ಮೊದಲ ಬಾರಿ ಮಿಲ್ಕಿವೇ ಬ್ಲಾಕ್‌ಹೋಲ್ ಚಿತ್ರ ಬಿಡುಗಡೆ!

* ಮಿಲ್ಕಿವೇ ಗೆಲಾಕ್ಸಿ ಮಧ್ಯದ ಕಪ್ಪುಕುಳಿ ಚಿತ್ರ ಅನಾವರಣ

* ಸೂರ್ಯನಿಗಿಂತ 40 ಲಕ್ಷ ಪಟ್ಟು ದೊಡ್ಡದು

* ಕಪ್ಪುಕುಳಿಯನ್ನು ಸ್ಯಾಜಿಟೇರಿಯಸ್‌ ಎ* (ಎ-ಸ್ಟಾರ್‌) ಎಂದು ಹೆಸರಿಸಿದ ವಿಜ್ಞಾನಿಗಳು 

Scientists unveil first image of gentle giant black hole at Milky Way centre pod

ಬರ್ಲಿನ್‌(ಮೇ.13): ಖಗೋಳ ಶಾಸ್ತ್ರಜ್ಞರು ಗುರುವಾರ ಭೂಮಿಯಿರುವ ಆಕಾಶಗಂಗೆ ನಕ್ಷತ್ರಪುಂಜದ (ಮಿಲ್ಕಿ ವೇ ಗೆಲಾಕ್ಸಿ) ಮಧ್ಯಭಾಗದಲ್ಲಿರುವ ಬೃಹತ್‌ ಕಪ್ಪುಕುಳಿಯ ಚಿತ್ರವನ್ನು ಮೊಟ್ಟಮೊದಲ ಬಾರಿ ಅನಾವರಣಗೊಳಿಸಿದ್ದಾರೆ.

ಅಸ್ಟೊ್ರೕಫಿಸಿಕ್ಸ್‌ ಜರ್ನಲ್‌ನಲ್ಲಿ ಖಗೋಳ ಶಾಸ್ತ್ರಜ್ಞರು ತಮ್ಮ ಸಂಶೋಧನೆಯನ್ನು ಪ್ರಕಟಿಸಿದ್ದು, ಆಕಾಶಗಂಗೆಯ ಮಧ್ಯಭಾಗದಲ್ಲಿರುವ ಬೃಹತ್‌ ವಸ್ತುವು ಕಪ್ಪುಕುಳಿಯಾಗಿದೆ ಎಂದು ತಿಳಿಸಿದ್ದಾರೆ. ಈ ಕಪ್ಪುಕುಳಿಯನ್ನು ಸ್ಯಾಜಿಟೇರಿಯಸ್‌ ಎ* (ಎ-ಸ್ಟಾರ್‌) ಎಂದು ಹೆಸರಿಸಿದ ವಿಜ್ಞಾನಿಗಳು ಅದರ ಚಿತ್ರವನ್ನು ಕೂಡಾ ಅನಾವರಣಗೊಳಿಸಿದ್ದಾರೆ.

ಇದು ಸೂರ್ಯನಿಗಿಂತ ಗಾತ್ರದಲ್ಲಿ 40 ಲಕ್ಷ ಪಟ್ಟು ದೊಡ್ಡದಾಗಿದ್ದು, ಭೂಮಿಯಿಂದ 27000 ಬೆಳಕಿನ ವರ್ಷಗಳಷ್ಟುದೂರದಲ್ಲಿದೆ. ಈ ಸಂಶೋಧನೆಯ ಮೂಲಕ ನಮ್ಮ ನಕ್ಷತ್ರಪುಂಜದ ಕೇಂದ್ರಭಾಗದಲ್ಲಿ ಯಾವ ರೀತಿಯ ವಿದ್ಯಮಾನಗಳು ಜರುಗುತ್ತಿವೆ ಎಂಬುದನ್ನು ಅಧ್ಯಯನ ಮಾಡಲು ಸಹಾಯವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ

ಭಾರತದ ಟೆಲಿಸ್ಕೋಪ್‌ ಬಳಸಿ ಅತಿ ದೂರದ ನಕ್ಷತ್ರಪುಂಜ ಪತ್ತೆ

 

ಖಗೋಳಶಾಸ್ತ್ರಜ್ಞರು ಭಾರತದ ಟೆಲಿಸ್ಕೋಪ್‌ (ದೂರದರ್ಶಕ)ವನ್ನು ಬಳಸಿ ಅತೀ ಹೆಚ್ಚು ದೂರದಲ್ಲಿರುವ ಹಾಗೂ ಯಾರಿಗೂ ಗೊತ್ತಿರದ ರೇಡಿಯೋ ಗ್ಯಾಲೆಕ್ಸಿ (ನಕ್ಷತ್ರಪುಂಜ)ವೊಂದನ್ನು ಪತ್ತೆ ಮಾಡಿದ್ದಾರೆ. ಈ ನಕ್ಷತ್ರ ಸಮೂಹ 1200 ಕೋಟಿ ಜ್ಯೋತಿರ್ವರ್ಷಗಳಷ್ಟುದೂರದಲ್ಲಿದ್ದು, ಪುಣೆಯಲ್ಲಿರುವ ಜೈಂಟ್‌ ಮೀಟರ್‌- ವೇವ್‌ ರೇಡಿಯೋ ಟೆಲಿಸ್ಕೋಪ್‌ (ಜಿಎಮ್‌ಆರ್‌ಟಿ) ಬಳಸಿ ಶೋಧಿಸಲಾಗಿದೆ.

ಜಿಎಮ್‌ಆರ್‌ಟಿ ಎನ್ನುವುದು ಒಂದು 45 ಮೀಟರ್‌ ವ್ಯಾಸವಿರುವ ರೇಡಿಯೋ ಟೆಲಿಸ್ಕೋಪ್‌ ಆಗಿದೆ. ಹವಾಯಿಯಲ್ಲಿರುವ ಜೆಮಿನಿ ನಾಥ್‌ರ್‍ ಟೆಲಿಸ್ಕೋಪ್‌ ಬಳಸಿ ನಕ್ಷತ್ರಪುಂಜದ ದೂರವನ್ನು ಅಂದಾಜಿಸಲಾಗಿದೆ. ಈ ನಕ್ಷತ್ರಪುಂಜದ ಬೆಳಕು 1200 ಕೋಟಿ ವರ್ಷಗಳಷ್ಟುಹಳೆಯದು ಎಂದು ರಾಯಲ್‌ ಆಸ್ಟ್ರಾನಾಮಿಕಲ್‌ ಸೊಸೈಟಿ ಎಂಬ ನಿಯತ ಕಾಲಿಕೆಯಲ್ಲಿ ವರದಿ ಪ್ರಕಟಿಸಲಾಗಿದೆ.

Latest Videos
Follow Us:
Download App:
  • android
  • ios