Asianet Suvarna News Asianet Suvarna News

ಬೊಕ್ಕ ತಲೆಯವರಿಗೆ ಗುಡ್​​ ನ್ಯೂಸ್​: ಉದುರಿದ ಕೂದಲು ವಾಪಸ್​ ಬರತ್ತೆ! ಹೊಸ ಟ್ರೀಟ್​ಮೆಂಟ್ ಸಂಶೋಧನೆ

ಬೊಕ್ಕ ತಲೆಯಿಂದ ಬೇಸತ್ತವರಿಗೆ ಇದೀಗ ಗುಡ್​ ನ್ಯೂಸ್​ ಒಂದನ್ನು ನೀಡಲಾಗಿದೆ.  ಉದುರಿದ ಕೂದಲು ವಾಪಸ್​ ಬರುವ ಚಿಕಿತ್ಸೆ ಕಂಡುಹಿಡಿಯಲಾಗಿದೆ.  
 

Scientists discovered a  treatment involving regulatory T Cells that could regrow lost hair suc
Author
First Published Jun 25, 2024, 3:59 PM IST

 ಕೂದಲು ಉದುರುವುದು ಹೊಸ ವಿಷಯವೇನಲ್ಲ. 2-3 ತಲೆಮಾರಿನ ಹಿಂದಿನವರಿಗೆ ವಯಸ್ಸಾದ ಮೇಲೆ ಕೂದಲು ಉದುರುವುದು ಇಲ್ಲವೇ ಯಾವುದಾದರೂ ಕಾಯಿಲೆಗಳು ಬಂದರೆ ಕೂದಲು ಹೋಗುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಅತಿ ಚಿಕ್ಕ ವಯಸ್ಸಿನಲ್ಲಿಯೂ ಕೂದಲು ಉದರುವುದು ಮಾಮೂಲಾಗಿದೆ. ಅದರಲ್ಲಿಯೂ ಹುಡುಗರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಬಾಲ್ಡಿ ಆಗುತ್ತಿದ್ದಾರೆ. ನೆತ್ತಿಯ ಮೇಲಿನ ಕೂದಲು 30 ವಯಸ್ಸಿನ ಒಳಗೇ ಹೋಗುತ್ತಿದೆ. ಇಂದಿನ ಆಧುನಿಕ ಜೀವನ ಶೈಲಿ, ಅತಿಯಾದ ಒತ್ತಡ, ಪರಿಸರ ಮಾಲಿನ್ಯ, ಆಹಾರದಲ್ಲಿನ ಅಂಶ, ರಾಸಾಯನಿಕಗಳ ಬಳಕೆ, ಕೂದಲಿಗೆ ಹಾಕುವ ಡೈ... ಇವೆಲ್ಲವೂ ಇದಕ್ಕೆ ಕಾರಣವಾಗಿದೆ. ಅದರಲ್ಲಿಯೂ ಹೆಚ್ಚಾಗಿ ಬೊಕ್ಕ ತಲೆಗೆ ದೊಡ್ಡ ಕಾರಣ ಟೆನ್ಷನ್​ ಎಂದು ಇದಾಗಲೇ ಹಲವಾರು ಸಂಶೋಧನೆಗಳು ಹೇಳಿವೆ. ಟೆನ್ಷನ್​ ಇಲ್ಲದ ಜೀವನ ಈಗ ಇಲ್ಲವೇ ಇಲ್ಲ. ಬಾಲ್ಯದಿಂದಲೇ ಟೆನ್ಷನ್​ ಎನ್ನುವುದು ಈಗ ಮಾಮೂಲಾಗಿಬಿಟ್ಟಿದೆ. ಅದಕ್ಕಾಗಿಯೇ ಕೂದಲು ಉದುರುವುದು ಸಾಮಾನ್ಯವಾಗಿದೆ.

