Asianet Suvarna News Asianet Suvarna News

Stephen Hawking ಭೂಮಿ ಅಂತ್ಯಕ್ಕೂ ಮುನ್ನ ಮನುಷ್ಯ ಬದುಕಬೇಕಿದ್ದರೆ ಬೇರೆ ಗ್ರಹಕ್ಕೆ ತೆರಳುವುದು ಅನಿವಾರ್ಯ ಎಂದಿದ್ದ ವಿಜ್ಞಾನಿ!

ಸ್ಟೀಫನ್ ಹಾಕಿಂಗ್ ಎಂಬ ಮಹಾಮೇಧಾವಿ ವಿಜ್ಞಾನಿ ಬದುಕಿರುತ್ತಿದ್ದರೆ ಇಂದಿಗೆ ಅವರಿಗೆ 80 ವರ್ಷ ತುಂಬಿರುತ್ತಿತ್ತು. ವಿಜ್ಞಾನಲೋಕದ ಗ್ರಹಿಕೆಗಳನ್ನೇ ತಲೆಕೆಳಗು ಮಾಡಿದ ಈ ವ್ಯಕ್ತಿಯ ಕೊಡುಗೆಗಳ ಬಗ್ಗೆ ನಾವು ತಿಳಿಯೋಣ.

 

 

Stephen hawking birthday scientist who gave new dimensions to science his life and works
Author
Bengaluru, First Published Jan 8, 2022, 8:51 PM IST
  • Facebook
  • Twitter
  • Whatsapp

Tech Desk: ಇನ್ನು ನೂರು ವರ್ಷಗಳಲ್ಲಿ ಭೂಮಿಯ ಅವಸಾನ ಆರಂಭವಾಗುತ್ತದೆ. ಸೌರಜ್ವಾಲೆಗಳು (Solar flames) ಈ ಭೂಮಿಯನ್ನು (Earth) ಸುಡಲು ಆರಂಭಿಸುತ್ತವೆ. ಅಷ್ಟರಲ್ಲಿ ನಾವು ಬೇರೆ ವಾಸಯೋಗ್ಯ ಗ್ರಹಗಳಿಗೆ ಹೋಗುವ ತಂತ್ರಜ್ಞಾನಗಳನ್ನು ಹುಡುಕಿಕೊಳ್ಳಬೇಕು. ಇಲ್ಲವಾದರೆ ಮನುಷ್ಯ ಇಲ್ಲಿಯೇ ನಾಶವಾಗಿಹೋಗುತ್ತಾನೆ- ಎಂದು ಹೇಳಿದವನು ಸ್ಟೀಫನ್ ಹಾಕಿಂಗ್ (Stephen Hawking).ಅಪ್ರತಿಮ ಭೌತಶಾಸ್ತ್ರಜ್ಞ, ಖಗೋಳ ವಿಜ್ಞಾನಿ (Astronomist), ಬ್ರಹ್ಮಾಂಡದ ನಿಗೂಢಗಳನ್ನೆಲ್ಲ ಶೋಧಿಸಿದ ವಿಜ್ಞಾನಿ, ಪ್ರಾಧ್ಯಾಪಕ, ವಿಜ್ಞಾನ ಬರಹಗಾರ (writer) ಹೀಗೆ ಹತ್ತು ಹಲವು ಮುಖಗಳ ಮಹಾಪ್ರತಿಭೆ ಸ್ಟೀಫನ್ ಹಾಕಿಂಗ್. ಅಂತಹಾ ಅಪರಿಮಿತ ಜ್ಞಾನ ಅವರದ್ದು. ಭೌತವಿಜ್ಞಾನದ ಬ್ರಹ್ಮಾಂಡ ರೂಪ ತಳೆದ ಬಗೆಯ ಬಗ್ಗೆ ಅವರ ಸಂಶೋಧನೆ ಮೌಲ್ಯಕ್ಕೆ ನಿಲುಕದ್ದು.

