ತೈವಾನಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದ ಅತೀವ ಹಾನಿಯಾಗಿದೆ. ಅಲ್ಲಿನ ಆಸ್ಪತ್ರೆಯೊಂದರಲ್ಲಿ ಮೂವರು ನರ್ಸ್ ಗಳು ನವಜಾತ ಶಿಶುಗಳನ್ನು ರಕ್ಷಣೆ ಮಾಡುತ್ತಿರುವ ವಿದ್ಯಮಾನ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತೊಟ್ಟಿಲುಗಳನ್ನು ಒಂದೆಡೆ ಸೇರಿಸಿ, ಆಚೀಚೆಯಾಗದಂತೆ ನೋಡಿಕೊಳ್ಳುವ ನರ್ಸ್ ಗಳ ಕಳಕಳಿಗೆ ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಭೂಕಂಪನಗಳು ಜನಜೀವನವನ್ನು ಅಲ್ಲಾಡಿಸಿಬಿಡುತ್ತವೆ. ಎಲ್ಲ ವ್ಯವಸ್ಥೆಗಳನ್ನು ಅಧ್ವಾನಗೊಳಿಸುವ ಈ ನೈಸರ್ಗಿಕ ವಿಪತ್ತಿನಿಂದಾಗಿ ಸಾವುನೋವುಗಳ ಜತೆಗೆ, ಬದುಕುಳಿದವರು ಚಿಕಿತ್ಸೆಗಾಗಿ ಪರದಾಡುವಂತೆ ಆಗುತ್ತದೆ. ಮೊನ್ನೆಯಷ್ಟೇ ತೈವಾನ್ ನಲ್ಲಿ ತೀವ್ರ ಪ್ರಮಾಣದ ಭೂಕಂಪವಾಗಿದೆ. ರಿಕ್ಟರ್ ಮಾಪನದಲ್ಲಿ 7.4ರಷ್ಟು ತೀವ್ರತೆಯ ಭೂಕಂಪ ದಾಖಲಾಗಿದ್ದು, ತೈವಾನಿನ ಕೆಲವು ಭಾಗ ತೀವ್ರವಾಗಿ ಹಾನಿಗೆ ಒಳಗಾಗಿದೆ. ಇದು ಆ ದೇಶ ಕಳೆದ 25 ವರ್ಷಗಳಲ್ಲಿ ಕಂಡ ಅತಿ ತೀವ್ರತೆಯ ಕಂಪನವಾಗಿದೆ. ಇದರ ಕರಾಳ ಮುಖವನ್ನು ಬಿಂಬಿಸುವ ಚಿತ್ರಣಗಳ ನಡುವೆ ಹೃದಯಸ್ಪರ್ಶಿಯಾಗಿರುವ ವೀಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತೈವಾನಿನ ಆಸ್ಪತ್ರೆಯಲ್ಲಿನ ನರ್ಸುಗಳು ನವಜಾತ ಶಿಶುಗಳನ್ನು ರಕ್ಷಿಸುವ ವೀಡಿಯೋ ಇದಾಗಿದ್ದು, ಕಡುಕಷ್ಟದ ಸಮಯದಲ್ಲೂ ನರ್ಸ್ ಗಳ ಕರ್ತವ್ಯಪ್ರಜ್ಞೆ ಮತ್ತು ಮಾನವೀಯ ಕಳಕಳಿಗೆ ಪ್ರಪಂಚದ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆಸ್ಪತ್ರೆಯ (Hospital) ಸಿಸಿ ಕ್ಯಾಮರಾದಲ್ಲಿ (CC Camera) ಇಂಥದ್ದೊಂದು ವೀಡಿಯೋ (Video) ಲಭಿಸಿದೆ. ಭೂಕಂಪ (Earthquake) ಸಂಭವಿಸಿದ ಸಮಯದಲ್ಲಿ ಆಸ್ಪತ್ರೆಯ ಕಟ್ಟಡ (Building) ಅಲುಗಾಡಿದಾಗ ನರ್ಸ್ ಗಳು ತತ್ ಕ್ಷಣಕ್ಕೆ ನವಜಾತ ಶಿಶುಗಳಿರುವ ತೊಟ್ಟಿಲುಗಳನ್ನು (Cribs) ರಕ್ಷಣೆ ಮಾಡಿದ ಸನ್ನಿವೇಶ ಈ ದೃಶ್ಯದಲ್ಲಿ ಸೆರೆಯಾಗಿದೆ. ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ನಿಶಾಂತ್ ಶರ್ಮಾ ಎನ್ನುವವರು ಏಪ್ರಿಲ್ 3ರಂದು ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಿಶಾಂತ್ ಶರ್ಮಾ, ನರ್ಸುಗಳ ಕಾರ್ಯವನ್ನು ಶ್ಲಾಘಿಸಿದ್ದುದಲ್ಲದೇ, ಅಂತರ್ಜಾಲದಲ್ಲಿ (Internet) ಕಂಡುಬಂದ ಅತ್ಯುತ್ತಮ ವೀಡಿಯೋಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ನರ್ಸುಗಳ ಧೈರ್ಯವನ್ನೂ (Bravery) ಸಹ ಕೊಂಡಾಗಿದ್ದಾರೆ.
