ಗ್ರಹಣ ಕೌತುಕ : ಅಪರೂಪದ ಕಂಕಣ ಸೂರ‍್ಯಗ್ರಹಣ

ಅಪರೂಪವಾದ ‘ಕಂಕಣ ಸೂರ್ಯಗ್ರಹಣ’ ಗುರುವಾರ ಘಟಿಸಲಿದ್ದು, ಭಾರತದಲ್ಲೂ ಗೋಚರಿಸಲಿದೆ. ಬೆಳಗ್ಗೆ 8.04ಕ್ಕೆ ಆರಂಭವಾಗುವ ಸೂರ್ಯಗ್ರಹಣ ಬೆಳಗ್ಗೆ 11.11ಕ್ಕೆ ಅಂತ್ಯಗೊಳ್ಳಲಿದೆ.

What NOT to do What To do in solar eclipse

ಬೆಂಗಳೂರು/ನವದೆಹಲಿ [ಡಿ.26]:  ಅತ್ಯಂತ ಅಪರೂಪವಾದ ‘ಕಂಕಣ ಸೂರ್ಯಗ್ರಹಣ’ ಗುರುವಾರ ಘಟಿಸಲಿದ್ದು, ಭಾರತದಲ್ಲೂ ಗೋಚರಿಸಲಿದೆ. ಬೆಳಗ್ಗೆ 8.04ಕ್ಕೆ ಆರಂಭವಾಗುವ ಸೂರ್ಯಗ್ರಹಣ ಬೆಳಗ್ಗೆ 11.11ಕ್ಕೆ ಅಂತ್ಯಗೊಳ್ಳಲಿದೆ.

ದೇಶದಲ್ಲೇ ಅತಿ ಹೆಚ್ಚು ಸ್ಪಷ್ಟವಾಗಿ ಗ್ರಹಣ ಗೋಚರಿಸಲಿರುವುದು ಕರ್ನಾಟಕದಲ್ಲಿ ಹಾಗೂ ಅದರಲ್ಲೂ ವಿಶೇಷವಾಗಿ ಮೈಸೂರು, ಮಂಗಳೂರು ಹಾಗೂ ಮಡಿಕೇರಿಯಲ್ಲಿ ಎಂಬುದು ವಿಶೇಷ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಸೂರ್ಯನು ಬಳೆಯಂತೆ (ಕಂಕಣ) ಸ್ಪಷ್ಟವಾಗಿ ಕಾಣಲಿರುವುದು ಇಲ್ಲಿ ಮಾತ್ರ. ಸೂರ್ಯ ಬಳೆ ರೀತಿಯಲ್ಲಿ ಕಾಣುವ ಸಮಯ 9.24ರಿಂದ 9.29ರವರೆಗೆ ಇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ಅಂತರಗಳ ಪ್ರಕಾರ ಸೂರ್ಯನ ಕೋನೀಯ ಗಾತ್ರವು ಚಂದ್ರನದಕ್ಕಿಂತ ದೊಡ್ಡದಾಗಿರುತ್ತದೆ. ಹಾಗಾಗಿ ಸೂರ್ಯ ಬಳೆಯಂತೆ ಗೋಚರಿಸುತ್ತಾನೆ. ಪೂರ್ಣ ಛಾಯಾ ಶಂಕುವನ್ನು ದಾಟಿದ (ಆ್ಯಂಟಬ್ರಾ) ಪ್ರದೇಶದಲ್ಲಿರುವ ಜನರಿಗೆ ಕಂಕಣ ಸೂರ್ಯಗ್ರಹಣ ಕಾಣುತ್ತದೆ.

ಈ ಅಪರೂಪದ ಖಗೋಳ ಕೌತುಕ ವಿಶ್ವದೆಲ್ಲೆಡೆ ಒಂದೇ ರೀತಿ ಕಾಣಿಸುವುದಿಲ್ಲ. ಭಾರತದಲ್ಲೂ ತಮಿಳುನಾಡು, ಕೇರಳ, ಕರ್ನಾಟಕ ಭಾಗಗಳಲ್ಲಷ್ಟೇ ಕಂಕಣ ಸೂರ್ಯಗ್ರಹಣದ ದರ್ಶನ ಸಾಧ್ಯವಿದೆ. ಉಳಿದೆಡೆ ಭಾಗಶಃ ಸೂರ್ಯಗ್ರಹಣದ ದರ್ಶನ ಸಿಗಲಿದೆ.

ಈ ಮುಂಚೆ ಕಂಕಣ ಸೂರ್ಯಗ್ರಹಣ 2010ರ ಅಕ್ಟೋಬರ್‌ 15ರಂದು ಭಾರತದಲ್ಲಿ ಕಾಣಿಸಿತ್ತು. ಆ ಬಳಿಕ 9 ವರ್ಷ ನಂತರ ಕಂಕಣ ಸೂರ್ಯಗ್ರಹಣ ನಡೆಯುತ್ತಿದೆ.

