* ಮಂಗಳ ಗ್ರಹಕ್ಕೆ ಸಂಬಂಧಿಸಿದ ಅಪರೂಪದ ಫೋಟೋ* ನಾಸಾ​ದಿಂದ ಮಂಗ​ಳನ ಅಪ​ರೂದ ಫೋಟೋ ಬಿಡು​ಗ​ಡೆ

ನ್ಯೂಯಾರ್ಕ್(ಸೆ.07): ಮಂಗಳ ಗ್ರಹಕ್ಕೆ ಸಂಬಂಧಿಸಿದ ಅಪರೂಪದ ಫೋಟೋಗಳನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ.

ನಾಸಾ ಸಂಸ್ಥೆ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಸೌಂದರ್ಯ ಸರ್ವವ್ಯಾಪಿ ಎಂಬ ಶೀರ್ಷಿಕೆಯಡಿ ಮಂಗಳ ಗ್ರಹದ ಮೇಲ್ಮೈ ಫೋಟೋಗಳನ್ನು ಹಂಚಿಕೊಂಡಿದೆ. ಅಲ್ಲದೆ ಮಂಗಳನ ಮೇಲ್ಮೈನಲ್ಲಿ ನೀರು ಮತ್ತು ಲಾವಾರಸ ತಮ್ಮ ಗುರುತನ್ನು ಬಿಟ್ಟಿವೆ.ಬಲ ಗಾಳಿಗೆ ಮಂಗಳನ ಮೇಲೆ ಸವೆತವಾದಂತೆ ಕಂಡುಬಂದಿದೆ.

View post on Instagram

ಮಂಗಳನಲ್ಲೇ ಇರುವ ಆರ್ಬಿಟರ್‌ ಕ್ಯಾಮೆರಾದಿಂದ ಸೆರೆಹಿಡಿಯಲಾಗಿರುವ ಈ ಫೋಟೋದಲ್ಲಿ ಕಾಣುವ ಗೆರೆಗಳು ಮತ್ತು ಬಣ್ಣಗಳು ಅಮೂರ್ತ ಚಿತ್ರಕಲೆಯನ್ನು ನೆನಪಿಸುತ್ತವೆ ಎಂದು ನಾಸಾ ಈ ಫೋಟೋಗಳಿಗೆ ವಿವರಣೆ ನೀಡಿದೆ. ಈ ಫೋಟೋಗಳಿಗೆ ಜನರು ಅದ್ಭುತ, ಸುಂದರ ಎಂದೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.