ಸ್ಟೀಫನ್ ಹಾಕಿಂಗ್ ಅವರ ಪೂರ್ಣ ಹೆಸರು ಸ್ಟೀಫನ್ ವಿಲಿಯಂ ಹಾಕಿಂಗ್. ಫ್ರಾಂಕ್ ಮತ್ತು ಇಸಾಬೆಲ್ಲಾ ಹಾಕಿಂಗ್ ಅವರ ಮೊದಲ ಮಗನಾಗಿ ಅವರು ಜನವರಿ 8, 1942ರಲ್ಲಿ ಆಕ್ಸ್‌ಫರ್ಡ್‌ನಲ್ಲಿ (Oxford) ಜನಿಸಿದರು. ಸ್ಟೀಫನ್‌ಗೆ ಇಬ್ಬರು ತಂಗಿಯರು ಮತ್ತು ಒಬ್ಬ ದತ್ತು ತಮ್ಮ ಸಹ ಇದ್ದ. ಅವರ ಕುಟುಂಬ ಅತ್ಯಂತ ಬುದ್ದಿವಂತರ ಕುಟುಂಬ ಎಂದು ಆಗಲೇ ಲಂಡನ್ನಿನಾದ್ಯಂತ ಹೆಸರು ಗಳಿಸಿತ್ತು. ಸ್ಟೀಫನ್‌ ಎಳವೆಯಿಂದಲೂ ಪುಸ್ತಕದ ಹುಳ.

ಇದನ್ನೂ ಓದಿ: Apple CEO Earnings 2021ರಲ್ಲಿ ಊಹೆಗೂ ನಿಲುಕದ ಆದಾಯ ಗಳಿಸಿದ ಆ್ಯಪಲ್ ಸಿಇಒ ಟಿಮ್ ಕುಕ್!

ಸ್ಟೀಫನ್ ಹಾಕಿಂಗ್ ಅವರ ಪ್ರಾಥಮಿಕ ಮತ್ತು ಕಾಲೇಜು ಹಂತದ ಶಿಕ್ಷಣಗಳು ಲಂಡನ್‌ನಲ್ಲಿಯೇ ನಡೆದವು. ಮೊದಲಿಗೆ ಪಾಠಪ್ರವಚನಗಳಲ್ಲಿ ಅಷ್ಟೇನು ಚುರುಕಿರದಿದ್ದ ಸ್ಟೀಫನ್ ಆ ನಂತರ ಅತ್ಯುತ್ತಮ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿ ಗುರುತಿಸಿಕೊಂಡರು. ತಮ್ಮ ಕಾಲೇಜು ದಿನಗಳಲ್ಲಿ ತಮ್ಮ ಗಣಿತ ಶಿಕ್ಷಕರೊಂದಿಗೆ ಸೇರಿ ಕೈಗಡಿಯಾರ, ದೂರವಾಣಿ ಮತ್ತಿತರ ವಸ್ತುಗಳ ಬಿಡಿ ಭಾಗಗಳನ್ನು ಬಳಸಿ ಸರಳ ಕಂಪ್ಯೂಟರ್‌ ಒಂದನ್ನು ನಿರ್ಮಿಸಿದ್ದರು. ಕಾಲೇಜಿನಲ್ಲಿ ಸ್ಟೀಫನ್‌ನನ್ನು ಐನ್‌ಸ್ಟೈನ್ (Albert Einstein) ಎಂದು ಕರೆಯಲಾಗುತ್ತಿತ್ತು. ಐನ್‌ಸ್ಟೈನ್ ಹುಟ್ಟಿದ ದಿನವೇ ಸ್ಟೀಫನ್‌ ನಿಧನ ಹೊಂದಿದ್ದು (ಮಾರ್ಚ್ ೧೪) ವಿಚಿತ್ರ.

'ಮದುವೆ ನನಗೆ ಬದುಕಲು ಕಾರಣ ನೀಡಿತು'

ಆ ನಂತರ ಅವರು ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ಭೌತ ವಿಜ್ಞಾನ ಅಭ್ಯಾಸ ಮಾಡಿದರು. ಅಲ್ಲಿಂದ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಕೆಂಬ್ರಿಡ್ಜ್ ವಿವಿಗೆ ತೆರಳಿದರು. ಅಲ್ಲಿ ಅವರಿಗೆ ಭೌತ ವಿಜ್ಞಾನ ಮತ್ತು ಕಾಸ್ಮೋಲೊಜಿ ವಿಷಯದ ಬಗ್ಗೆ ಹೆಚ್ಚು ಸಂಶೋಧನೆ ಮಾಡುವ ಅವಕಾಶ ಒದಗಿಬಂತು. ಕೆಂಬ್ರಿಡ್ಜ್‌ನಲ್ಲಿ ಕಲಿಯುವ ಸಮಯದಲ್ಲಿಯೇ ಅವರಿಗೆ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ ಅಥವಾ ಮೊಟಾರ್ ನ್ಯುರಿನೋ ಖಾಯಿಲೆ ಇರುವುದು ತಿಳಿದುಬಂತು. ಅವರು ಮಾತನಾಡಲು ಮತ್ತು ನಡೆಯಲು ಕಷ್ಟಪಡುವಂತಾಯಿತು.