ಗ್ರಹಣ ಹೀಗೆ ನೋಡಿ

- ಅಲ್ಲಲ್ಲಿ ಇರುವ ವಿಜ್ಞಾನ ಕೇಂದ್ರಗಳಲ್ಲಿ ಫಿಲ್ಟರ್‌ ಹೊಂದಿದ ಟೆಲಿಸ್ಕೋಪ್‌ನಲ್ಲಿ ಗ್ರಹಣ ವೀಕ್ಷಿಸಿ

- ಎಕ್ಲಿಫ್ಸ್‌ ಗಾಗಲ್ಸ್‌ ಖರೀದಿಸಿ ಅದರ ಮೂಲಕ ವೀಕ್ಷಿಸಿ

- ನಂ.14ರ ವೆಲ್ಡಿಂಗ್‌ಗ್ಲಾಸ್‌ ಬಳಸಿ ಸೂರ್ಯಗ್ರಹಣ ವೀಕ್ಷಿಸಿ

- ಸೋಲಾರ್‌ ಫಿಲ್ಟರ್‌/ಸೌರ ಕನ್ನಡಕ, ಅಲ್ಟ್ರಾ ವೈಲೆಟ್‌ ರೇಸ್‌, ಪಿನ್‌ ಹೋಲ್‌ ಕ್ಯಾಮರಾ ಬಳಸಿ

- ಸಣ್ಣ ಕನ್ನಡಿ ತೆಗೆದುಕೊಂಡು ಬಿಳಿ ಗೋಡೆಯ ಮೇಲೆ ಸೂರ್ಯನ ಪ್ರತಿಬಿಂಬ ಬೀಳುವಂತೆ ಮಾಡಿ. ಆ ಮೂಲಕ ಗ್ರಹಣ ನೋಡಿ

ಹೀಗೆ ಮಾಡಲೇಬೇಡಿ

- ಬರಿಗಣ್ಣಿನಿಂದ ನೋಡುವುದು ಅಪಾಯಕರ. ಏಕೆಂದರೆ ಈ ವೇಳೆ ಸೂರ್ಯನ ಕಿರಣಗಳು ತೀಕ್ಷ$್ಣವಾಗಿದ್ದು, ಕಣ್ಣಿಗೆ ಹಾನಿಯಾಗಬಹುದು.

- ಎಕ್ಸ್‌ರೇ ಶೀಟ್‌, ಕೂಲಿಂಗ್‌ ಕ್ಲಾಸ್‌, ಮಸಿ ಹಿಡಿದ ಗಾಜು, ದುರ್ಬೀನು ಬಳಕೆ ಬೇಡ

- ಕಣ್ಣುಗಳಿಗೆ ಸಂಬಂಧಿಸಿದ ರೋಗಗಳಿಂದ ಬಳಲುತ್ತಿರುವವರು ವೀಕ್ಷಿಸಬಾರದು

- ಹಾಳಾದ ಸೋಲಾರ್‌ ಫಿಲ್ಟರ್‌ಗಳನ್ನು ಬಳಸಬಾರದು

- ಸೂರ್ಯನನ್ನು ಕೆಲವೇ ಸೆಕೆಂಡುಗಳ ಮಾತ್ರ ವೀಕ್ಷಿಸಿ, ಪದೇ ಪದೇ ವೀಕ್ಷಿಸಬಾರದು

ಎಲ್ಲೆಲ್ಲಿ ಗೋಚರಿಸುತ್ತದೆ?

ಗ್ರಹಣವು ಭಾರತದ ಹಲವು ಭಾಗಗಳಲ್ಲಿ ಗೋಚರ. ಕರ್ನಾಟಕದ ಮಂಗಳೂರು, ಮಡಿಕೇರಿ, ಚಾಮರಾಜನಗರ, ಮೈಸೂರಿನಲ್ಲಿ ಹಾಗೂ ತಮಿಳುನಾಡಿನ ಊಟಿ, ಕಣ್ಣೂರು, ಕೊಯಮತ್ತೂರು, ಮದುರೈ, ಕೇರಳದ ಕೆಲವು ಭಾಗಗಳಲ್ಲಿ ಕಂಕಣವಾಗಿ ಕಾಣಲಿದ್ದು, ಉಳಿದೆಡೆ ಪಾಶ್ರ್ವಗ್ರಹಣವಾಗಲಿದೆ. ಸೌದಿ ಅರೇಬಿಯಾ, ಕತಾರ್‌, ಯುಎಇ, ಒಮಾನ್‌, ಕತಾರ್‌, ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ, ಆಫ್ರಿಕಾ ದೇಶಗಳಲ್ಲಿ ಕೂಡ ಈ ಬಾರಿ ಕಂಕಣ ಸೂರ್ಯಗ್ರಹಣ ಕಾಣಸಿಗಲಿದೆ.

Latest Videos
Follow Us:
Download App:
  • android
  • ios