌ ಜೊತೆ ವಿಪ್ರೋ ಸಂಸ್ಥೆಯು ತನ್ನ ಸಿಬ್ಬಂದಿಗೆ ಆಯೋಜಿಸುವ ವಾರ್ಷಿಕ ಓಟ ‘ಸ್ಪಿರಿಟ್‌ ಆಫ್‌ ವಿಪ್ರೋ (ಎಸ್‌ಒಡಬ್ಲ್ಯು) ಸಹ ನಡೆಯಲಿದೆ. ಸಂಸ್ಥೆಯ ಸಿಬ್ಬಂದಿ ಜೊತೆ ಅವರ ಕುಟುಂಬಸ್ಥರೂ ಪಾಲ್ಗೊಳ್ಳಲಿದ್ದಾರೆ.

ರೇಸ್‌ ನಿರ್ದೇಶಕ ನಾಗಾರಾಜ್‌ ಅಡಿಗ ಮಾತನಾಡಿ, ‘ಬೆಂಗಳೂರಿನ ನೆಚ್ಚಿನ ಓಟಕ್ಕೆ ಈ ಪ್ರಮಾಣದಲ್ಲಿ ಪ್ರತಿಕ್ರಿಯೆ ಸಿಗುತ್ತಿರುವುದು ನೋಡಿ ಖುಷಿಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮವು ಇನ್ನಷ್ಟು ದೊಡ್ಡದಾಗಿ ಬೆಳೆಯಲಿದೆ ಎನ್ನುವ ವಿಶ್ವಾಸವಿದೆ’ ಎಂದಿದ್ದಾರೆ. ಓಟದ ರಾಯಭಾರಿಯಾಗಿರುವ ಖ್ಯಾತ ಅಥ್ಲೀಟ್‌, ಅರ್ಜುನ ಪ್ರಶಸ್ತಿ ವಿಜೇತೆ ಡಾ.ರೀತ್‌ ಅಬ್ರಾಹಂ ಕಳೆದ 10 ವರ್ಷಗಳಿಂದ ಅಥ್ಲೀಟ್ಸ್‌ ಸಮೂಹ ಹಾಗೂ ಸರ್ಕಾರಿ ಇಲಾಖೆಗಳಿಂದ ಸಿಕ್ಕಿರುವ ಪ್ರೋತ್ಸಾಹ, ಬೆಂಬಲಕ್ಕೆ ಕೃತಜ್ಞತೆ ತಿಳಿಸಿದ್ದಾರೆ.

ಶ್ರೀರಾಂ ಪ್ರಾಪರ್ಟೀಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುರಳಿ ಮಲಯಪ್ಪನ್‌ ಮಾತನಾಡಿ, ‘ಸತತ 10ನೇ ವರ್ಷ ಬೆಂಗಳೂರು ಮ್ಯಾರಥಾನ್‌ಗೆ ಪ್ರಾಯೋ"ಜಕತ್ವ ನೀಡುತ್ತಿರುವುದಕ್ಕೆ ಬಹಳ ಸಂತೋಷವಿದೆ. ಬೆಂಗಳೂರು ಮ್ಯಾರಥಾನ್‌ ಕೇವಲ ಒಂದು ಓಟವಲ್ಲ. ಇದು ಫಿಟ್ನೆಸ್‌, ಏಕತೆ ಹಾಗೂ ವಿವಿಧತೆಯ ಸಂಭ್ರಮಾಚರಣೆ. ಈ ಓಟದ ಮೂಲಕ ನಾವು ನಿರಂತರವಾಗಿ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುತ್ತಲೇ ಇದ್ದೇವೆ. ದೇಶದ ಅಗ್ರ ಮ್ಯಾರಥಾನ್‌ಗಳಲ್ಲಿ ಒಂದಾಗಿರುವ ಬೆಂಗಳೂರು ಮ್ಯಾರಥಾನ್‌ ಈ ವರ್ಷವೂ ದೊಡ್ಡ ಯಶಸ್ಸು ಕಾಣಲಿದೆ ಎನ್ನುವ ನಂಬಿಕೆ ಇದೆ’ ಎಂದಿದ್ದಾರೆ.

Bengaluru Marathon: ಬೆಂಗಳೂರು ಮ್ಯಾರಥಾನ್‌ನಲ್ಲಿ 20 ಸಾವಿರ ಮಂದಿ ಭಾಗಿ, ವಿಪ್ರೋ ಪ್ರಾಯೋಜಕತ್ವ!

ಅಕ್ಟೋಬರ್‌ 8 ಎಂದು ಬೆಳಗ್ಗೆ 4 ಗಂಟೆಗೆ ಪೂರ್ಣ ಮ್ಯಾರಥಾನ್‌ ಆರಂಭವಾಗಲಿದ್ದರೆ, ಬೆಳಗ್ಗೆ 6ಕ್ಕೆ ಹಾಫ್‌ ಮ್ಯಾರಥಾನ್‌ ನಡೆಯಲಿದೆ. ಬೆಳಗ್ಗೆ 8.15ಕ್ಕರ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಹೋಪ್‌ ರನ್‌ ನಡೆಯಲಿದೆ.

ಇಂದು ಬೆಂಗ್ಳೂರು 10ಕೆ ಮ್ಯಾರಥಾನ್‌ಗೆ ಚಾಲನೆ

Follow Us:
Download App:
  • android
  • ios