12ನೇ ಆವೃತ್ತಿಯ ಐಪಿಎಲ್ ಸರಣಿ ಸಮೀಪಿಸುತ್ತಿದ್ದಂತೆಯೇ ತಯಾರಿಗಳೂ ಭರ್ಜರಿಯಾಗಿ ನಡೆಯುತ್ತಿವೆ. ಆರಂಭಿಕ ಹಂತವೆಂಬಂತೆ ಡಿ. 18 ರಂದು ಸರಣಿಗಾಗಿ ಬಿಡ್ಡಿಂಗ್ ನಡೆಯಲಿದ್ದು, ಈ ಹರಾಜು ಪ್ರಕ್ರಿಯೆ ಭಾರೀ ಕುತೂಹಲ ಕೆರಳಿಸಿದೆ. ಸದ್ಯ ಈ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿರುವ ಆಟಗಾರರ ಸಂಖ್ಯೆ ಮಾತ್ರ ನಿಜ್ಕಕೂ ಅಚ್ಚರಿ ಮೂಡಿಸುವಂತಹುದ್ದು.

ನವದೆಹಲಿ[ಡಿ.06]: ಡಿ.18ರಂದು ಜೈಪುರದಲ್ಲಿ ನಡೆಯಲಿರುವ ಐಪಿಎಲ್‌ 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು 771 ಭಾರತೀಯರು ಸೇರಿ ಒಟ್ಟು 1003 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ.

ಹರಾಜಿನಲ್ಲಿ 8 ತಂಡಗಳು ಸೇರಿ ಗರಿಷ್ಠ 70 ಆಟಗಾರರನ್ನು ಖರೀದಿಸಲು ಮಾತ್ರ ಅವಕಾಶವಿದೆ. ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳು, ಉತ್ತಾರಖಂಡ ಹಾಗೂ ಬಿಹಾರ ಆಟಗಾರರು ಸಹ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

Scroll to load tweet…

ದ.ಆಫ್ರಿಕಾದ 59 ಆಟಗಾರರು ಸೇರಿ ಒಟ್ಟು 232 ವಿದೇಶಿಗಳು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷ ರಿಚರ್ಡ್‌ ಮಾಡ್ಲಿ ಬದಲಿಗೆ ಬ್ರಿಟನ್‌ನ ಹ್ಯೂಗ್‌ ಎಡ್ಮಾಡೆಸ್‌ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ.