ಭೂಮಿಗೆ ಮರಳುವ ಮುನ್ನ ಐಎಸ್‌ಎಸ್ ಕಮಾಂಡ್‌ಅನ್ನು ಅಲೆಕ್ಸಿ ಒವ್ಚಿನಿನ್ ಅವರಿಗೆ ವರ್ಗಾಯಿಸಿದಾಗ ಸುನೀತಾ ವಿಲಿಯಮ್ಸ್ ಭಾವುಕರಾದರು. ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್ ಮುಂಬರುವ ದಿನಗಳಲ್ಲಿ ನಾಸಾ ಗಗನಯಾತ್ರಿಗಳು ಮತ್ತು ಅಂತರರಾಷ್ಟ್ರೀಯ ಸಿಬ್ಬಂದಿಯೊಂದಿಗೆ ಪ್ರಾರಂಭವಾಗಲಿದೆ.

ನ್ಯೂಯಾರ್ಕ್‌ (ಮಾ.11): ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಮಾಂಡ್‌ಅನ್ನು ರಷ್ಯಾದ ಕಾಸ್ಮೋಸ್ಯಾಟ್‌ ಅಲೆಕ್ಸಿ ಒವ್ಚಿನಿನ್‌ಗೆ ಹಸ್ತಾಂತರ ಮಾಡಿದ್ದಾರೆ. ಇದರೊಂದಿಗೆ ಅವರು ಈ ವಾರದ ಅಂತ್ಯದಲ್ಲಿ ಭೂಮಿಗೆ ಬರೋದ ನಿಶ್ಚಯವಾಗಿದೆ. ಸ್ಪೇಸ್‌ ಎಕ್ಸ್‌ ಕ್ರೂ ಡ್ರ್ಯಾಗನ್‌ ಸ್ಪೇಸ್‌ಕ್ರಾಫ್ಟ್‌ನೊಂದಿಗೆ ಸುನೀತಾ ವಿಲಿಯಮ್ಸ್‌ ಭೂಮಿಗೆ ವಾಪಾಸಗಲಿದ್ದು, ಅದಕ್ಕೂ ಮುನ್ನ ಐಎಸ್‌ಎಸ್‌ ಕಮಾಂಡ್‌ಅನ್ನು ರಷ್ಯಾದ ಕಾಸ್ಮೋಸ್ಯಾಟ್‌ಗೆ ಹಸ್ತಾಂತರ ಮಾಡಿದ್ದಾರೆ. ಹಲವು ತಿಂಗಳುಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾದ ಇಬ್ಬರು ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌ ಹಾಗೂ ಬ್ಯಾರಿ ವಿಲ್ಮೋರ್‌ ಈಗ ಭೂಮಿಗೆ ಮರಳಲು ಸಜ್ಜಾಗಿದ್ಆರೆ. ಈ ನಿಟ್ಟಿನಲ್ಲಿ ರಷ್ಯಾದ ರೋಸ್‌ಕಾಸ್ಮೋಸ್‌ ಹಾಗೂ ಅಮೆರಿಕದ ನಾಸಾ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಜೂನ್‌ 5 ರಂದು 10 ದಿನಗಳ ಕೆಲಸಕ್ಕಾಗಿ ಸುನೀತಾ ವಿಲಿಯಮ್ಸ್‌ ಹಾಗೂ ಬ್ಯಾರಿ ವಿಲ್ಮೋರ್‌ ಬೋಯಿಂಗ್‌ ಸ್ಟಾರ್‌ಲೈನರ್ ಮೂಲಕ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಆದರೆ, ಬೋಯಿಂಗ್‌ ಸ್ಟಾರ್‌ಲೈನರ್‌ ನೌಕೆಯ ರಿಟರ್ನ್‌ ಕ್ಯಾಪ್ಸೂಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಳೆದ 9 ತಿಂಗಳಿನಿಂದ ಸುನೀತಾ ಹಾಗೂ ಬ್ಯಾರಿ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಗಗನಯಾತ್ರಿಗಳಿಲ್ಲದೆ ಬಾಹ್ಯಾಕಾಶ ನೌಕೆ ಭೂಮಿಗೆ ವಾಪಸಾಗಿತ್ತು.

ಆ ಬಳಿಕ ಸ್ಪೇಸ್‌ ಎಕ್ಸ್‌ ಕ್ರೂ-9 ಮಿಷನ್‌ಅನ್ನು ಫೆಬ್ರವರಿಯಲ್ಲಿ ಲಾಂಚ್‌ ಮಾಡಲಾಗಿತ್ತು.ನಾಸಾ ಗಗನಯಾತ್ರಿ ನಿಕ್‌ ಹೇಗ್‌ ಮತ್ತು ರೋಸ್‌ಕಾಸ್ಮೋಸ್‌ ಕಾಸ್ಮೋಸ್ಯಾಟ್‌ ಅಲೆಕ್ಸಾಂಡರ್‌ ಗೊರ್ಬನೋವ್‌ ಡ್ರ್ಯಾಗನ್‌ ಸ್ಪೇಸ್‌ಕ್ರಾಫ್ಟ್‌ನಲ್ಲಿ ಐಎಸ್‌ಎಸ್‌ ತಲುಪಿದ್ದರು. ಈಗ ಸಾಕಷ್ಟು ವಿಳಂಬದ ನಂತರ ಇವರಿಬ್ಬರೊಂದಿಗೆ ಸುನೀತಾ ವಿಲಿಯಮ್ಸ್‌ ಹಾಗೂ ಬ್ಯಾರಿ ವಿಲ್ಮೋರ್‌ ಮಾರ್ಚ್‌ 19 ರಂದು ಭೂಮಿಗೆ ವಾಪಸಾಗಲಿದ್ದಾರೆ.

