ಚಂದ್ರಲೋಕಕ್ಕೆ ಕಾಲಿಟ್ಟು 50 ವರ್ಷ; ಚಂದ್ರಯಾನದ ಸಮಗ್ರ ವಿವರ ಇಲ್ಲಿದೆ
ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಮಾನವ ಕಾಲಿಟ್ಟು ಜುಲೈ 20 ಕ್ಕೆ 50 ವರ್ಷ ಸಂದಿದೆ. 1929 ರಲ್ಲ ಅಮೆರಿಕದ ಬಾಹ್ಯಾಕಾಶ
ಸಂಸ್ಥೆ ನಾಸಾ ‘ಅಪೋಲೋ-11’ ನೌಕೆ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗು ಮಾಡಿತು.
ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಮಾನವ ಕಾಲಿಟ್ಟು ಜುಲೈ 20 ಕ್ಕೆ 50 ವರ್ಷ ಸಂದಿದೆ. 1969 ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ‘ಅಪೋಲೋ-11’ ನೌಕೆ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗು ಮಾಡಿತ್ತು.
ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್, ಬುಝ್ ಆಲ್ಡ್ರಿನ್ ಮತ್ತು ಮೈಕಲ್ ಕಾಲಿನ್ಸ್ ಚಂದ್ರನ ಮೇಲೆ ಇಳಿದು, ಮಣ್ಣಿನ ಮಾದರಿ ಸಂಗ್ರಹಿಸಿ ಜುಲೈ 21 ರಂದು ಹಿಂದಿರುಗಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಮಾನವ ಸಹಿತ ಚಂದ್ರಯಾನ ಹೇಗಿತ್ತು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಹೀಗಿತ್ತು ಮಾನವ ಸಹಿತ ಚಂದ್ರಯಾನ
ಎಲ್ಲಾ ವಿಘ್ನಗಳನ್ನು ಮೀರಿ ಜುಲೈ 15 ರಂದು ಅಮೆರಿಕ ಮಾನವ ಸಹಿತ ಚಂದ್ರಯಾನಕ್ಕೆ ಸಿದ್ಧವಾಯಿತು. ಮೂವರು ಮಾನವರನ್ನು ಹೊತ್ತ ಸ್ಯಾಟರ್ನ್ ವಿ ರಾಕೆಟನ್ನು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಮೂಲಕ ಜುಲೈ 16, 1929ರಂದು ಉಡಾವಣೆ ಮಾಡಲಾಯಿತು. ಅದು ಜುಲೈ 20 ರಂದು ಅಂದರೆ ಭೂಮಿಯಿಂದ ಹೊರಟು ಸುಮಾರು 110 ಗಂಟೆಗಳ ನಂತರ ಚಂದ್ರನ ಕಕ್ಷೆ ತಲುಪಿತು.
ಮೊಟ್ಟ ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟ ನೀಲ್ ಆಮ್ ರ್ಸ್ಟ್ರಾಂಗ್ ‘ಒಬ್ಬ ಮನುಷ್ಯನಿಗೆ ಅದೊಂದು ಪುಟ್ಟ ಹೆಜ್ಜೆ. ಆದರೆ ಮಾನವ ಕುಲಕ್ಕೆ ಅದೊಂದು ದೈತ್ಯ ಹೆಜ್ಜೆ’ ಎಂದಿದ್ದು ಭೂಮಿಯ ಟಿವಿಗಳಲ್ಲಿ ಪ್ರಸಾರವಾಗಿತ್ತು. ಅವರು ಕಾಲಿಟ್ಟ 20 ನಿಮಿಷದ ನಂತರ ಬುಝ್ ಅಲ್ಡ್ರಿನ್ ಚಂದ್ರನಲ್ಲಿ ಪಾದಾರ್ಪಣೆ ಮಾಡಿದರು. ಮೈಕಲ್ ಕಾಲಿನ್ಸ್ ಮಾಡ್ಯೂಲ್ ಪೈಲಟ್ ಆಗಿದ್ದರಿಂದ ಅವರು ಚಂದ್ರನ ಮೇಲೆ ನಡೆದಾಡಲು ಸಾಧ್ಯವಾಗಲಿಲ್ಲ.
