Shenzhou-13 6 ತಿಂಗಳ ಯಶಸ್ವಿ ಕಾರ್ಯಾಚರಣೆ: ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಚೀನಾದ ಮೂವರು ಗಗನಯಾತ್ರಿಗಳು

ಶೆಂಝೌ-13  ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಸ್ಪರ್ಧಿಸಲು ಹಾಗೂ ಬಾಹ್ಯಾಕಾಶದಲ್ಲಿ ಪ್ರಾಬಲ್ಯತೆ ಹೊಂದಲು ಚೀನಾದ ಇತ್ತೀಚೆಗಿನ ಪ್ರಮುಖ ಯೋಜನೆಯಾಗಿದೆ. 

Shenzhou 13 after six months in space three Chinese astronauts return to Earth on Saturday mnj

ಬೀಜಿಂಗ್ (ಏ. 16): ಬಾಹ್ಯಾಕಾಶದಲ್ಲಿ 183 ದಿನಗಳ  ಯಶಸ್ವಿ ಕಾರ್ಯಾಚರಣೆ ಬಳಿಕ ಚೀನಾದ ಮೂವರು ಗಗನಯಾತ್ರಿಗಳು ಶನಿವಾರ ಉತ್ತರ ಚೀನಾಕ್ಕೆ ಬಂದಿಳಿದರು ಎಂದು ರಾಜ್ಯ ಪ್ರಸಾರಕ ಸಿಸಿಟಿವಿ ಹೇಳಿದೆ. ಈ ಮೂಲಕ ಇಲ್ಲಿಯವರೆಗಿನ ದೇಶದ ಸುದೀರ್ಘವಾದ ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆ ಕೊನೆಗೊಂಡಿದೆ. ಶೆಂಝೌ-13  ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಸ್ಪರ್ಧಿಸಲು ಹಾಗೂ ಬಾಹ್ಯಾಕಾಶದಲ್ಲಿ ಪ್ರಾಬಲ್ಯತೆ ಹೊಂದಲು ಚೀನಾದ ಇತ್ತೀಚೆಗಿನ ಪ್ರಮುಖ ಯೋಜನೆಯಾಗಿದೆ. 

ಶೆಂಝೌ-13 ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದಲ್ಲಿ ರೋವರನ್ನು ಇಳಿಸಿ ನಂತರ  ಚಂದ್ರನಿಗೆ ಪ್ರೋಬ್ ಕಳುಹಿಸಿತ್ತು. ಪ್ರೋಬ್ ಎಂಬುದು ಬಾಹ್ಯಾಕಾಶ ನೌಕೆಯಾಗಿದ್ದು ಅದು ವಿಜ್ಞಾನದ ಮಾಹಿತಿಯನ್ನು ಸಂಗ್ರಹಿಸಲು ಬಾಹ್ಯಾಕಾಶದಲ್ಲಿ ಪ್ರಯಾಣಿಸುತ್ತದೆ. ಪ್ರೋಬ್‌ಗಳು ಗಗನಯಾತ್ರಿಗಳನ್ನು ಹೊಂದಿರುವುದಿಲ್ಲ ಆದರೆ ವಿಜ್ಞಾನಿಗಳ ಅಧ್ಯಯಕ್ಕೆ ಮಾಹಿತಿಯನ್ನು ಭೂಮಿಗೆ ರವಾನಿಸುತ್ತವೆ.

ಯಶಸ್ವಿ ಲ್ಯಾಂಡಿಂಗ್: ಝೈ ಝಿಗಾಂಗ್, ಯೆ ಗುವಾಂಗ್‌ಫು ಮತ್ತು ವಾಂಗ್ ಯಾಪಿಂಗ್, ಒಟ್ಟು ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ  ಚೀನಾದ ಟಿಯಾಂಗಾಂಗ್ (Tiangong) ಬಾಹ್ಯಾಕಾಶ ನಿಲ್ದಾಣದ ಟಿಯಾನ್ಹೆ ಕೋರ್ ಮಾಡ್ಯೂಲ್‌ನಲ್ಲಿ ಆರು ತಿಂಗಳು ಕಳೆದ ನಂತರ, ಬೀಜಿಂಗ್ ಸಮಯ 10 ಗಂಟೆಗೆ ಸ್ವಲ್ಪ ಮೊದಲು ಸಣ್ಣ ಕ್ಯಾಪ್ಸುಲ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದಾರೆ.  "ಶೆಂಜೌ 13 ರ ಮರು-ಪ್ರವೇಶ ಕ್ಯಾಪ್ಸುಲ್ ಯಶಸ್ವಿಯಾಗಿ ಇಳಿಯಿತು" ಎಂದು ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದೆ. 

