ಚಂದ್ರನ ನೆಲದ ಮೇಲೆ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ ಯಶಸ್ವಿಯಾಗಿ ಇಳಿದಿದ್ದು, ಇಸ್ರೋ ತನ್ನ ಪರಿಶೋಧನೆಗಾಗಿ ಕಳಿಸಿಕೊಟ್ಟ ಎಲ್ಲಾ ಪೇಲೋಡ್‌ಗಳ ಕೆಲಸಗಳನ್ನು ಆರಂಭ ಮಾಡಿದೆ.

ಬೆಂಗಳೂರು (ಆ.24): ಇಡೀ ದೇಶವೇ ಹೆಮ್ಮೆ ಪಡುವಂತೆ ಚಂದ್ರನ ಮೇಲೆ ಯಶಸ್ವಿಯಾಗಿ ವಿಕ್ರಮ್‌ ಲ್ಯಾಂಡರ್‌ ಸ್ಪರ್ಶ ಮಾಡಿದೆ. ಇದರ ಬೆನ್ನಲ್ಲಿಯೇ, ಪ್ರಗ್ಯಾನ್‌ ರೋವರ್‌ ಕೂಡ ವಿಕ್ರಮ್‌ ಲ್ಯಾಂಡರ್‌ನ ರಾಂಪ್‌ ಮೂಲಕ ಚಂದ್ರನ ನೆಲದ ಮೇಲೆ ಕಾಲಿಟ್ಟಿದೆ. ಗುರುವಾರ ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ಪ್ರಗ್ಯಾನ್‌ ರೋವರ್‌ನಲ್ಲಿದ್ದ ಎಲ್ಲಾ ಪೇಲೋಡ್‌ಗಳ ಕಾರ್ಯಾರಂಭ ಮಾಡಲಾಗಿದೆ. ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ 14 ದಿನ ಪರಿಶೋಧನೆ ಕೆಲಸಗಳನ್ನು ಮಾಡಲಿದೆ. ಈಗಾಗಲೇ ನಿಗದಿ ಮಾಡಿರುವ ವೇಳಾಪಟ್ಟಿಯಂತೆ ಕೆಲಸ ಮಾಡಲಿದ್ದು, ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್ ಹಾಗೂ ಪ್ರಪಲ್ಶನ್‌ ಮಾಡ್ಯುಲ್‌ನ ಎಲ್ಲಾ ವ್ಯವಸ್ಥೆಗಳು ಅತ್ಯುತ್ತಮವಾಗಿ ಕಾರ್ಯನಿವರ್ಹಿಸುತ್ತಿದೆ ಎಂದು ಮಾಹಿತಿ ನೀಡಿದೆ. ವಿಕ್ರಮ್‌ ಲ್ಯಾಂಡ್‌ ಮಾಡ್ಯುಲ್‌ನಲ್ಲಿ ಇಡಲಾಗಿರುವ ಇಲ್ಸಾ, ರಂಭಾ ಹಾಗೂ ಚಾಸ್ಟೆ ವ್ಯವಸ್ಥೆಯನ್ನು ಗುರುವಾರ ಚಾಲನೆ ಮಾಡಲಾಗಿದೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಕೂಡ ಯಶಸ್ವಿಯಾಗಿ ಪ್ರಾರಂಭವಾಗಿದೆ. ಕಳೆದ ಭಾನುವಾರ ಪ್ರಪಲ್ಶನ್‌ ಮಾಡ್ಯುಲ್‌ನಲ್ಲಿರುವ ಶೇಪ್‌ ಪೇಲೋಡ್‌ನ ವ್ಯವಸ್ಥೆಯನ್ನು ಸ್ಟಾರ್ಟ್‌ ಮಾಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಶೇಪ್‌ ಸಿಸ್ಟಮ್‌: ಕಳೆದ ಭಾನುವಾರ ಇದರ ಚಾಲನೆ ಮಾಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಈ ವ್ಯವಸ್ಥೆ ಚಂದ್ರನ ಮೇಲಿಲ್ಲ. ಇದು ಇರೋದು ಪ್ರಪಲ್ಶನ್‌ ಮಾಡ್ಯುಲ್‌ನಲ್ಲಿ ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿ ಬಾಹ್ಯಾಕಾಶ ನೌಕೆಯ 'ಶೇಪ್' ಪೇಲೋಡ್ ಹೇಳುವುದಾದರೆ, ಇದರ ಸಂಕ್ಷಿಪ್ತ ರೂಪವು ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ ಅನ್ನು ಸೂಚಿಸುತ್ತದೆ. ಇದು ಚಂದ್ರಯಾನ-3 ಮಿಷನ್‌ನಲ್ಲಿ ಪ್ರಾಯೋಗಿಕ ಪೇಲೋಡ್ ಆಗಿದ್ದು, ಇದು ಅತಿಗೆಂಪು ತರಂಗಾಂತರದ ವ್ಯಾಪ್ತಿಯಲ್ಲಿರುವ ಭೂಮಿಯ ಸ್ಪೆಕ್ಟ್ರೋ-ಪೋಲಾರಿಮೆಟ್ರಿಕ್ ಸಹಿಯನ್ನು ಅಧ್ಯಯನ ಮಾಡುತ್ತದೆ ಎಂದು ಇಸ್ರೋ ಹೇಳಿದೆ.

