ಶಿವಮೊಗ್ಗ: ಮೀನು ವ್ಯಾಪಾರಿಯ ಅಂತಿಮ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಆಡು
ಮಾನವ ಮತ್ತು ಮೂಕ ಪ್ರಾಣಿಯ ನಡುವೆ ಬಿಡಸಲಾಗದ ಬಂಧ/ ಸತ್ತ ವ್ಯಕ್ತಿಯ ಅಂತಿಮ ಯಾತ್ರೆಯಲ್ಲಿ ಉದ್ದಕ್ಕೂ ಹೆಜ್ಜೆಹಾಕಿದ ಆಡು/ ಕೋಣಂದೂರು ಮೀನು ವ್ಯಾಪಾರಿ ಹುಸೇನಬ್ಬ ಅಂತಿಮ ಯಾತ್ರೆಯಲ್ಲಿ ಮೂಕ ಪ್ರಾಣಿಯ ಭಾವನೆ
ಶಿವಮೊಗ್ಗ[ಅ. 18] ಯಾರಾದರೂ ಆತ್ಮೀಯರು ಮೃತ ಪಟ್ಟರೆ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸುತ್ತೇವೆ. ಇಲ್ಲಿ ಮಾನವರ ಜತೆ ಮೂಕ ಪ್ರಾಣಿಯೊಂದು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ನಲ್ಲಿ ಮೀನು ಮಾರುತ್ತಿದ್ದ ಹುಸೇನಬ್ಬ (55) ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಇಂದು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನೆರವೇರಿತು.
ದೇವರ ಕೋಣಕ್ಕೆ ಡಿಎನ್‌ಎ ಪರೀಕ್ಷೆ, ನಡೆಯುವುದು ಹೇಗೆ?
ಕೊಪ್ಪದಲ್ಲಿದ್ದ ಹುಸೆನಬ್ಬ ಮನೆಯ ಪಕ್ಕದ ಮನೆಯಲ್ಲಿ ಹರಕೆಯ ಆಡು ಇತ್ತು. ಹೆಚ್ಚಾಗಿ ಈ ಆಡು ಹುಸೇನಬ್ಬ ಮನೆಯ ಬಳಿಯೇ ಸಂಚಾರ ಮಾಡಿಕೊಂಡಿತ್ತು. ಇಂದು ತನ್ನ ಆತ್ಮೀಯ ಹುಸೇನಬ್ಬನವರ ಅಂತ್ಯಕ್ರಿಯೆ ಸಂದರ್ಭದಲ್ಲಿ ನಡೆದ ಕೊನೆಯ ಪಯಣದಲ್ಲಿ ಭಾಗವಹಿಸಿದ್ದಲ್ಲದೆ ಅಂತ್ಯಕ್ರಿಯೆ ಮುಗಿಯುವವರೆಗೂ ಇದ್ದು ನಂತರ ಹಿಂತಿರುಗಿದೆ.
ಮೂಕ ಪ್ರಾಣಿ ಮಾನವರೊಂದಿಗೆ ಶಾಂತ ರೀತಿಯಲ್ಲೇ ಹೆಜ್ಜೆ ಹಾಕಿತು. ಅಂತಿಮ ಯಾತ್ರೆ ಆರಂಭದಿಂದ ಅಂತ್ಯದವರೆಗೂ ಹೆಜ್ಜೆ ಹಾಕಿತು.