Asianet Suvarna News Asianet Suvarna News

Watch: ಶನಿಗ್ರಹದ ಚಂದ್ರನ ಮೇಲೆ ಹಾವಿನ ರೀತಿಯ ರೋಬೋಟ್‌ ಕಳಿಸಲಿರುವ ನಾಸಾ!


ನಮ್ಮ ಸೌರಮಂಡಲದಲ್ಲಿ ಮನುಷ್ಯ ವಾಸಿಸಲು ಯೋಗ್ಯವಾಗಿರುವ ಇನ್ನೊಂದು ಗ್ರಹದ ಹುಡುಕಾಟದಲ್ಲಿರುವ ನಾಸಾ, ಈಗ ಶನಿಗ್ರಹದ ಚಂದ್ರನ ಮೇಲೆ ಹಾವಿನ ರೀತಿಯ ರೋಬೋಟ್‌ ಕಳಿಸಲು ಸಿದ್ಧತೆ ನಡೆಸಿದೆ.

Nasa EELS Project snake robot could hunt alien life on icy moons like Saturns Enceladus san
Author
First Published Sep 11, 2023, 7:57 PM IST

ಬೆಂಗಳೂರು (ಸೆ.11): ಪ್ಲೇನ್‌ಗಳಲ್ಲಿ ಹಾವುಗಳು ಕಾಣಿಸೋದು ಬಿಡಿ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಭೂಮಿಯ ಹೊರತಾದ ಇತರ ಗ್ರಹಗಳಲ್ಲಿ ಮಾನವಯೋಗ್ಯ ವಾತಾವರಣ ಇರುವುದನ್ನು ಪತ್ತೆ ಮಾಡುವ ಸಲುವಾಗಿ ಹಾವುಗಳನ್ನು ಕಳಿಸಿಕೊಡುತ್ತಿದೆ. ಹಾಗಂತ ಇವು ನಿಜವಾದ ಹಾವುಗಳಲ್ಲಿ ಬದಲಿಗೆ ರೋಬೋಟ್‌ ಹಾವುಗಳು. ಹಾವುಗಳು ಹೇಗೆ ಹರಿಯುತ್ತಾ ಮುಂದೆ ಸಾಗುತ್ತದೆಯೋ ಈ ಸ್ನೇಕ್‌ ರೋಬೋಡ್‌ ಕೂಡ ಅದೇ ರೀತಿಯಲ್ಲಿ ಮುಂದೆ ಸಾಗುತ್ತದೆ. ಈ ಸ್ನೇಕ್‌ ರೋಬೋಟ್‌ ನಿರ್ಮಾಣ ಮಾಡಿರುವ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ತಂಡದ ಸದಸ್ಯರ ಪ್ರಕಾರ, ಇದರ ಮೊದಲ ಉದ್ದೇಶ  ಶನಿಗ್ರಹದಲ್ಲಿ ಚಂದ್ರವಾದ ಎನ್ಸೆಲಾಡಸ್‌ನಲ್ಲಿ ಮಾನವನು ಬದುಕಲು ಸಾಧ್ಯವಾಗಿರುವಂಥ ವಾತಾವರಣ ಇದೆಯೇ ಎಂದು ಪತ್ತೆ ಮಾಡುವುದು. ಎನ್ಸೆಲಾಡಸ್‌ ಬರೀ ಶನಿಗ್ರಹದ ಚಂದ್ರನಲ್ಲ. ಭೂಮಿ ಹಾಗೂ ಚಂದ್ರನಿಂಗ ಪುಟ್ಟದಾಗಿರುವ ಗ್ರಹ. ಹಿಮಾವೃತವಾಗಿರುವ ಇದರ ಮೇಲ್ಮೈಅನ್ನು ಸ್ನೇಕ್‌ ರೋಬೋಟ್‌ ಕಳಿಸಿ ಸಂಶೋಧನೆ ಮಾಡಲಾಗುತ್ತದೆ. ತಮ್ಮ ಹಿಮಾವೃತ ಹೊರಪದರದ ಮೂಲಕ ಎನ್ಸೆಲಾಡಾಸ್‌ ನೀರನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿತ್ತು. ಸೌರಮಂಡಲದಲ್ಲಿ ಚಂದ್ರನ ಹೊರತಾಗಿ ಮಾನವ ಬದುಕಲು ಸಾಧ್ಯವಾಗಬಹುದಾದ ಇನ್ನೊಂದು ಆಕಾಶಕಾಯ ಇದಾಗಿದೆ.

