ಆಗಸ್ಟ್ ತಿಂಗಳಲ್ಲಿ ಗೋಚರಿಸಿದ ಬ್ಲಾಕ್ ಮೂನ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಬಾಹ್ಯಾಕಾಶದಲ್ಲಿ ನಡೆಯುವ ಅಪರೂಪದ ಈ ವಿಸ್ಮಯ ಬರಿಗಣ್ಣಿನಿಂದ ನೋಡಲು ಸಾಧ್ಯವೇ? ಬ್ಲಾಕ್ ಮೂನ್ ಎಂದರೇನು? ಇದು ಯಾವಾಗ ಸಂಭವಿಸುತ್ತೆ?

ನವದೆಹಲಿ (ಆ.24) ಬಾಹ್ಯಾಕಾಶದ ವಿಸ್ಮಯ ಕುರಿತು ಇದೀಗ ಬ್ಲಾಕ್ ಮೂನ್ ಎಲ್ಲೆಡೆ ಚರ್ಚೆಯಾಗುತ್ತಿದೆ. ಆಗಸದಲ್ಲಿ ನಡೆಯುವ ಹಲವು ಕೌತುಕುಗಳಿಗೆ ಅದರಲ್ಲೂ ವಿಶೇಷವಾಗಿ ಚಂದ್ರನ ಸುತ್ತಲು ನಡೆಯುವ ಘಟನೆಗಳಿಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಬ್ಲಡ್ ಮೂನ್, ಬ್ಲೂ ಮೂನ್, ಪಿಂಕ್ ಮೂನ್ ಸೇರಿದಂತೆ ಹಲವು ಘಟನೆಗಳು ನಡೆಯುತ್ತದೆ. ಆದರೆ ಹೆಚ್ಚಾಗಿ ಕೇಳದ ಬ್ಲಾಕ್ ಮೂನ್ ಏನು? ಆಗಸ್ಟ್ 23ರ ಮುಂಜಾನೆ ಅಂದರೆ 2.06AMಗೆ ಬ್ಲಾಕ್ ಮೂನ್ ಸಂಭವಿಸಿತ್ತು.

ಏನಿದು ಬ್ಲಾಕ್‌ಮೂನ್?

ಇದೊಂದು ಅಪರೂಪದ ವಿದ್ಯಮಾನ. ಚಂದ್ರನ ಕತ್ತಲ ಭಾಗ ಭೂಮಿಯ ಕಡೆ ಬಂದಾಗ ಬ್ಲಾಕ್ ಮೂನ್ ಸಂಭವಿಸುತ್ತದೆ. ಸುಲಭವಾಗಿ ಹೇಳಬೇಕು ಅಂದರೆ ಅಮವಾಸ್ಯೆ. ಆದರೆ ಎಲ್ಲಾ ಅಮವಾಸ್ಸೆಯಲ್ಲ, ಅಪರೂಪದ ಅಮವಾಸ್ಯೆ ಈ ಬ್ಲಾಕ್ ಮೂನ್. ಆಗಸ್ಟ್ 23ರಂದು ಸಂಭವಿಸಿದ ಬ್ಲಾಕ್ ಮೂನ್ ಒಂದೇ ಋತುವಿನಲ್ಲಿ ಸಂಭವಿಸುವ ಅಮವಾಸ್ಯೆ ಪೈಕಿ ಮೂರೇ ಅಮವಾಸ್ಯೆ ಇದಾಗಿದೆ. ಚಂದ್ರನು ಭೂಮಿ ಹಾಗೂ ಸೂರ್ಯನ ನಡುವೆ ಇರುವಾಗ ಚಂದ್ರನ ಕತ್ತಲೆಯ ಭಾಗ ಭೂಮಿ ಕಡೆ ಇರಲಿದೆ. ಚಂದ್ರನ ಕತ್ತಲ ಭಾಗ ಜೊತೆಗೆ ಭೂಮಿಯತ್ತ, ಆಗಸದಲ್ಲಿ ಚಂದ್ರನ ಬೆಳಕು ಇಲ್ಲದಿರುವ ಕಾರಣ ಈ ವಿದ್ಯಮಾನ ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ. ಕೆಲ ದರ್ಶಕಗಳ ನೆರವು ಅಗತ್ಯವಿದೆ.