ಇದೇ ಸಮಯದಲ್ಲಿ ಅವರು ಜೇನ್ ವೈಲ್ಡ್ ಎಂಬುವರನ್ನು 1965ರಲ್ಲಿ ವಿವಾಹವಾದರು. ಆಗ ತಾನೆ ಮೋಟಾರ್ ನ್ಯುರಿನೋ ಖಾಯಿಲೆಗೆ ತುತ್ತಾಗಿದ್ದ ಸ್ಟೀಫನ್ ಅವರು 'ಮದುವೆ ನನಗೆ ಬದುಕಲು ಕಾರಣ ನೀಡಿತು' ಎಂದು ಆಶಾವಾಧದಿಂದ ನುಡಿದಿದ್ದರು. ಸ್ಟೀಫನ್ ಮತ್ತು ಜೇನ್ ಅವರಿಗೆ ರಾಬರ್ಟ್‌, ಲೂಸಿ ಮತ್ತು ಟಿಮೋಟಿ ಎಂಬ ಮೂರು ಮಕ್ಕಳು ಜನಿಸಿದರು. ಮೋಟಾರ್ ನ್ಯುರಿನೋ ಖಾಯಿಲೆಯೊಂದಿಗೆ ಸ್ಟೀಫನ್ ಹಾಕಿಂಗ್ ಅವರು ತಮ್ಮ ಜೀವನದ ಬಹುಕಾಲ ಸೆಣಸಾಡುತ್ತಲೇ ಕಳೆದರು. ಅವರ ಹದಿವಯಸ್ಸಿನಲ್ಲೆಯೇ ಅವರಿಗೆ ಅಮಯೋಟ್ರೊಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಅಥವಾ ಮೋಟಾರ್ ನ್ಯುರಿನೋ ಖಾಯಿಲೆ ಇರುವುದು ಪತ್ತೆಯಾಯಿತು.

ಇದನ್ನೂ ಓದಿ: Stone Man Syndrome: ಹೆಪ್ಪುಗಟ್ಟುತ್ತಿವೆ 29ರ ಯುವಕನ ಸ್ನಾಯುಗಳು: ಏನಿದು ಅಪರೂಪದ ಕಾಯಿಲೆ?

ಅವರಿಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ, ಮಾತುಗಳು ಅಸ್ಪಷ್ಟವಾಗುತ್ತಾ ಹೋಯಿತು. ಅವರಿಗೆ ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ, ಬರೆಯುವುದೂ ದೂರದ ಮಾತಾಗಿತ್ತು, ಹಾಗಾಗಿ ಅವರು ತಳ್ಳುಕುರ್ಚಿಯ ಸಹಾಯ ಪಡೆಯಲೇ ಬೇಕಾಯಿತು. ಆ ಸಮಯದಲ್ಲಿ ಅವರು ಅಂಗವಿಕಲರಿಗಾಗಿ ಧನ ಸಹಾಯ ಮಾಡುವ ಕಾರ್ಯಕ್ರಮಗಳನ್ನು ಮಾಡಲು ಪ್ರಾರಂಭಿಸಿದರು. ಆ ನಂತರ ವಾಲ್ಟರ್ ವಾಲ್ಟೋಜ್ ಎಂಬ ವ್ಯಕ್ತಿ ಸ್ಟೀಫನ್‌ಗಾಗಿ 'ಈಕ್ವಲೈಜರ್' ಎಂಬ ಅತ್ಯಾಧುನಿಕ ವೀಲ್‌ ಚೇರ್ ತಯಾರಿಸಿ ಕೊಟ್ಟ. ತಂತ್ರಜ್ಞಾನದಿಂದ ತುಂಬಿದ್ದ ಆ ವೀಲ್‌ಚೇರ್‌ ಮೂಲಕ ಸ್ಟೀಫನ್ ಅವರು ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ವೈಜ್ಞಾನಿಕ ಪುಸ್ತಕಗಳನ್ನೂ ಬರೆಯುತ್ತಿದ್ದರು.

ಇದನ್ನೂ ಓದಿ: WhatsApp Features: ಮೇಸೆಜ್‌ ನೋಟಿಫಿಕೇಶನ್‌ ಜತೆ ಪ್ರೊಫೈಲ್ ಫೋಟೋ ತೋರಿಸಲಿರುವ ವಾಟ್ಸಾಪ್‌!

