ರಾವಣ-1 ಉಪಗ್ರಹ ಯಶಸ್ವಿ ಉಡಾವಣೆ: ಬಾಹ್ಯಾಕಾಶ ಜಗತ್ತಿಗೆ ಕಾಲಿಟ್ಟ ಶ್ರೀಲಂಕಾ!
‘ರಾವಣ-1 ಉಪಗ್ರಹ ಯಶಸ್ವಿ ಉಡಾವಣೆ| ಬಾಹ್ಯಾಕಾಶ ಜಗತ್ತಿಗೆ ಕಾಲಿಟ್ಟ ಶ್ರೀಲಂಕಾ| ಅರ್ಥುರು ಸಿ ಕ್ಲಾರ್ಕೆ ಸಂಸ್ಥೆಯ ಇಂಜಿನಿಯರ್ಗಳು ನಿರ್ಮಿಸಿದ ಉಪಗ್ರಹ| ಥಿರಿಂಡು ದಯಾರತ್ನೆ ಮತ್ತು ದುಲಾನಿ ಚಾಮಿಕಾ ಕನಸಿನ ಕೂಸು| ಜಪಾನಿನ ಯೂಷು ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಾಜಿಸ್ ನಲ್ಲಿ ಉಪಗ್ರಹ ನಿರ್ಮಾಣ| ಐದು ವರ್ಷಗಳವರೆಗೆ ಸಕ್ರಿಯವಾಗಿರಲಿರುವ ಉಪಗ್ರಹ|
ಕೋಲಂಬೋ(ಏ.18): ಬಾಹ್ಯಾಕಾಶ ಜಗತ್ತಿಗೆ ಶ್ರೀಲಂಕಾ ಅಧಿಕೃತವಾಗಿ ಪ್ರವೇಶ ಪಡೆದಿದ್ದು, ತನ್ನ ಮೊದಲ ‘ರಾವಣ-1' ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ.
ಅರ್ಥುರು ಸಿ ಕ್ಲಾರ್ಕೆ ಸಂಸ್ಥೆಯ ಇಂಜಿನಿಯರ್ಗಳಾದ ಥಿರಿಂಡು ದಯಾರತ್ನೆ ಮತ್ತು ದುಲಾನಿ ಚಾಮಿಕಾ ಈ ಉಪಗ್ರಹವನ್ನು ತಯಾರಿಸಿದ್ದಾರೆ.
Sri Lanka's first satellite 'Raavana 1' will be launched into orbit shortly on board an Antares rocket from the Mid-Atlantic Regional Spaceport at #NASA’s Wallops Flight Facility in Virginia, USA (File) @usslbc @srilankatech pic.twitter.com/GskpF7ujIo
— Sri Lanka Technologies (@srilankatech) April 17, 2019
ಜಪಾನಿನ ಯೂಷು ಇನ್ಸ್ಟಿಟ್ಯೂಟ್ ಆಫ್ ಟೆಕ್ನಲಾಜಿಸ್ ಸಂಸ್ಥೆಯಲ್ಲಿ ಈ ಉಪಗ್ರಹ ನಿರ್ಮಿಸಲಾಗಿದ್ದು, ಒಟ್ಟು ಐದು ಯೋಜನೆಗಳಿಗೆ ಈ ಉಪಗ್ರಹ ಸಹಾಯಕಾರಿಯಾಗಲಿದೆ ಎಂದು ಹೇಳಲಾಗಿದೆ.
1,000 ಕ್ಯೂಬಿಕ್ ಸೆ.ಮೀ ಅಳತೆ ಹೊಂದಿರುವ ಈ ಉಪಗ್ರಹ ಕೇವಲ 1.05 ಕೆ.ಜಿ ತೂಕವಿದೆ. ಈ ಉಪಗ್ರಹ ಐದು ವರ್ಷಗಳವರೆಗೆ ಸಕ್ರಿಯವಾಗಿರಲಿದೆ ಎಂದು ಅಂದಾಜಿಸಲಾಗಿದೆ.