ಇದನ್ನೂ ಓದಿ: ಮಂಗಳನ ಅಂಗಳದಿಂದ ಸೂರ್ಯೋದಯ ಹೇಗೆ ಕಾಣುತ್ತೆ ಗೊತ್ತಾ? ನಾಸಾ ಸೆರೆಹಿಡಿದ ಈ ಚಿತ್ರ ನೋಡಿ

ಸಿಸಿಟಿವಿಯ ನೇರ ದೃಶ್ಯಾವಳಿಗಳಲ್ಲಿ ಕ್ಯಾಪ್ಸುಲ್ ಧೂಳುಭರಿತ ಮೋಡದಲ್ಲಿ ಇಳಿಯುವುದನ್ನು ಕಾಣಬಹುದು. ಬಳಿಕ ಲ್ಯಾಂಡಿಂಗ್ ಸೈಟನ್ನು ತೆರವುಗೊಳಿಸಿದ  ಸಿಬ್ಬಂದಿ ಕ್ಯಾಪ್ಸುಲ್ ತಲುಪಲು ಹೆಲಿಕಾಪ್ಟರ್‌ಗಳಲ್ಲಿ ಧಾವಿಸಿದ್ದಾರೆ.  ಗಗನಯಾತ್ರಿಗಳು ತಾವು "ಸುರಕ್ಷಿತವಾಗಿದ್ದೇವೆ" ಎಂದು ವರದಿ ಮಾಡಿದ್ದು, ಇತರ ಸಿಬ್ಬಂದಿ ಶ್ಲಾಘಿಸಿದ್ದಾರೆ. 

ಈ ಮೂವರು ಮೂಲತಃ ಕಳೆದ ಅಕ್ಟೋಬರ್‌ನಲ್ಲಿ ವಾಯುವ್ಯ ಚೀನಾದ ಗೋಬಿ ಮರುಭೂಮಿಯಿಂದ ಶೆಂಝೌ-13 ರಲ್ಲಿ ಬಾಹ್ಯಾಕಾಶಕ್ಕೆ ತಮ್ಮ ಪ್ರಯಾಣ ಆರಂಭಿಸಿದ್ದರು. 2021-2022ರ ಅವಧಿಯಲ್ಲಿ ಯೋಜಿಸಲಾಗಿರುವ ನಾಲ್ಕು ಮಾನವ ಸಹಿತ ಕಾರ್ಯಾಚರಣೆಗಳಲ್ಲಿ ಇದು ಎರಡನೆಯದಾಗಿದೆ.  

ಚೀನಾದ ಮೊದಲ ಶಾಶ್ವತ ಬಾಹ್ಯಾಕಾಶ ನಿಲ್ದಾಣವನ್ನು ಜೋಡಿಸಲು ಇದರ ಉದ್ದೇಶವಾಗಿದೆ.  ಈ ಬಾಹ್ಯಾಕಾಶ ನಿಲ್ದಾಣವನ್ನು ಟಿಯಾಂಗಾಂಗ್ (Tiangong), ಅಂದರೆ "heavenly palace" (ಸ್ವರ್ಗದ ಅರಮನೆ) ಎಂದು ಚೀನಾ ಕರೆದಿದೆ.

