ನಿನ್ನೆ ರಾಜ್ಯದ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇಂದೂ ಕೂಡ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಮುಂದುವರೆಯಲಿದೆ. ಜೂನ್ 29ರ ವರೆಗೆ ರಾಜ್ಯದ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
state Jun 25, 2024, 9:02 AM IST
ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ ಅಗತ್ಯ. ಆದರೆ ಒಂದು ಕೈಯಲ್ಲಿ ಛತ್ರಿ, ಮತ್ತೊಂದು ಕೈಯಲ್ಲಿ ವಸ್ತುಗಳನ್ನು ಹಿಡಿದು ಮಳೆಯಲ್ಲಿ ತೆರಳುವುದು ಕಷ್ಟ. ಹೀಗಾಗಿ ಆನಂದ್ ಮಹೀಂದ್ರ ಹೊಸ ಐಡಿಯಾ ನೀಡಿದ್ದಾರೆ.
India Jun 24, 2024, 9:29 AM IST
ಸೋಮವಾರ ಮತ್ತು ಮಂಗಳವಾರ ಕರಾವಳಿಯ ಮೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಗೆ 'ರೆಡ್ ಅಲರ್ಟ್', ಶಿವಮೊಗ್ಗ ಹಾಗೂ ಚಿಕ್ಕಮಗಳೂರಿಗೆ 'ಆರೆಂಜ್ ಅಲರ್ಟ್' ಎಚ್ಚರಿಕೆ ಮುಂದುವರೆಸಲಾಗಿದೆ. ಮೈಸೂರು, ಮಂಡ್ಯ, ಹಾಸನ, ಹಾವೇರಿ, ಗದಗ, ಧಾರವಾಡ, ಬೀದರ್ ಮತ್ತು ಬೆಳಗಾವಿ ಜಿಲ್ಲೆಗಳಿಗೆ 'ಯಲ್ಲೋ' ಅಲರ್ಟ್ ಘೋಷಣೆ ಮಾಡಲಾಗಿದೆ.
state Jun 23, 2024, 7:00 AM IST
ಕರ್ನಾಟಕದಲ್ಲಿ ಮುಂಗಾರು ಚುರುಕೊಂಡಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ರಾಜ್ಯಕ್ಕೆ ಭಾರಿ ಮಳೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದ್ದರೆ, ನಾಲ್ಕು ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ನೀಡಲಾಗಿದೆ.
state Jun 22, 2024, 8:44 AM IST
ಯಾವುದೇ ವಯಸ್ಸು ಅಥವಾ ಕಾಲವಿರಲಿ ಉತ್ತಮ ಚರ್ಮದ ಆರೈಕೆ ಅತ್ಯಗತ್ಯ. ಮಳೆಗಾಲವೆಂದರೆ ಚರ್ಮಕ್ಕೆ ಮಾಯಿಶ್ಚರೈಸಿಂಗ್ ಬೇಡವೆಂದಲ್ಲ. ಮಾನ್ಸೂನ್‌ನಲ್ಲಿ ಕೂಡ ಡೀಹೈಡ್ರೇಶನ್ ಕಾರಣದಿಂದ ಚರ್ಮ ಡ್ರೈ ಆಗುತ್ತದೆ. ಈ ಮಳೆಗಾಲದಲ್ಲಿ ಹೊಳೆಯುವ ಮತ್ತು ಹೈಡ್ರೀಕರಿಸಿದ ಚರ್ಮವನ್ನು ಪಡೆಯುಲು ಈ ಮಾಯಿಶ್ಚರೈಸರ್‌ಗಳನ್ನು ಮನೆಯಲ್ಲೇ ಮಾಡಿ ಬಳಸಿ.
Fashion Jun 20, 2024, 5:39 PM IST
ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಜೂನ್ 22 ರಿಂದ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಾಗಲಿದೆ. ಜೂನ್ 24ರ ವರೆಗೆ ದಕ್ಷಿಣ ಒಳನಾಡು, ಉತ್ತರ ಒಳನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
state Jun 20, 2024, 5:34 AM IST
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಪೂರ್ವ ಮುಂಗಾರಿನಲ್ಲಿ ಶೇ. 82.87ರಷ್ಟು ಬಿತ್ತನೆ ಮಾಡಿದ್ದಾರೆ.
Karnataka Districts Jun 19, 2024, 8:01 AM IST
ಮುಂದಿನ 7 ದಿನ ಕರ್ನಾಟಕದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲೆವೆಡೆ ಗುಡು ಸಹಿತ ಮಳೆಯಾಗಲಿದೆ. ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಿವಾಸಿಗಳು ಮುನ್ನಚ್ಚರಿಕೆ ನೀಡಲಾಗಿದೆ.
