ಕೊನೆಗೂ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿದ ಸುನಿತಾ ವಿಲಿಯಮ್ಸ್, ಡಾನ್ಸ್ ಮಾಡೋ ವಿಡಿಯೋ ವೈರಲ್
ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರ ತಲುಪಿದ ಸುನಿತಾ ವಿಲಿಯಮ್ಸ್. ಕೆಲವು ತಾಂತ್ರಿಕ ಅಡಚಣೆಗಳ ಬಳಿಕ ಯಶಸ್ವಿ ಎಂಟ್ರಿ ಕೊಟ್ಟಿದ್ದು, ಈ ಖುಷಿಯಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೂಸ್ಟನ್: ನಾಸಾ ಪ್ರಾಯೋಜಕತ್ವದಲ್ಲಿ ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶ ಪ್ರಯಾಣ ಕೈಗೊಂಡಿರುವ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಡೆತಡೆಗಳನ್ನು ಮೀರಿ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ್ದಾರೆ. 1 ವಾರ ಕಾಲ ಅಲ್ಲಿಯೇ ಉಳಿಯಲ್ಲಿದ್ದಾರೆ. ಬೋಯಿಂಗ್ ಸ್ಟಾರ್‌ಲೈನರ್ ನೌಕೆ ಅಮೆರಿಕ ಕಾಲಮಾನ ಗುರುವಾರ ಮಧ್ಯಾಹ್ನ 1.34ಕ್ಕೆ ಸರಿಯಾಗಿ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿತು.
ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶಕ್ಕೆ ಹೋಗುವ ಯೋಜನೆಯಲ್ಲಿ ಸತತ 2 ವೈಫಲ್ಯಗಳನ್ನು ಕಂಡಿತ್ತು. ಕಳೆದ ತಿಂಗಳು 6ರಂದೇ ಬಾಹ್ಯಾಕಾಶಕ್ಕೆ ತೆರಳಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ನೆರವೇರಿರಲಿಲ್ಲ. ಕಳೆದ ಶನಿವಾರ ಪ್ರಯಾಣಿಸಬೇಕಿತ್ತು. ಆದರೆ ಅಲ್ಲಿಯೂ ಕಂಪ್ಯೂಟರ್ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಆದರೆ ಎರಡು ಸತತ ವೈಫಲ್ಯ ಮೀರಿ ಸ್ಟಾರ್‌ಲೈನರ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ತಲುಪಿದೆ.
ಮೈಸೂರು ಯುವ ದಸರಾದಲ್ಲಿ ಚಂದನ್- ನಿವೇದಿತಾ ಪ್ರಪೋಸ್, ಅಂದಿನ ಸಚಿವರ ಶಾಪ ತಟ್ಟಿತೇ!?
ಸಂಭ್ರಮ: ಬಾಹ್ಯಾಕಾಶ ನಿಲ್ದಾಣ ತಲುಪಿದ್ದಕ್ಕೆ ಖುಷಿ ಹಂಚಿಕೊಂಡಿರುವ ಸುನಿತಾ, ತನ್ನ ಕುಟುಂಬದವರು ಮತ್ತು ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ. ‘ಇಲ್ಲಿ ನಾವು ಮತ್ತೊಂದು ಕುಟುಂಬವನ್ನು ಕಂಡುಕೊಂಡಿದ್ದೇವೆ. ಇದು ಅದ್ಭುತವಾಗಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ. ಈ ಖುಷಿಯಲ್ಲಿ ಅವರು ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಇತರ 7 ಸಿಬ್ಬಂದಿ ಇಬ್ಬರನ್ನೂ ಸ್ವಾಗತಿಸಿದ್ದಾರೆ.
ಮೆಕ್ಸಿಕೋ ವ್ಯಕ್ತಿ ಹಕ್ಕಿಜ್ವರಕ್ಕೆ ಬಲಿ : ವಿಶ್ವದಲ್ಲೇ ಇಂಥ ಪ್ರಕರಣ ಫಸ್ಟ್
58 ವರ್ಷದ ವಿಲಿಯಮ್ಸ್ ಮೂರನೇ ಬಾರಿಗೆ ತನ್ನ ಸಹಪಾಠಿ 61 ವರ್ಷದ ವಿಲ್ಮೋರ್ ಜೊತೆಗೆ ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ವಿಲಿಯಮ್ಸ್ ಅವರು ಮೇ 1987 ರಲ್ಲಿ ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಯುನೈಟೆಡ್ ಸ್ಟೇಟ್ಸ್ ನೇವಿಯಲ್ಲಿ ಎನ್ಸೈನ್ ಆಗಿ ತಮ್ಮ ಕಮಿಷನ್ ಪಡೆದರು ಮತ್ತು 1998 ರಲ್ಲಿ ನಾಸಾದಿಂದ ಗಗನಯಾತ್ರಿಯಾಗಿ ಆಯ್ಕೆಯಾದರು.
ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ (ಯುಎಸ್‌ಎ) ಉಡಾವಣೆಯಾದ ಸುಮಾರು 26 ಗಂಟೆಗಳ ನಂತರ ಅವರು ಬಾಹ್ಯಾಕಾಶ ನಿಲ್ದಾಣ ತಲುಪಿದ್ದು, 7 ಸಿಬ್ಬಂದಿ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಐಎಸ್‌ಎಸ್‌ನಲ್ಲಿ ಸ್ವಾಗತಿಸಿದರು.