ಮೂವರು ಗಗನಯಾತ್ರಿಗಳು:  ಕಳೆದ ನವೆಂಬರ್‌ನಲ್ಲಿ ವಾಂಗ್ ಯಾಪಿಂಗ್  ಮತ್ತು ಅವರ ಸಹೋದ್ಯೋಗಿ ಝೈ ಆರು ಗಂಟೆಗಳ ಅವಧಿಯಲ್ಲಿ ಬಾಹ್ಯಾಕಾಶ ನಿಲ್ದಾಣದ ಉಪಕರಣಗಳನ್ನು ಸ್ಥಾಪಿಸಿದ್ದಾರೆ. ಈ ಮೂಲಕ  ವಾಂಗ್ ಬಾಹ್ಯಾಕಾಶ ನಡಿಗೆ ಮಾಡಿದ ಮೊದಲ ಚೀನೀ ಮಹಿಳೆಯಾಗಿದ್ದಾರೆ. 

ಇದನ್ನೂ ಓದಿ: ಏಲಿಯನ್ಸ್ ಆಕರ್ಷಿಸಲು ಬಾಹ್ಯಾಕಾಶಕ್ಕೆ ಮಾನವರ ನಗ್ನ ಚಿತ್ರ: ನಾಸಾ ವಿಜ್ಞಾನಿಗಳ ಹೊಸ ಪ್ರಯೋಗ!

55 ವರ್ಷದ ಮಿಷನ್ ಕಮಾಂಡರ್ ಝೈ, , ಮಾಜಿ ಫೈಟರ್ ಪೈಲಟಾಗಿದ್ದು 2008 ರಲ್ಲಿ ಚೀನಾದ ಮೊದಲ ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸಿದ್ದರು. ಇನ್ನು ಮತ್ತೊಬ್ಬ ವಿಜ್ಞಾನಿ ಯೆ ಗುವಾಂಗ್‌ಫು ಪೀಪಲ್ಸ್ ಲಿಬರೇಶನ್ ಆರ್ಮಿ ಪೈಲಟಾಗಿದ್ದಾರೆ.

ಮೂವರೂ ಎರಡು ಬಾಹ್ಯಾಕಾಶ ನಡಿಗೆಗಳನ್ನು ಪೂರ್ಣಗೊಳಿಸಿದ್ದಾರೆ, ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ, ಕಕ್ಷೆಯಲ್ಲಿದ್ದ ಸಮಯದಲ್ಲಿ ಭವಿಷ್ಯದ ನಿರ್ಮಾಣಕ್ಕಾಗಿ ಉಪಕರಣಗಳನ್ನು ಸ್ಥಾಪಿಸಿದ್ದಾರೆ ಮತ್ತು ತಂತ್ರಜ್ಞಾನಗಳನ್ನು ಪರೀಕ್ಷಿಸಿದ್ದಾರೆ. 

ಗಗನಯಾತ್ರಿಗಳು ಕಳೆದ ಕೆಲವು ವಾರಗಳನ್ನು ಮುಂಬರುವ ತಿಂಗಳುಗಳಲ್ಲಿ ಉಡಾವಣೆಯಾಗಲಿರುವ ಶೆಂಝೌ-14 ರ ಸಿಬ್ಬಂದಿಗಾಗಿ ಕ್ಯಾಬಿನ್ ಸೌಲಭ್ಯಗಳು ಮತ್ತು ಸಲಕರಣೆಗಳನ್ನು ಸಿದ್ಧಪಡಿಸಿದ್ದಾರೆ.

ಚೀನಾದ ಹಿಂದಿನ ದಾಖಲೆಯ ಬಾಹ್ಯಾಕಾಶ ಮಿಷನ್  ಶೆಂಝೌ-12 ಮಿಷನ್  92 ದಿನಗಳ ಕಾಲ ನಡೆದಿತ್ತು. ರಾಜ್ಯ ಬ್ರಾಡ್‌ಕಾಸ್ಟರ್ ಸಿಸಿಟಿವಿ ಪ್ರಕಾರ, ಚೀನೀ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಸಾಮಾನ್ಯ ಗಗನಯಾತ್ರಿ ನಿವಾಸದ ಅವಧಿಯಾಗಿರಲಿದೆ. 

Latest Videos
Follow Us:
Download App:
  • android
  • ios