ಇದೇ ಕಾರಣಕ್ಕೆ ಬೊಕ್ಕ ತಲೆಯವರಿಗೆ ಚಿಕಿತ್ಸೆ ನೀಡುವ ಹಲವಾರು ವಿಧಾನಗಳು ಈಗ ಬಂದಿವೆ. ಅವುಗಳ ಸಾಮರ್ಥ್ಯ ಹಾಗೂ ಅವು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತವೆ, ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಅಪಾಯ ಒಡ್ಡುತ್ತವೆ ಎನ್ನುವುದು ಪ್ರಶ್ನಾರ್ಹವಾಗಿಯೇ ಉಳಿದಿವೆ. ಆದರೆ ಸ್ಮಾರ್ಟ್​ ಆಗಿ ಕಾಣುವುದಕ್ಕಾಗಿ ಕೂದಲಿನ ಬಗ್ಗೆ ಹೆಂಗಸರು ಮಾತ್ರವಲ್ಲದೇ ಪುರುಷರು ಅತಿಯಾದ ಕಾಳಜಿ ತೋರುವ ಕಾರಣದಿಂದಲೇ ಹಲವಾರು ವಿಧವಾದ ಚಿಕಿತ್ಸೆಗಳು ಬಂದಿವೆ. ಇನ್ನು ಹಲವರು ವಿಗ್​, ಟೋಪನ್​ ಮೊರೆ ಹೋಗುವುದೂ ಇದೆ. ಇದಕ್ಕಾಗಿ ಒಂದು ಮೊಟ್ಟೆಯ ಕಥೆ ಎನ್ನುವ ಸಿನಿಮಾ ಕೂಡ ಮಾಡಲಾಗಿತ್ತು. ಇದರಲ್ಲಿ  ಬೋಳು ತಲೆ ಸಮಸ್ಯೆಯಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ತೋರಿಸಲಾಗಿದೆ.  ಬೋಳು ತಲೆಯ ವ್ಯಕ್ತಿಯೊಬ್ಬ ಅಂದರೆ ಈ ಚಲನ ಚಿತ್ರದ ನಟ ಮದುವೆಯಾಗಲು ಪರದಾಡುವ ಕಥೆ ಇದರಲ್ಲಿದೆ.  

ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..

ಇಂಥವರಿಗೆ ಈಗ ಗುಡ್​​ ನ್ಯೂಸ್​. ಹೊಸ ಸಂಶೋಧನೆಯೊಂದನ್ನು ಮಾಡಿದ್ದಾರೆ  ವಿಜ್ಞಾನಿಗಳು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಉದುರಿ ಹೋಗಿರುವ ಕೂದಲನ್ನು ಮತ್ತೆ ಬೆಳೆಯುವಂತೆ ಮಾಡುವ ಸಂಶೋಧನೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಟಿ-ಸೆಲ್​ ಚಿಕಿತ್ಸೆ (T-Cell treatment) ಎಂದು ಹೆಸರು ಇಡಲಾಗಿದೆ. ಟಿ-ಕೋಶಗಳನ್ನು ಒಳಗೊಂಡಿರುವ ಅದ್ಭುತ ಚಿಕಿತ್ಸೆ ಇದು ಎಂದು ಸಂಶೋಧಕರು ಹೇಳಿದ್ದಾರೆ.  ವಾಸ್ತವವಾಗಿ ಕೂದಲಿನ ಕಿರುಚೀಲಗಳು ಸೇರಿದಂತೆ ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸಲು ಈ ಚಿಕಿತ್ಸೆಯಿಂದ ಸಾಧ್ಯ. ಇದರಿಂದಾಗಿ ಕೂದಲು ಮತ್ತೆ ವಾಪಸ್  ಬರುತ್ತದೆ ಎಂದು ಅವರು ಹೇಳಿದ್ದಾರೆ.  

ಹೊಸ ನಿಯಂತ್ರಕ ಟಿ-ಸೆಲ್ ಚಿಕಿತ್ಸೆಯು ಕೂದಲು ಕೋಶಕ ಪುನರುತ್ಪಾದನೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ, ಕಳೆದುಹೋದ ಕೂದಲನ್ನು ಮತ್ತೆ ಬೆಳೆಯಲು ಉದ್ದೇಶಿತ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಇದು ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಖುಷಿಯಿಂದ ಕುಣಿದಾಡಿದ್ದಾರೆ. ನಮಗೆ ಜೀವವೇ ಬಂದ ಹಾಗಾಗಿದೆ. ಕೊನೆಗೂ ಚಿಕಿತ್ಸೆ ಬಂದಿದೆ ಎನ್ನುತ್ತಿದ್ದಾರೆ. 

ಆರೋಗ್ಯಕರ ನೆಲ್ಲಿಕಾಯಿ ಜ್ಯೂಸ್​ ಮಾಡೋ ಸರಿ ವಿಧಾನ ಯಾವುದು? ಡಾ. ಪದ್ಮಿನಿ ಪ್ರಸಾದ್ ಮಾಡಿ ತೋರಿಸಿದ್ದಾರೆ ನೋಡಿ...

Latest Videos
Follow Us:
Download App:
  • android
  • ios