ತೈವಾನಿನ (Taiwan) ಕರಾವಳಿಯಿಂದ ದೂರವಿರುವ ಗ್ರಾಮೀಣ ಪ್ರದೇಶವಾದ ಹ್ಯುವಾಲಿಯನ್ ಕೌಂಟಿ ಈ ಕಂಪನದಿಂದ ತೀವ್ರ ಹಾನಿಗೆ ಒಳಗಾಗಿದೆ. ಇಲ್ಲಿನ ಕಟ್ಟಡಗಳು ಕುಸಿದಿವೆ, ನೆಲಮಾಳಿಗೆಗಳು ನೆಲಕಚ್ಚಿವೆ. ತೈವಾನ್ ರಾಜಧಾನಿ ತೈಪೆಯಲ್ಲಿ ಸಹ ತೀವ್ರ ಪ್ರಮಾಣದ ಕಂಪನದ ಅನುಭವವಾಗಿದೆ. ಹಳೆಯ ಕಟ್ಟಡಗಳ ಇಟ್ಟಿಗೆಗಳು ಕುಸಿದ ಘಟನೆಗಳು ವರದಿಯಾಗಿವೆ. ಬಾಧಿತ ಪ್ರದೇಶದಲ್ಲಿ ಕೆಲವು ಜನ ಮೃತಪಟ್ಟು ಸಾವಿರಾರು ಜನ ಗಾಯಗೊಂಡಿದ್ದಾರೆ. 199ರಲ್ಲಿ ನಾಂಟೈ ಕೌಂಟಿಯಲ್ಲಿ ಸಂಭವಿಸಿದ ದುರಂತವನ್ನು ಇದು ನೆನಪಿಸಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಂದ ಇದುವರೆಗೆ ಇಷ್ಟು ತೀವ್ರ ಪ್ರಮಾಣದ ಭೂಕಂಪ ಸಂಭವಿಸಿರಲಿಲ್ಲ.
ಭಾರತದ ಮೊದಲ ಪ್ರಧಾನಿ ಯಾರು? ಬಿಜೆಪಿ ಅಭ್ಯರ್ಥಿ ನಟಿ, ಕಂಗನಾ ಉತ್ತರಕ್ಕೆ ಶಾಕ್ ಆದ ನೆಟ್ಟಿಗರು
ನರ್ಸ್ ಗಳ ಸಮಯಪ್ರಜ್ಞೆ: ಭೂಮಿ ಕಂಪಿಸುತ್ತಿರುವ ಅನುಭವ ಉಂಟಾದ ತಕ್ಷಣ ನರ್ಸ್ ಗಳು ನವಜಾತ (Infant) ಶಿಶುಗಳ ತೊಟ್ಟಿಲುಗಳ ಬಳಿ ಓಡಿ ಬರುತ್ತಾರೆ, ಅಂತಹ ಕಷ್ಟದಲ್ಲೂ ಈ ನರ್ಸ್ ಗಳು ಸಮಯಪ್ರಜ್ಞೆ (Time sense) ಮೆರೆಯುತ್ತಾರೆ. ಆಸ್ಪತ್ರೆಯ ನವಜಾತ ಶಿಶು ವಿಭಾಗದಲ್ಲಿದ್ದ ಮೂವರು ನರ್ಸ್ ಗಳು ಅನೇಕ ಶಿಶುಗಳ ತೊಟ್ಟಿಲುಗಳನ್ನು ಒಂದೆಡೆ ಸೇರಿಸಿ ಹಿಡಿದುಕೊಳ್ಳುತ್ತಾರೆ.
ಕಟ್ಟಡ ಅಲುಗಾಡುವುದು (Tremor) ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವು ಸೆಕೆಂಡುಗಳ ಕಾಲ ನಡೆಯುವ ಈ ವಿದ್ಯಮಾನದಲ್ಲಿ ನರ್ಸ್ ಗಳು ಎಲ್ಲ ತೊಟ್ಟಿಲುಗಳನ್ನು ಕೈಯಲ್ಲಿ ಬಿಗಿಯಾಗಿ ಹಿಡಿದು, ಆಚೀಚೆ ಸರಿಯದಂತೆ ನೋಡಿಕೊಳ್ಳುತ್ತಾರೆ. ಇದೊಂದು ಹೃದಯಸ್ಪರ್ಶಿ ವೀಡಿಯೋ ಆಗಿದ್ದು, ಮೈನವಿರೇಳಿಸುತ್ತದೆ.
Viral Video: ನೆಲಕ್ಕುರುಳಿದ ಬೆಂಗಳೂರು ಬಳಿಯ ಹುಸ್ಕೂರು ಮದ್ದೂರಮ್ಮ ಜಾತ್ರೆಯ 120 ಅಡಿ ತೇರು
ವಿಶ್ವವ್ಯಾಪಿ ಮೆಚ್ಚುಗೆ: ತೈವಾನ್ ನರ್ಸುಗಳ ಈ ಕಾಳಜಿಗೆ ಇಡೀ ವಿಶ್ವದ ನೆಟ್ಟಿಗರು ಮೆಚ್ಚುಗೆ (Likes) ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟುಗಳು ಬಂದಿದ್ದು, ಎಲ್ಲರೂ ನರ್ಸ್ ಗಳು ಮತ್ತು ಆ ಶಿಶುಗಳು ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ. ನರ್ಸ್ ಗಳು ಧೈರ್ಯವಾಗಿ ಸನ್ನಿವೇಶವನ್ನು ಎದುರಿಸಿದ್ದಾರೆ ಎಂದು ಹಲವರು ಹೇಳಿದ್ದರೆ, “ಇದು ಪ್ರೇರಣಾದಾಯಕ (Inspirational) ಸನ್ನಿವೇಶ. ಶಿಶುಗಳ ರಕ್ಷಣೆ ಮಾಡಲು ತೈವಾನ್ ನರ್ಸ್ ಗಳು ಇಷ್ಟೊಂದು ಧೈರ್ಯ ತೋರಿದ್ದಾರೆ. ಇವರು ನಿಜಕ್ಕೂ ಲೀಡರ್ಸ್ ‘ ಎಂದು ಹೇಳಿದ್ದಾರೆ.