ಹಿಮದಿಂದಾಗಿ ಸಂಪೂರ್ಣ ಸುಕ್ಕುಗಟ್ಟಿರುವ ಎನ್ಸೆಲಾಡನ್‌ನ ಮೇಲ್ಮೈಯನ್ನು ನ್ಯಾವಿಗೇಟ್ ಮಾಡಲು, ಎಕ್ಸೋಬಯಾಲಜಿ ಎಕ್ಸ್‌ಟಾಂಟ್ ಲೈಫ್ ಸರ್ವೇಯರ್ (EELS) ರೋಬೋಟ್‌ಅನ್ನು ಬಳಸಿಕೊಳ್ಳಲಾಗುತ್ತದೆ. ಹಾವು ಹೇಗೆ ಅತ್ತಿಂದಿತ್ತ ಹರಿದಾಡುತ್ತದೆಯೋ ಅದೇ ರೀತಿಯಲ್ಲಿ ಸಾಕಷ್ಟು ತಿರುಗುವ ವಸ್ತುಗಳನ್ನು ಇದಕ್ಕೆ ಸರಣಿಯಲ್ಲಿ ಜೋಡಿಸಲಾಗಿದೆ. ಇದರಿಂದಾಗಿ ಈ ರೋಬೋಟ್‌ ಹಾವಿನ ರೀತಿ ತಿರುಚಿಕೊಳ್ಳಲು, ಬಾಗಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಇರುವ ಲ್ಯಾಂಡರ್‌ ರೋಬೋಟ್‌ಗಳಿಂದ ಎನ್ಸೆಲಾಡಾಸ್‌ನಲ್ಲಿ ಗ್ರಹದಲ್ಲಿ ಸಂಶೋಧನೆ ಕಷ್ಟವಾಗುತ್ತದೆ.

ಜೆಪಿಎಲ್‌ ತಂಡವು ಇಇಎಲ್‌ಎಸ್‌ ಪ್ರಾಜೆಕ್ಟ್‌ನಲ್ಲಿ ವೇಗವಾಗಿ ಚಲಿಸಲು "ಸ್ಟಾರ್ಟ್‌ಅಪ್" ಮನಸ್ಥಿತಿಯನ್ನು ಬಳಸುತ್ತಿದೆ, ಇದು ಆರಂಭಿಕ ಹಂತಗಳಲ್ಲಿದೆ ಮತ್ತು ಈವರೆಗೂ ಈ ಪ್ರಾಜೆಕ್ಟ್‌ಗೆ ಅಮೆರಿಕ ಸರ್ಕಾರದ ನಿಧಿ ಸಿಕ್ಕಿಲ್ಲ. ಇತ್ತೀಚೆಗೆ ಜೆಪಿಎಲ್‌ ತನ್ನ ವೆಬ್‌ಸೈಟ್‌ನಲ್ಲಿ ಸ್ನೇಕ್‌ ರೋಬೋಟ್‌ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರಿಸುವ ವಿಡಿಯೋ ಪೋಸ್ಟ್‌ ಮಾಡಿದೆ.

