ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು? ಈ ಕ್ಷುದ್ರಗ್ರಹಗಳ ವೇಗ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಈ ಕುರಿತು ವಿಜ್ಞಾನಿಗಳು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ.

ವಾಶಿಂಗ್ಟನ್ ಡಿಸಿ ( ಡಿ.18) ನಾಸಾ ವಿಜ್ಞಾನಿಗಳು ಮಹತ್ವದ ಅಲರ್ಟ್ ನೀಡಿದ್ದಾರೆ. ಡಿಸೆಂಬರ್ 18 ರಿಂದ ಡಿಸೆಂಬರ್ 20ರ ಒಳಗೆ ಅಂದರೆ ಮುಂದಿನ 72 ಗಂಟೆಗಳಲ್ಲಿ 10 ಕ್ಷುದ್ರಗ್ರಹಗಳು ಭೂಮಿಯತ್ತ ಧಾವಿಸುತ್ತಿದೆ. ಇದರ ವೇಗೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಈಗಾಗಲೇ ಪ್ರತಿ ಸೆಕೆಂಡ್‌ಗೆ 6 ಕಿಲೋಮೀಟರ್ ಇದ್ದ ಕ್ಷುದ್ರಗ್ರಹದ ವೇಗ ಇದೀಗ 16 ಕಿಲೋಮೀಟರ್‌ಗೆ ಏರಿಕೆಯಾಗಿದೆ. ದೊಡ್ಡ ಗಾತ್ರದ 10 ಕ್ಷುದ್ರಗ್ರಹಳು ಧಾವಿಸುತ್ತಿದೆ. ಆದರೆ ಈ ಕ್ಷುದ್ರಗ್ರಹಗಳು ಭೂಮಿ ಹತ್ತರದಿಂದ ಹಾದು ಹೋಗಲಿದೆ. ಹೀಗಾಗಿ ಭೂಮಿಗೆ ಹೆಚ್ಚಿನ ಅಪಾಯವಿಲ್ಲ ಎಂದು ನಾಸಾದ CNEOS ವಿಭಾಗ ಹೇಳಿದೆ.

10 ಕ್ಷುದ್ರಗ್ರಹಗಳ ಮೇಲೆ ಹದ್ದಿನ ಕಣ್ಣಿಟ್ಟ ವಿಜ್ಞಾನಿಗಳು

ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹಳ ಮೇಲೆ ನಾಸಾದ CNEOS ವಿಜ್ಞಾನಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ನಿರಂತರವಾಗಿ ಈ ಕ್ಷುದ್ರಗ್ರಹಗಳ ಚಲನೆ, ವೇಗವನ್ನು ಪರೀಕ್ಷಿಸಲಾಗುತ್ತಿದೆ. ಡಿಸೆಂಬರ್ 18ರ ರಾತ್ರಿ (ಭಾರತೀಯ ಕಾಲಮಾನ)ದಲ್ಲಿ 2015 XX168 ಒಂದು ಕ್ಷುದ್ರಗ್ರಹ ಭೂಮಿಯಿಂದ 0.01546 ಅಸ್ಟೋನಾಮಿಕಲ್ ಯುನಿಟ್ಸ್ ( 2.3 ಮಿಲಿಯನ್ ಕಿಲೋಮೀಟರ್)ದೂರದಿಂದ ಹಾದು ಹೋಗಲಿದೆ.

2025 XV ದೊಡ್ಡ ಕ್ಷುದ್ರಗ್ರಹ

ಭೂಮಿಯತ್ತ ಧಾವಿಸುತ್ತಿರುವ 10 ಕ್ಷುದ್ರಗ್ರಹಳು ಬೇರೆ ಬೇರೆ ಗಾತ್ರದಲ್ಲಿದೆ. ಈ ಪೈಕಿ 2025 XV ದೊಡ್ಡ ಗಾತ್ರದ ಕ್ಷುದ್ರಗ್ರಹವಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಇದು 70 ರಿಂದ 160 ಮೀಟರ್ ಗಾತ್ರ ಹೊಂದಿದೆ. ಇನ್ನು ಈ ಪೈಕಿ ಅತೀ ಸಣ್ಣ ಅಂದರೆ 7 ಮೀಟರ್ ಗಾತ್ರದ 2025 XT4 ಕೂಡ ಭೂಮಿಯ ಹತ್ತಿರದಿಂದ ಹಾದು ಹೋಗಲಿದೆ ಎಂದಿದ್ದಾರೆ.

ಬಾಹ್ಯಾಕಾಶದಲ್ಲಿ ಈ ರೀತಿ ಘಟನೆಗಳು ಹೊಸದೇನಲ್ಲ. ಕ್ಷುದ್ರಗ್ರಹಗಳು ಭೂಮಿ ಸಮೀಪದಿಂದ ಹಾದು ಹೋದ ಹಲವು ಉದಾಹರಣೆಗಳಿವೆ. ಕ್ಷುದ್ರ ಗ್ರಹಗಳು ಚಲಿಸುವ ವೇಗ, ಭೂಮಿಯಿಂದ ಎಷ್ಟು ದೂರದಿಂದ ಹಾದು ಹೋಗಲಿದೆ ಅನ್ನೋ ಮಾಹಿತಿ ಸೇರಿದಂತೆ ಎಲ್ಲವನ್ನೂ ವಿಜ್ಞಾನಿಗಳು ಮೊದಲೇ ಗುರುತಿಸುತ್ತಾರೆ. ಇವುಗಳ ಚಲನೆ ಸೇರಿದಂತೆ ಪ್ರತಿ ಸೆಕೆಂಡ್‌ಗಳನ್ನು ನಿಖರವಾಗಿ ವಿಜ್ಞಾನಿಗಳು ಮೊದಲೇ ತಿಳಿಸುತ್ತಾರೆ. ಈ ಪೈಕಿ ಕೇವಲ ಭೂಮಿಗೆ ಅಪ್ಪಳಿಸುವಂತಿದ್ದರೆ ಮಾತ್ರ ಆತಂಕದ ಪರಿಸ್ಥಿತಿ ಎದರಾಗಲಿದೆ. ಆದರೆ ಇಂತಹ ಘಟನೆಗಳು ವಿರಳ. ಇದು ವಿನಾಶಕ್ಕೂ ಕಾರಣವಾಗಲಿದೆ.

ನಾಸಾ ವಿಜ್ಞಾನಿಗಳ ಪ್ರಕಾರ ಸದ್ಯ 10 ಕ್ಷುದ್ರಗ್ರಹಗಳಿಂದ ಭೂಮಿಗೆ ಯಾವುದೇ ಆತಂಕವಿಲ್ಲ. ಭೂಮಿ ಹತ್ತಿರದಿಂದ ಈ ಗ್ರಹಗಳು ಹಾದು ಹೋಗುತ್ತಿದೆ. ಇದರ ಯಾವುದೇ ಪರಿಣಾಮ ಭೂಮಿಯ ಮೇಲೆ ಆಗುವುದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.