ರಂಭಾ: ರೇಡಿಯೋ ಅನ್ಯಾಟಮಿ ಆಫ್ ಮೂನ್ ಬೌಂಡ್ ಹೈಪರ್ಸೆನ್ಸಿಟಿವ್ ಅಯಾನೋಸ್ಫಿಯರ್ ಮತ್ತು ಅಟ್ಮಾಸ್ಫಿಯರ್ (ರಾಮ್‌ಭಾ) ಸಮೀಪದ ಮೇಲ್ಮೈ ಪ್ಲಾಸ್ಮಾ (ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳು) ಸಾಂದ್ರತೆಯನ್ನು ಮತ್ತು ಸಮಯದೊಂದಿಗೆ ಅದರ ಬದಲಾವಣೆಗಳನ್ನು ಅಳೆಯುತ್ತದೆ. ಇದು ಪ್ರಗ್ಯಾನ್‌ ರೋವರ್‌ನಲ್ಲಿದೆ.

ಚಾಸ್ಟೆ: ಚಂದ್ರನ ಮೇಲ್ಮೈ ಥರ್ಮೋ ಭೌತಿಕ ಪ್ರಯೋಗ (ChaSTE) ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನಗಳನ್ನು ಕೈಗೊಳ್ಳುತ್ತದೆ. ಇದು ಕೂಡ ಪ್ರಗ್ಯಾನ್‌ ರೋವರ್‌ನಲ್ಲಿದೆ.

Moon Mission: ಭಾರತವಾಯ್ತು ಈಗ ಜಪಾನ್‌ನ ಸರದಿ, ಆ.26ಕ್ಕೆ 'ಸ್ಲಿಮ್‌' ಉಡಾವಣೆ ಮಾಡಲಿರುವ ಜಾಕ್ಸಾ!

ಇಲ್ಸಾ: ಚಂದ್ರನ ಭೂಕಂಪನ ಚಟುವಟಿಕೆಯ ಸಾಧನ (ILSA) ಲ್ಯಾಂಡಿಂಗ್ ಪ್ರದೇಶದ ಸುತ್ತಲೂ ಭೂಕಂಪನವನ್ನು ಅಳೆಯುತ್ತದೆ. ಚಂದ್ರನ ಹೊರಪದರ ಮತ್ತು ನಿಲುವಂಗಿಯ ರಚನೆಯನ್ನು ವಿವರಿಸುತ್ತದೆ. ಇದೂ ಕೂಡ ಪ್ರಗ್ಯಾನ್‌ ರೋವರ್‌ನ ಭಾಗವಾಗಿದೆ.

Nehru Point in Moon: ಭೂಮಿಯ ಮೇಲೆ ಇಂದಿರಾ ಪಾಯಿಂಟ್‌, ಚಂದ್ರನ ಮೇಲಿದೆ ನೆಹರು ಪಾಯಿಂಟ್‌!

Scroll to load tweet…