ವಿಜ್ಞಾನವೇ ಎಲ್ಲಾ, ಧಾರ್ಮಿಕತೆ, ದೇವರು ಎಲ್ಲಾ ಶುದ್ಧ ನಾನ್‌ಸೆನ್ಸ್ ಎನ್ನುತ್ತಿದ್ದ ಸ್ಟೀಫನ್ ಹಾಕಿಂಗ್ ನಂಬುತ್ತಿದ್ದುದು ವಿಜ್ಞಾನ ಒಂದನ್ನೇ. "'ವಿಜ್ಞಾನದ ನಿಯಮಗಳೇ ಜಗತ್ತನ್ನು ಕಾಪಾಡುತ್ತಿರುವುದು, ಮತ್ತು ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಬದಲಾವಣೆಗೆ ಕಾರಣ'' ಎಂದಿದ್ದ ಅವರು ಧಾರ್ಮಿಕತೆಯನ್ನು ಪಾಲಿಸಿದವರೇ ಅಲ್ಲ.

ಬ್ರೀಫ್ ಹಿಸ್ಟರಿ ಆಫ್ ಟೈಮ್ ಎಂಬ ಪುಸ್ತಕ ಅತ್ಯಧಿಕ ಮಾರಾಟ!

ಭೂಮಿಯೂ ಸೇರಿದಂತೆ ಇಡೀ ಬ್ರಹ್ಮಾಂಡ (Universe) ಸೃಷ್ಟಿಯಾಗಿರುವುದು ಒಂದು ಮಹಾ ಸ್ಫೋಟದಿಂದ. ಅದು ಈಗಲೂ ನಡೆಯುತ್ತಲೇ ಇದೆ ಹಾಗೂ ವಿಶ್ವ ವಿಸ್ತರಿಸುತ್ತಲೇ ಇದೆ ಎಂಬ ವಾದಕ್ಕೆ ಅವರು ಪೂರಕ ಸಾಕ್ಷ್ಯಗಳ್ನು ಒದಗಿಸಿದರು. ತುಂಬ ಹಳೆಯ ನಕ್ಷತ್ರಗಳು ತಮ್ಮ ಭಾರಕ್ಕೆ ತಾವೇ ಕುಸಿದು ಆ ಜಾಗದಲ್ಲಿ ದೊಡ್ಡದೊಂದು ಪೊಳ್ಳು ನಿರ್ಮಾಣವಾಗುತ್ತದೆ. ಅದನ್ನೇ ಬ್ಲ್ಯಾಕ್ ಹೋಲ್ (Black Hole) ಅಥವಾ ಕಪ್ಪು ಕುಳಿ ಎನ್ನಲಾಗುತ್ತದೆ. ಅಲ್ಲಿಗೆ ಒಳಹೋಗುವ ಯಾವುದೇ ವಸ್ತುವೂ ಹೊರಬರುವುದಿಲ್ಲ. ಬೆಳಕು ಹೋದರೂ ಅದು ಮಾಯವಾಗುತ್ತದೆ ಎಂದು ಸ್ಟೀಫನ್ ಪ್ರತಿಪಾದಿಸಿದರು.

ಅವರು ಹೇಳಿದ ಹಲವಾರು ವೈಜ್ಞಾನಿಕ ಸಂಗತಿಗಳು ಇನ್ನೂ ಹೆಚ್ಚಿನವರಿಗೆ ಅರ್ಥವಾಗಿಲ್ಲ. ಅವರು ಬರೆದ ಬ್ರೀಫ್ ಹಿಸ್ಟರಿ ಆಫ್ ಟೈಮ್ ಎಂಬ ಪುಸ್ತಕ ಅತ್ಯಧಿಕ ಮಾರಾಟ ಕಂಡ, ಹೆಚ್ಚಿನವರು ಓದಿನ ಜನಪ್ರಿಯ ಪುಸ್ತಕಗಳಲ್ಲಿ ಒಂದು. ಅವರು ನ್ಯೂಟನ್ (Sir Isaac Newton), ಐನ್‌ಸ್ಟೈನ್ ಮುಂತಾದವ ಮೇಧಾವಿಗಳ ಸಾಲಿನಲ್ಲಿ ನಿಲ್ಲುವ ಪ್ರತಿಭೆಯಾಗಿದ್ದರು.

Follow Us:
Download App:
  • android
  • ios