ರಾಹುಲ್ ಶ್ರಮ ವ್ಯರ್ಥ; ಮುಂಬೈಗೆ ರೋಚಕ ಜಯ

ರಾಹುಲ್ ಶ್ರಮ ವ್ಯರ್ಥ; ಮುಂಬೈಗೆ ರೋಚಕ ಜಯ
Highlights

ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ರಾಹುಲ್ 94 ರನ್ ಸಿಡಿಸಿದರು. 

ಮುಂಬೈ[ಮೇ.17]: ಕೆ.ಎಲ್ ರಾಹುಲ್ ಆಕರ್ಷಕ ಅರ್ಧಶತಕ[94]ದ ಹೊರತಾಗಿಯೂ ಮುಂಬೈ ತಂಡದ ಸಂಘಟಿತ ಬೌಲಿಂಗ್ ನೆರವಿನಿಂದ ಮೂರು ರನ್’ಗಳ ರೋಚಕ ಜಯ ಸಾಧಿಸಿದೆ.
ಮುಂಬೈ ನೀಡಿದ್ದ 187 ರನ್’ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಮೊದಲ ವಿಕೆಟ್’ಗೆ 34 ರನ್ ಕಲೆ ಹಾಕಿತು. ಗೇಲ್ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಎರಡನೇ ವಿಕೆಟ್’ಗೆ ಆ್ಯರೋನ್ ಫಿಂಚ್ ಹಾಗೂ ರಾಹುಲ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಎರಡನೇ ವಿಕೆಟ್’ಗೆ ಫಿಂಚ್-ರಾಹುಲ್ ಜೋಡಿ 111 ರನ್’ಗಳ ಜತೆಯಾಟವಾಡಿತು. ಈ ಜೋಡಿಯನ್ನು ಬುಮ್ರಾ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಫಿಂಚ್ 45 ರನ್ ಗಳಿಸಿದ್ದಾಗ ಹಾರ್ದಿಕ್ ಪಾಂಡ್ಯಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ರಾಹುಲ್ 94 ರನ್ ಸಿಡಿಸಿದರು. ಕೆಳಕ್ರಮಾಂಕದ ದಿಢೀರ್ ಕುಸಿತದಿಂದಾಗಿ ಪಂಜಾಬ್ ಕೇವಲ 3 ರನ್’ಗಳ ರೋಚಕ ಸೋಲು ಕಂಡಿತು.
ಮುಂಬೈ ಪರ ಬುಮ್ರಾ 3, ಮೆಕ್ಲಾನಾಘನ್ 2 ವಿಕೆಟ್ ಪಡೆದರು.  
 

loader