ಸಾಗರ : ಮಾಜಿ ಶಾಸಕರ ಮನೆಯಲ್ಲಿ ಕಳ್ಳತನ
ಶಿವಮೊಗ್ಗ ಜಿಲ್ಲೆಯ ಸಾಗರದ ಮಾಜಿ ಶಾಸಕರೋರ್ವರ ಮನೆಯಲ್ಲಿ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಲಾಗಿದೆ.
ಸಾಗರ [ಅ.16]: ತಾಲೂಕಿನ ತಂಗಳವಾಡಿ ಗ್ರಾಮದಲ್ಲಿ ಮಾಜಿ ಶಾಸಕ ಧರ್ಮಪ್ಪ ಅವರ ಮನೆಯ ಬಾಗಿಲು ಒಡೆದು ಕಳ್ಳತನ ಮಾಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ತಂಗಳವಾಡಿಯಲ್ಲಿರುವ ಮಾಜಿ ಶಾಸಕ ಧರ್ಮಪ್ಪ ಅವರ ತೋಟದ ಮನೆಯ ಬಾಗಿಲು ಮುರಿದು ಸುಮಾರು 15 ಸಾವಿರ ರು. ಮೌಲ್ಯದ ಎಲ್‌ಇಡಿ ಟಿವಿ ಕಳ್ಳತನ ಮಾಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಧರ್ಮಪ್ಪ ಅವರ ಕುಟುಂಬ ಬೆಂಗಳೂರಿನಲ್ಲಿ ವಾಸವಿದ್ದು, ತೋಟದ ಮನೆಯಲ್ಲಿ ಸಂಬಂಧಿಕರು ವಾಸವಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಬೀಗ ಮುರಿದು ಟಿ.ವಿ. ಕಳ್ಳತನ ಮಾಡಲಾಗಿದೆ.
ಈ ಸಂಬಂಧ ದಿನೇಶ್ ಎಂಬುವವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.