ಇತ್ತೀಚೆಗೆ ಐಎಸ್‌ಎಸ್‌ನಲ್ಲಿ ಕಮಾಂಡ್‌ ನೀಡುವ ಕಾರ್ಯಕ್ರಮ ನಡೆದಿದೆ. ಈ ವೇಳೆ ಸುನೀತಾ ವಿಲಿಯಮ್ಸ್‌, ಈ ಮಿಷನ್‌ನಲ್ಲಿ ನಮಗೆ ಸಹಾಯ ಮಾಡಿದ ಎಲ್ಲರನ್ನೂ ನೆನಪಿಸಿಕೊಂಡಿದ್ದಾರೆ. ಟ್ರೇನರ್‌ಗಳು, ಸ್ನೇಹಿತರು, ಕುಟುಂಬದವರು ಹಾಗೂ ಕಂಟ್ರೋಲ್‌ ಸೆಂಟರ್‌ಅನ್ನು ಕೂಡ ನೆನಪಿಸಿಕೊಂಡಿದ್ದಾರೆ. ಕಮಾಂಡ್‌ಅನ್ನು ಅಲೆಕ್ಸಿ ಒವ್ಚಿನಿನ್‌ಗೆ ಹಸ್ತಾಂರರ ಮಾಡುವ ವೇಳೆ, ನಾವು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್‌ನಲ್ಲಿ ಗಗನಯಾತ್ರಿಗಳು: ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್ ಮಾರ್ಚ್ 12 ಅಥವಾ 13 ರಂದು ಕೆನಡಿ ಸ್ಪೇಸ್ ಸೆಂಟರ್ (ಕೆಎಸ್‌ಸಿ) ನಿಂದ ನಾಸಾ ಗಗನಯಾತ್ರಿಗಳಾದ ಆನ್ ಮೆಕ್‌ಕ್ಲೇನ್ ಮತ್ತು ನಿಕೋಲ್ ಅಯರ್ಸ್, ಜೆಎಎಕ್ಸ್‌ಎಯ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್‌ನ ಕಿರಿಲ್ ಪೆಸ್ಕೋವ್ ಅವರೊಂದಿಗೆ ಉಡಾವಣೆಗೊಳ್ಳಲಿದೆ. ನಿರ್ಗಮಿಸುವ ಸಿಬ್ಬಂದಿಯಿಂದ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವಹಿಸಿಕೊಂಡ ನಂತರ ಈ ಗಗನಯಾತ್ರಿಗಳು ಅಧಿಕೃತವಾಗಿ ಎಕ್ಸ್‌ಪೆಡಿಶನ್ 72 ರ ಸದಸ್ಯರಾಗುತ್ತಾರೆ. ಸುನೀತಾ ವಿಲಿಯಮ್ಸ್ ಮಾರ್ಚ್ 19 ರಂದು ಸಹ ಸಿಬ್ಬಂದಿ ಸದಸ್ಯರೊಂದಿಗೆ ಹೊರಡುವ ಮೊದಲು ಒಂದು ವಾರದ ಹಸ್ತಾಂತರ ಕಾರ್ಯವಿಧಾನದಲ್ಲಿ ತೊಡಗುತ್ತಾರೆ.

ಸ್ಪೇಸಲ್ಲೇ ಉಳಿದ ಸುನೀತಾ ವಿಲಯಮ್ಸ್, ಕೈ ತುಂಬಾ ಸಂಬಳ ಸಿಕ್ಕರೂ ಏನುಪಯೋಗ?

ಕ್ರೂ-10 ಕ್ರೂ-9 ಅನ್ನು ಆರು ತಿಂಗಳ ಕಾಲ ಇರಿಸಿಕೊಳ್ಳಲಿದೆ, ಇದು ಉತ್ಪಾದನಾ ವಿಳಂಬದಿಂದಾಗಿ ಹೊಸ ಬಾಹ್ಯಾಕಾಶ ನೌಕೆಯ ಬದಲಿಗೆ ಅನುಭವಿ ಡ್ರ್ಯಾಗನ್ ಎಂಡ್ಯೂರೆನ್ಸ್‌ನಲ್ಲಿ ಹಾರುತ್ತದೆ. ಏಪ್ರಿಲ್ ಮಧ್ಯದವರೆಗೆ ಬಾಹ್ಯಾಕಾಶದಲ್ಲಿ ಉಳಿಯುವ ನಿರೀಕ್ಷೆಯಿರುವ ಓವ್ಚಿನಿನ್, ರೋಸ್ಕೋಸ್ಮೋಸ್ ಫ್ಲೈಟ್ ಎಂಜಿನಿಯರ್ ಇವಾನ್ ವ್ಯಾಗ್ನರ್ ಮತ್ತು ನಾಸಾ ಫ್ಲೈಟ್ ಎಂಜಿನಿಯರ್ ಡಾನ್ ಪೆಟಿಟ್ ಅವರೊಂದಿಗೆ ನಿಲ್ದಾಣದ ಕಾರ್ಯಾಚರಣೆಗಳನ್ನು ನೋಡಿಕೊಳ್ಳಲಿದ್ದಾರೆ.

ಬಾಹ್ಯಾಕಾಶದಲ್ಲಿ ಮಣ್ಣಿಲ್ಲದೆ ಎಲೆಕೋಸು ಬೆಳೆಯುತ್ತಿರುವ ಸುನೀತಾ ವಿಲಿಯಮ್ಸ್‌, ಆದರೆ ಇದು ತಿನ್ನೋದಕ್ಕಲ್ಲ!