ಶಿವಶಕ್ತಿ ಸ್ಥಳದಲ್ಲಿ ನಿಂತ ವಿಕ್ರಮ್‌ ಲ್ಯಾಂಡರ್‌ನ ಚಿತ್ರ ಸೆರೆಹಿಡಿದ ನಾಸಾ ಎಲ್‌ಆರ್‌ಓ

ಇಇಎಲ್‌ಎಸ್‌ನಲ್ಲಿ ತಿರುಗುವ ವಿಭಾಗಗಳನ್ನು ಸ್ಕ್ರೂ ಥ್ರೆಡ್‌ಗಳಲ್ಲಿ ಸುತ್ತಿಡಲಾಗುತ್ತದೆ, ಇದು ವಿವಿಧ ಮೇಲ್ಮೈಗಳ ಮೇಲೆ ತನ್ನನ್ನು ತಾನೇ ಮುಂದೂಡಲು ಬಳಸುತ್ತದೆ. ಆ ಭಾಗಗಳನ್ನು ಸ್ವತಂತ್ರವಾಗಿ ಚಲಿಸುವ ಇಇಎಲ್‌ಎಸ್‌ನ ಹಾವಿನಂತಹ ಸಾಮರ್ಥ್ಯವು ರೋಬೋಟ್‌ಗೆ ಬಿಗಿಯಾದ ಸ್ಥಳಗಳ ಮಿತಿಗಳ ವಿರುದ್ಧ ಒತ್ತಡವನ್ನು ಹೇರಲು ಅನುಮತಿಸುತ್ತದೆ, ಸಾಂಪ್ರದಾಯಿಕ ಉಪಕರಣಗಳು ತಲುಪಲು ಅಸಮರ್ಥವಾಗಿರುವ ಪ್ರದೇಶಗಳನ್ನು ಏರಲು ಅಥವಾ ಇಳಿಯಲು ಇದರಿಂದ ಸಹಾಯವಾಗುತ್ತದೆ.

ನಾಸಾ ಪಾರ್ಕರ್‌ ಸೋಲಾರ್‌ ಪ್ರೋಬ್‌ಗೂ ಇಸ್ರೋ ಆದಿತ್ಯ ಎಲ್‌ - 1 ಮಿಷನ್‌ಗೂ ವ್ಯತ್ಯಾಸವೇನು? ಇಲ್ಲಿದೆ ವಿವರ..

ಉಳಿದ ರೋಬೋಟ್‌ಗಳು ಹೋಗಲು ಸಾಧ್ಯವಾಗದಂಥ ಕಣಿವೆಗಳಲ್ಲಿ ಈ ರೋಬಾಟ್‌ ಹೋಗಬಹುದು ಎಂದು ಇಇಎಲ್‌ಎಸ್‌ ಪ್ರಾಜೆಕ್ಟ್‌ ಮ್ಯಾನೇಜರ್‌ ಮ್ಯಾಥ್ಯೂ ರಾಬಿನ್ಸನ್‌ ಹೇಳಿದ್ದಾರೆ. ಎಲ್ಲಾ ಮಾದರಿಯ ಮೇಲ್ಮೈಗಳಲ್ಲಿ ಈ ರೋಬೋಟ್‌ಗಳು ಕೆಲಸ ಮಾಡುತ್ತವೆ ಎಂದಿದ್ದಾರೆ. ಇಇಎಲ್‌ಎಸ್‌ ವಿವಿಧ ಪರಿಸರಗಳನ್ನು ವಿಶ್ಲೇಷಿಸಲು ಮತ್ತು ಸಂಚರಿಸಲು ಸಹಾಯ ಮಾಡಲು ರೋಬೋಟ್‌ನ ತಲೆಯ ಭಾಗದಲ್ಲಿ ಕ್ಯಾಮೆರಾಗಳು ಮತ್ತು ಲಿಡಾರ್ ಅನ್ನು ಹೊಂದಿರುತ್ತದೆ, ಅದರ ಭಾಗವು ಅದರ ಸುತ್ತಮುತ್ತಲಿನ 3ಡಿ ನಕ್ಷೆಗಳನ್ನು ರಚಿಸುತ್ತದೆ.

 

Follow Us:
Download App:
  • android
  • ios