ಬೆಳೆಗೆ ನೀರು ಹರಿಸಲು ಸ್ವಯಂಚಾಲಿತ ಯಂತ್ರ!
ಕೃಷಿ ವಿವಿಯ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ಡಿ.ಸಿ.ಹನುಮಂತಪ್ಪ ಅವರು, ಸ್ವಯಂಚಾಲಿತ ನೀರಾವರಿ ವಿಧಾನವನ್ನು ಕಂಡುಹಿಡಿದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಸ್ವಯಂ ಚಾಲಿತ ನೀರಾವರಿ ವಿಧಾನದಿಂದ ಅದನ್ನು ಸಾಕಾರಗೊಳಿಸಲಾಗಿದೆ.
ಬೆಂಗಳೂರು [ಅ.23]: ಬಿತ್ತನೆಯಿಂದ ಕೊಯ್ಲಿನವರೆಗೂ ಕಾಲಕ್ಕೆ ತಕ್ಕಂತೆ ಬೆಳೆಗಳಿಗೆ ಎಷ್ಟುನೀರು ಒದಗಿಸಬೇಕು ಎಂಬುದನ್ನು ಮೊದಲೇ ನಿಗದಿಪಡಿಸುವ ನೂತನ ತಂತ್ರಜ್ಞಾನವನ್ನು ಬೆಂಗಳೂರು ಕೃಷಿ ವಿವಿ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ.
ಕೃಷಿ ವಿವಿಯ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ಡಿ.ಸಿ.ಹನುಮಂತಪ್ಪ ಅವರು, ಸ್ವಯಂಚಾಲಿತ ನೀರಾವರಿ ವಿಧಾನವನ್ನು ಕಂಡುಹಿಡಿದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಸ್ವಯಂ ಚಾಲಿತ ನೀರಾವರಿ ವಿಧಾನದಿಂದ ಅದನ್ನು ಸಾಕಾರಗೊಳಿಸಲಾಗಿದೆ. ಬೆಳೆ ಆರಂಭದಿಂದ ಪೂರ್ಣ ಫಸಲು ಬರುವವರೆಗೂ ಒಂದು ಬೆಳೆಗೆ ಅಗತ್ಯವೆಂದು ನಿಗದಿ ಮಾಡಲಾದ ನೀರು ಹರಿಸಿದ ನಂತರ ಮೋಟರ್‌ಗಳು ಸ್ವಯಂ ಚಾಲಿತವಾಗಿ ಸ್ಥಗಿತಗೊಳ್ಳುವ ತಂತ್ರಜ್ಞಾನ ಇದಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ವಯಂ ಚಾಲಿತ ನೀರಾವರಿ ವಿಧಾನದಲ್ಲಿ ಮೂರು ರೀತಿಯಲ್ಲಿ ನೀರು ಒದಗಿಸಬಹುದಾಗಿದೆ. 1.ಕಾಲಾಧಾರಿತ, 2. ಪ್ರಮಾಣಾಧಾರಿತ, 3.ಸೆನ್ಸರ್ ಆಧಾರಿತವಾಗಿ ನೀರು ಒದಗಿಸಬಹುದು. ಕಾಲಾಧಾರಿತವಾಗಿ ಬೆಳೆಗೆ ಯಾವ ಕಾಲಕ್ಕೆ ನೀರು ಬೇಕು ಎಂಬುದನ್ನು ಮೊದಲೇ ನಿಗದಿಪಡಿಸಬಹುದಾಗಿದೆ. ಪ್ರಮಾಣಾಧಾರಿತ ಎಂದರೆ ಬೆಳೆಗೆ ಎಷ್ಟುಪ್ರಮಾಣದಲ್ಲಿ ನೀರು ಬೇಕು ಎನ್ನುವುದನ್ನು ನಿಗದಿಪಡಿಸಬಹುದು. ಇನ್ನು ಸೆನ್ಸರ್ ಮಾದರಿಯಲ್ಲಿ ಬೆಳೆಯ ಬೇರು ಎಷ್ಟುಆಳವಾಗಿ ಇದೆ ಎಂಬುದನ್ನು ಗುರುತಿಸಿ ಒಂದು ಸೆನ್ಸರ್ ಯಂತ್ರವನ್ನು ಇಟ್ಟು ಪ್ರೋಗ್ರಾಂ ನಿಗದಿಪಡಿಸಲಾಗಿರುತ್ತದೆ. ಉದಾ: ಶೇ.100ರಷ್ಟುಇರುವ ತೇವಾಂಶ ಶೇ.50ಕ್ಕೆ ಇಳಿಯುತ್ತಿದ್ದಂತೆ ಸ್ವಯಂ ಚಾಲಿತವಾಗಿ ನೀರು ಒದಗಿಸುತ್ತದೆ.
1.20 ರು. ಲಕ್ಷ ವೆಚ್ಚ:
ಸ್ವಯಂ ಚಾಲಿತ ನೀರಾವರಿ ವಿಧಾನದಿಂದ ನೀರಿನ ಉಳಿತಾಯವಾಗುತ್ತದೆ. ಸಕಾಲದಲ್ಲಿ ನೀರು, ಗೊಬ್ಬರ, ಪೋಷಕಾಂಶಗಳನ್ನು ಕೊಡಬಹುದು. ಇದರಿಂದ ಪೋಷಕಾಂಶಗಳ ಸಾಮರ್ಥ್ಯ ಹೆಚ್ಚಿಸಬಹುದು. ಜತೆಗೆ ಶೇ.15ರಿಂದ 20ರಷ್ಟುಇಳುವರಿ ಹೆಚ್ಚಾಗಿರುವ ಉದಾಹರಣೆಯು ಇದೆ. ಒಂದು ಒಂದು ಹೆಕ್ಟೇರ್ ಪ್ರದೇಶಕ್ಕೆ ಈ ವ್ಯವಸ್ಥೆ ಅಳವಡಿಸಲು ಕೇವಲ 1.20 ಲಕ್ಷ ರು. ವೆಚ್ವವಾಗುತ್ತದೆ. ಮೊಬೈಲ್ ಸ್ವಯಂ ಚಾಲಿತ ನೀರಾವರಿ ಯಂತ್ರಗಳಿಗೆ ಕಂಪ್ಯೂಟರ್ ಅಥವಾ ಮೊಬೈಲ್‌ನಿಂದಲೂ ನೀರಿನ ಪ್ರಮಾಣ, ಕಾಲವನ್ನು ನಿಗದಿಪಡಿಸಬಹುದು ಎಂದು ಬೇಸಾಯಶಾಸ್ತ್ರದ ವಿಜ್ಞಾನಿ ಡಾ.ಹನುಮಂತಪ್ಪ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಡಾ.ಡಿ.ಸಿ.ಹನುಮಂತಪ್ಪ, ವಿಜ್ಞಾನಿ, ಬೇಸಾಯಶಾಸ್ತ್ರ, ಬೆಂಗಳೂರು ಕೃಷಿ ವಿವಿ. ಮೊಬೈಲ್: 9880019697 ಸಂಪರ್ಕಿಸಬಹುದು