state Jun 18, 2024, 4:48 PM IST
ಕಳೆದ ಎಂಟತ್ತು ದಿನಗಳಿಂದ ಕಾಫಿನಾಡ ಮಲೆನಾಡು ಭಾಗದಲ್ಲಿ ಬಿಡುವು ನೀಡಿದ್ದ ವರುಣದೇವ ಇಂದು ಮತ್ತೆ ಅಬ್ಬರಿಸಿ ಬೊಬ್ಬೆರಿದಿದ್ದಾನೆ. ಮಧ್ಯಾಹ್ನದ ನಂತರ ಆರಂಭವಾದ ಧಾರಾಕಾರ ಮಳೆಗೆ ಇಡೀ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಮೂಡಿಗೆರೆಯಲ್ಲಿ ಮಧ್ಯಾಹ್ನವೇ ವಾಹನಗಳ ಲೈಟ್ ಆನ್ ಮಾಡಿಕೊಂಡು ಓಡಾಡುವಂತಾಗಿದ್ರೆ, ಕಳಸ-ಬಾಳೆಹೊನ್ನೂರು ಮಳೆಗೆ ರಸ್ತೆಯೇ ಮಾಯವಾಗಿ ಕಳಸ-ಬಾಳೆಹೊನ್ನೂರು ಸಂಪರ್ಕವೇ ಕಡಿತಗೊಂಡಿತ್ತು. ಭಾರೀ ಮಳೆಯಿಂದ ಕಾರು-ಬೈಕ್ ನೀರಿನ ಮಧ್ಯೆ ಲಾಕ್ ಆಗಿ ಪ್ರಯಾಣಿಕರು ಪರದಾಡಿದ್ದರು.
state Jun 17, 2024, 11:24 PM IST
ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಅನಾಹುತಗಳು ಸಂಭವಿಸುವ ಪ್ರದೇಶಗಳ ಗುರುತು ಪಡಿಸಿ ತಾತ್ಕಾಲಿಕ ಆಶ್ರಯ ತಾಣಗಳ ನಿರ್ಮಾಣ ಅಗತ್ಯ ಸಿಬ್ಬಂದಿ ಹಾಗೂ ಸಲಕರಣಗೆಗಳೊಂದಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಜ್ಜುಗೊಂಡಿದೆ.
state Jun 17, 2024, 9:18 PM IST
ರಾಜ್ಯಾದ್ಯಂತ ಒಂದು ವಾರಗಳವರೆಗೆ ಮಳೆ ಪ್ರಮಾಣ ತಗ್ಗಿದ್ದು, ಅಲ್ಲಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಬಿತ್ತನೆ ಕಾರ್ಯಕ್ಕೆ ಸಕಾಲವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
state Jun 16, 2024, 1:44 PM IST
2.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತಾದರೂ 2.36 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ(ಶೇ.80). ವಾಡಿಕೆಯಂತೆ 115 ಮಿ.ಮೀ. ಮಳೆಯಾಗಬೇಕಿತ್ತಾದರೂ 151 ಮಿ.ಮೀ. ಮಳೆಯಾದರೂ ಬಿತ್ತನೆ ಕುಂಠಿತವಾಗಿದೆ. ಜೋಳ, ರಾಗಿ, ತೊಗರಿ, ಕಡಲೆ ಸೇರಿದಂತೆ ಏಕ ದಳ, ದ್ವಿದಳ ಧಾನ್ಯಗಳ ಬಿತ್ತನೆ ಚೆನ್ನಾಗಿದೆ. ಆದರೆ, ಶೇಂಗಾ, ಎಳ್ಳು, ಸೂರ್ಯಕಾಂತಿ ಸೇರಿದಂತೆ ಎಣ್ಣೆಕಾಳು ಬೆಳೆಗಳ ಬಿತ್ತನೆಯಲ್ಲಿ ಶೇ.68 ರಷ್ಟು ಮಾತ್ರ ಪ್ರಗತಿಯಾಗಿದೆ.
state Jun 15, 2024, 9:47 AM IST
ಈ ಬಾರಿ ಪೂರ್ವ ಮುಂಗಾರು ಒಂದು ತಿಂಗಳು ತಡವಾಗಿದ್ದು, ಸೂರ್ಯಕಾಂತಿ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣ ಅಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಮುಸುಕಿನ ಜೋಳ ಬಿತ್ತನೆ ಹೆಚ್ಚಳವಾಗಿದೆ. ರೈತರು ಹೆಚ್ಚು ಓಲೈಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಎಸ್.ಎಸ್. ಆಬಿದ್ ತಿಳಿಸಿದರು.
Karnataka Districts Jun 13, 2024, 1:32 PM IST
ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಆಳಂದ, ಯಡ್ರಾಮಿ ತಾಲೂಕಿನ ಕೆಲವು ಗ್ರಾಮಗಳು ಜಲಾವೃತಗೊಂಡಿವೆ. ಕಲಬುರಗಿ-ಬಸವಕಲ್ಯಾಣಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್ ಆಗಿದೆ.
state Jun 13, 2024, 6:36 AM IST
ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮರ ಬಿದ್ದು ಕೃಷಿ ಕಾರ್ಮಿಕ ಮಹಿಳೆಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹತ್ತಿಕುಡಿಗೆಯಲ್ಲಿ ನಡೆದಿದೆ.
state Jun 12, 2024, 9:31 PM IST