ಚಂದ್ರಯಾನ ಮಾಡಿದ ಮೂವರಲ್ಲಿ ಇಬ್ಬರು ಲೂನಾರ್ ಮಾಡ್ಯೂಲ್‌ನಿಂದ ಆಚೆ ಬಂದು, ಚಂದ್ರನ ಮೇಲೆ 21 ಗಂಟೆ 36 ನಿಮಿಷ ಕಾಲ ಕಳೆದರು. ಈ ವೇಳೆ ಚಂದ್ರ ಮೇಲ್ಮೈನಲ್ಲಿ ಲಭ್ಯವಿರುವ ಮಣ್ಣು ಮತ್ತು ಧೂಲಿನ ಮಾದರಿ ಪಡೆದಿದ್ದರು. ಅದು ಮುಂದೆ ಹಲವು ವೈಜ್ಞಾನಿಕ ಅನ್ವೇಷಣೆಗಳಿಗೆ ಕಾರಣೀಭೂತವಾಯಿತು. ಬಳಿಕ ಜುಲೈ 21 ರಂದು ಸರ್ವೀಸ್ ಮಾಡ್ಯೂಲ್ ಮತ್ತು ಲೂನಾರ್ ಮಾಡ್ಯೂಲ್ ಸಹಾಯದಿಂದ ಭೂಮಿಗೆ ಹಿಂದಿರುಗಿದರು. ಅದು ಜುಲೈ 24 ರಂದು ಪೆಸಿಫಿಕ್ ಸಮುದ್ರಕ್ಕೆ ಬಂದು ಬಿತ್ತು. ಅಮೆರಿಕದ ಈ ಅಭೂತಪೂರ್ವ ಸಾಹಸವನ್ನು ಸುಮಾರು 65 ಕೋಟಿ ಜನರು ಕಣ್ತುಂಬಿಕೊಂಡಿದ್ದರು.
ಚಂದ್ರನ ಮೇಲೆ ಅಮೆರಿಕ ಮಾನವರನ್ನು ಇಳಿಸಿದ್ದೇಕೆ?
1957 ರಲ್ಲಿ ಸೋವಿಯತ್ ರಷ್ಯಾ ‘ಸ್ಪುಟ್ನಿಕ್’ ಎಂಬ ಭೂಮಿಯ ಮೊದಲ ಕೃತಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಅನಂತರ 1961 ರಲ್ಲಿ ರಷ್ಯಾದ ಯೂರಿ ಗಗಾರಿನ್ ಗಗನನೌಕೆಯಲ್ಲಿ ಕುಳಿತು ಬಾಹ್ಯಾಕಾಶ ಯಾನ ಕೈಗೊಂಡರು. ಆ ವೇಳೆಗಾಗಲೇ ರಷ್ಯಾ ಮತ್ತು ಅಮೆರಿಕ ನಡುವೆ ಶೀತಲ ಸಮರ ನಡೆಯುತ್ತಿದ್ದ ಕಾರಣ ಎರಡೂ ದೇಶಗಳು ಶಸ್ತ್ರಾಸ್ತ್ರ ಪೈಪೋಟಿಯ ಜೊತೆಗೆ ಬಾಹ್ಯಾಕಾಶ ಸಾಧನೆ ವಿಷಯದಲ್ಲೂ ಪೈಪೋಟಿ ಆರಂಭಿಸಿದವು. ಇದೇ ಕಾರಣಕ್ಕೆ 1962 ರಲ್ಲಿ ಮೊದಲಬಾರಿಗೆ ‘ಚಂದ್ರನಲ್ಲಿಗೆ ಹೋಗುತ್ತಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷರಾಗಿದ್ದ ಕೆನಡಿ ಘೋಷಿಸಿದರು.
17 ಸೆ. ಇಂಧನ ಮಾತ್ರ ಉಳಿದಿತ್ತು!
ಡಿಅಪೋಲೋ-11 ರ ಚಂದ್ರಯಾನ ವು ಕೂದಲೆಳೆಯ ಅಂತರದಲ್ಲಿ ಯಶಸ್ವಿಯಾಗಿತ್ತು. ಹೌದು ಲೂನಾರ್ ಮಾಡ್ಯೂಲ್ ಚಂದ್ರನ ಕಕ್ಷೆಯಲ್ಲಿ ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಹಿಂದೆ ಸಂವಹನ ಕಳೆದುಕೊಂಡಿತ್ತು. ಅದು ಚಂದ್ರನ ಮೇಲೆ ಲ್ಯಾಂಡ್ ಆದ ಬಳಿಕ ಅದ ರಲ್ಲಿ ಇನ್ನು ಕೇವಲ 17 ಸೆಕೆಂಡ್‌ಗಳಿಗೆ ಬೇಕಾಗುವಷ್ಟು ಇಂಧನ ಮಾತ್ರ ಉಳಿದಿತ್ತು. 17 ಸೆಕೆಂಟ್ ತಡವಾ ಗಿದ್ದರೆ, ಇದೂ ವಿಫಲವಾಗುತ್ತಿತ್ತು.
2800 ಟನ್ ತೂಕದ ರಾಕೆಟ್
ಅಮೆರಿಕ ತನ್ನ ಮೊದಲ ಮಾನವ ಸಹಿತ ಚಂದ್ರಯಾನಕ್ಕೆ ಬಳಸಿಕೊಂಡ ರಾಕೆಟ್ ಸ್ಯಾಟರ್ನ್ 5. ನೇರವಾಗಿ ನಿಲ್ಲಿಸಿದಾಗ ಸುಮಾರು 100 ಮೀ. ಉದ್ದವಿರುವ ರಾಕೆಟ್, ಚಂದ್ರಯಾನದ ವೇಳೆ 20 ಟನ್ ಇಂಧನವನ್ನು ದಹಿಸಿತ್ತು. ಇದರ ಒಟ್ಟು ತೂಕ 2800 ಟನ್. ವಿಶೇಷ ಎಂದರೆ ಎಂದರೆ ಸ್ಯಾಟರ್ನ್ ರಾಕೆಟ್ ಅತ್ಯಂತ ಶಕ್ತಿಶಾಲಿಯಾಗಿದ್ದು, ಈವರೆಗೂ ಅದನ್ನು ಮೀರಿಸುವ ಮತ್ತೊಂ ದು ರಾಕೆಟ್ ಆವಿಷ್ಕಾರವಾಗಿಲ್ಲ .
ಚಂದ್ರನಲ್ಲಿ ಕಾಲಿಟ್ಟ ಅಪೋಲೋ-11
ಇದು ಅಪೋಲೋ ಯೋಜನೆಯ ೫ ನೇ ಮಿಷನ್. ಈ ಗಗನ ನೌಕೆಯನ್ನು ೩ ಭಾಗವಾಗಿ ರೂಪಿಸಲಾಗಿತ್ತು. ಗಗನಯಾತ್ರಿಗಳ ಪ್ರಯಾಣಕ್ಕೆ ಕ್ಯಾಬಿನ್ ಇರುವ ಕಮಾಂಡ್ ಮಾಡ್ಯೂಲ್, ಸರ್ವೀಸ್ ಮಾಡ್ಯೂಲ್ ಮತ್ತು ಚಂದ್ರನಲ್ಲಿ ಲ್ಯಾಂಡ್ ಆಗಲು ಲೂನಾರ್ ಮಾಡ್ಯೂಲ್‌ಗಳನ್ನು ಹೊಂದಿತ್ತು. ಭೂಮಿಗೆ ಹಿಂದಿರುಗುವಾಗ ಕಮಾಂಡ್ ಮಾಡ್ಯೂಲ್ ಮಾತ್ರ ಇರುವಂತೆ ವ್ಯವಸ್ಥೆ ಮಾಡಲಾಗಿತ್ತು.
ಅಮೆರಿಕ ಪ್ಲಾನ್ ಹೇಗಿತ್ತು ಗೊತ್ತಾ?
ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಚಂದ್ರಯಾನಕ್ಕೆ ಸಂಬಂ ಧಪಟ್ಟಂತೆ ಅಪಾರ ಪ್ರಮಾಣದ ಸಂಪನ್ಮೂಲಗಳನ್ನು ಒಟ್ಟುಗೂಡಿಸಿತು. ಅದು ಮುಂದೆ ಅಪೋಲೋ ಪ್ರೋಗ್ರಾಂ ಎಂದೇ ಹೆಸರಾಯಿತು. ಇದಕ್ಕಾಗಿ ಸುಮಾರು 40,00,000 ಜನರು ಶ್ರಮಿಸಿದರು. ಚಂದ್ರನ ಮೇಲೆ ಕಾಲಿಡುವ ೩ ವ್ಯಕ್ತಿಗಳನ್ನು ಆಯ್ಕೆ ಮಾಡಿತು. ಬುಝ್ ಅಲ್ಡ್ರಿನ್, ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಮೈಕಲ್ ಕಾಲಿನ್ಸ್ ಐತಿಹಾಸಿಕ ಚಂದ್ರಯಾನಕ್ಕೆ ಆಯ್ಕೆಯಾದರು.
ಮೊದಲ ಪ್ರಯತ್ನದಲ್ಲಿ ಸುಟ್ಟು ಬೂದಿಯಾಗಿದ್ದ 3 ಗಗನಯಾತ್ರಿಗಳು!
ಮಾನವ ಸಹಿತ ಚಂದ್ರಯಾನ ಉದ್ದೇಶದಿಂದ ಅಪೋಲೋ-1 ನೌಕೆಯನ್ನು 1967 ರಲ್ಲಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡು ಕಮಾಂಡ್ ಮಾಡ್ಯೂಲ್‌ಗೆ ಬೆಂಕಿ ಹೊತ್ತಿಕೊಂಡು 3 ಗಗನಯಾತ್ರಿಗಳು ಸಜೀವ ದಹನವಾಗಿದ್ದರು. ಹಾಗಾಗಿ ಮಾನವಸಹಿತ ಚಂದ್ರಯಾನವನ್ನು 3 ತಿಂಗಳ ಕಾಲ ಅಮಾನತಿನಲ್ಲಿಡಲಾಗಿತ್ತು. ಅದಾದ ಬಳಿಕ ಅಪೋಲೋ-8 ಗಗನನೌಕೆಯು 1968 ರ ಕ್ರಿಸ್‌ಮಸ್ ಸಂದರ್ಭ ದಲ್ಲಿ ಮಾನವಸಹಿತ ಚಂದ್ರಯಾನ ಕೈಗೊಂಡಿತ್ತು.
ಅದು ಚಂದ್ರನಲ್ಲಿ ಲ್ಯಾಂಡ್ ಆಗಿರಲಿಲ್ಲ. ಅಂತಿಮವಾಗಿ ಅಪೋಲೋ- 11 ಮಾನವನನ್ನು ಚಂದ್ರನಲ್ಲಿಗೆ ಕೊಂಡೊಯ್ಯಲು ಸಿದ್ಧವಾಗಿತ್ತು. ಆದರೆ ಅಪೋಲೋ- 11 ಮಿಷನ್‌ನಲ್ಲಿದ್ದ ಕಂಪ್ಯೂಟರ್‌ನಲ್ಲಿ ಹಿಂದೆಂ ದೂ ಕೇಳದ ಶಬ್ದವೊಂದು ಕೇಳುತ್ತಿತ್ತು. ಆದಾಗ್ಯೂ ಚಂದ್ರನ ತಲುಪುವಲ್ಲಿ ಅದು ಯಶಸ್ವಿಯಾಯಿತು.
ಚಂದ್ರನಲ್ಲಿಗೆ ಹೋದವರು 12 ಮಂದಿ
ಅಪೋಲೋ-11 ಯಶಸ್ಸಿನ ಬಳಿಕ 12 ಗಗನಯಾತ್ರಿಗಳು ಚಂದ್ರನಲ್ಲಿ ಕಾಲ್ಟಿಟರು. ಆದರೆ ಅವರೆಲ್ಲರೂ ಅಮೆರಿಕದವರು. ಅಪೋಲೋ ಸರಣಿ ಯಾತ್ರೆ ಮೂಲಕ ಅಮೆರಿಕ ಮತ್ತಷ್ಟು ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಿತು.
ಚಾರ್ಲ್ಸ್ ಕಾನ್ರಾಡ್, ಆಲನ್ ಬೀನ್, ಆಲನ್ ಶೆಫರ್ಡ್, ಅಡ್ಗರ್‌ಮಿಶೆಲ್, ಡೇವಿಡ್ ಸ್ಕಾಟ್, ಜೇಮ್ಸ್ ಇರ್ವಿನ್, ಜಾನ್ ಯುಂಗ್, ಚಾರ್ಲ್ಸ್ ಡ್ಯೂಕ್ ಮತ್ತು ಕೊನೆಯದಾಗಿ ೧೯೭೨ರಲ್ಲಿ ಅಪೋಲೋ-೧೭ರ ಮೂಲಕ ಚಂದ್ರನ ಮೇಲೆ ಕಾಲಿಟ್ಟವರು ಹ್ಯಾರಿಸನ್ ಜ್ಯಾಕ್ ಸ್ಮಿತ್. ಅಲ್ಲಿಂದೀಚೆಗೆ ಯಾರೂ ಚಂದ್ರ ಮೇಲೆ ಇಳಿದಿಲ್ಲ.
ಅನುಮಾನಕ್ಕೆ ಉತ್ತರ ಕೊಟ್ಟ ಯುಎಸ್
1969 ರಲ್ಲಿ ಅಮೆರಿಕ ಮಾನವನನ್ನು ಚಂದ್ರನ ಅಂಗಳಕ್ಕೆ ಕಳುಹಿಸಿತ್ತು ಎಂಬುದು ಐತಿಹಾಸಿಕ. ಆದರೆ ಅಮೆರಿಕ ಈ ಬಗ್ಗೆ ಸುಳ್ಳು ಹೇಳುತ್ತಿದೆ ಎಂಬ ಅಪವಾದಗಳೂ ಕೇಳಿಬಂದಿದ್ದವು. ಆದರೆ ಅಪೋಲೋ ಸರಣಿಯ 6 ಲ್ಯೂನಾರ್ ಮಾಡ್ಯೂಲ್‌ಗಳು ಚಂದ್ರನ ಮೇಲೆ ಇಳಿದ ಗುರುತುಗಳು, ಅವರು ಚಂದ್ರನ ಮೇಲೆ ನೆಟ್ಟ ಧ್ವಜ, ಗಗನಯಾತ್ರಿಗಳ ಹೆಜ್ಜೆ ಗುರುತು ಎಲ್ಲವನ್ನೂ 2009 ರಲ್ಲಿ ನಾಸಾ ಕಳುಹಿಸಿದ ಆರ್ಬಿಟರ್ ಉಪಗ್ರಹ ತೆಗೆದ ಹೈ ಡೆಫಿನಿಶನ್ ಫೋಟೋಗಳು ಸ್ಪಷ್ಟವಾಗಿ ದಾಖಲಿಸಿವೆ.