ಇಲ್ಲಿನ ಅಕಾಟೆನಾನ್ಗೋ ಜ್ವಾಲಾಮುಖಿಗೆ ಸಿಡಿಲೊಂದು ಹೊಡೆದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆಗಿದೆ. ಸಿಡಿಲಿನ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಜ್ವಾಲಮುಖಿಯ ಮೇಲೆಲ್ಲಾ ಹೆಮ್ಮರದ ಬೇರಿನಂತೆ ಮನಮೋಹಕ ದೃಶ್ಯ ಸೃಷ್ಟಿಯಾಗಿದೆ.

ಗ್ವಾಟೆಮಾಲಾ: ಇಲ್ಲಿನ ಅಕಾಟೆನಾನ್ಗೋ ಜ್ವಾಲಾಮುಖಿಗೆ ಸಿಡಿಲೊಂದು ಹೊಡೆದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆಗಿದೆ. ಸಿಡಿಲಿನ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಜ್ವಾಲಮುಖಿಯ ಮೇಲೆಲ್ಲಾ ಹೆಮ್ಮರದ ಬೇರಿನಂತೆ ಮನಮೋಹಕ ದೃಶ್ಯ ಸೃಷ್ಟಿಯಾಗಿದೆ. ಈ ಘಟನೆ ಜು.10ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಅಕಾಟೆನ್ಯಾನ್ಗೋ ಜ್ವಾಲಾಮುಖಿ ಮೇಲೆ ದಟ್ಟಮೋಡ ಆವರಿಸಿಕೊಂಡಿದೆ. ಅದರ ಮೇಲೆ ಮಿಂಚು, ಗುಡುಗು, ಸಿಡಿಲು ಅಪ್ಪಳಿಸುತ್ತಿದೆ. ಇದು ಆಪ್ಟಿಕಲ್‌ ಇಲ್ಯೂಷನ್‌ (ಕಂಡಂತೆ ಭಾಸವಾಗುವ)ನಿಂದ ಜ್ವಾಲಾಮುಖಿ ಪರ್ವತದಿಂದ ಆಗಸಕ್ಕೆ ಸಿಡಿಲು ಚಿಮ್ಮುತ್ತಿರುವಂತೆ ಕಾಣುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…