ಅಮವಾಸ್ಯೆ ಕುರಿತು ಬಹುತೇಕರಿಗೆ ತಿಳಿದಿದೆ. ಯಾವಾಗ ಸಂಭವಿಸುತ್ತೆ ಅನ್ನೋ ನಿಖರ ಮಾಹಿತಿ ಇರದಿದ್ದರೂ ಅಮವಾಸ್ಯೆ ಕುರಿತು ಭಾರತೀಯರು ತಿಳಿದಿದ್ದಾರೆ. ಸಾಮಾನ್ಯವಾಗಿ ಪ್ರತಿ ತಿಂಗಳು ಅವಮಾಸ್ಯೆ ಬರುತ್ತದೆ. ಆದರೆ ಅಪರೂಪದಲ್ಲಿ ಒಂದೇ ತಿಂಗಳಲ್ಲಿ ಎರಡು ಅಮವಾಸ್ಯೆ ಘಟಿಸಲಿದೆ. ಈ ರೀತಿ ಪ್ರತಿ 29 ತಿಂಗಳಿಗೊಮ್ಮೆ ಸಂಭವಿಸುತ್ತದೆ. ಇದನ್ನು ಬ್ಲಾಕ್ ಮೂನ್ ಎಂದು ಕರೆಯಲಾಗುತ್ತದೆ. ಇದೊಂದೆ ಅಲ್ಲ, ಒಂದೇ ಋತುವಿನಲ್ಲಿ ಅಂದರೆ ಬೇಸಿಗಾಲ ಅಥವಾ ಚಳಿಗಾಲಗಳಲ್ಲಿ ಮೂರು ಅಮವಾಸ್ಯೆಗಳು ಬರುತ್ತದೆ. ಪ್ರತಿ 33 ತಿಂಗಳಿಗೊಮ್ಮೆ ಒಂದೇ ಋತುವಿನಲ್ಲಿ ನಾಲ್ಕು ಅಮವಾಸ್ಯೆಗಳು ಬಂದರೆ ಮೂರನೇ ಅಮವಾಸ್ಯೆ ಬ್ಲೂಕ್ ಮೂನ್ ಎಂದು ಕರೆಯಲಾಗುತ್ತದೆ.

ಬರಿಗಣ್ಣಿನಿಂದ ಬ್ಲಾಕ್‌ಮೂನ್‌ ಕಾಣಿಸದಿದ್ದರೂ ಹಲವರಿಗೆ ಕುತೂಹಲವೇಕೆ?

ಬ್ಲಾಕ್ ಮೂನ್ ಬರಿಗಣ್ಣಿನಿಂದ ಕಾಣಿಸುವುದಿಲ್ಲ. ಆದರೆ ಬ್ಲಾಕ್ ಮೂನ್ ದಿನ ವಿಜ್ಞಾನಿಗಳು, ಚಂದ್ರ, ಸೂರ್ಯ, ಗ್ರಹ, ನಕ್ಷತ್ರಗಳ ಆಸಕ್ತಿ ಹೊಂದಿದವರು ಈ ದಿನವನ್ನು ಹೆಚ್ಚು ಇಡಪಡುತ್ತಾರೆ. ಕಾರಣ ಬ್ಲಾಕ್ ಮೂನ್ ದಿನ ಆಗಸದಲ್ಲಿ ಕತ್ತಲು ಆವರಿಸುತ್ತದೆ. ಚಂದ್ರನ ಬೆಳಕು ಇರುವುದಿಲ್ಲ. ಈ ವೇಳೆ ನಕ್ಷತ್ರಗಳು, ಕ್ಷುದ್ರಗ್ರಹಗಳು, ಇತರ ಸಣ್ಣ ಸಣ್ಣ ನಕ್ಷತ್ರ ಪುಂಜಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿದೆ.